ಬಿಜೆಪಿ ಜನಪ್ರಿಯತೆ ಕಳೆದುಕೊಂಡಿದೆ ಎಂದ ಮೋದಿ ಫ್ರೆಂಡ್ ರಜನಿ
ಚೆನ್ನೈ, ಡಿಸೆಂಬರ್ 11: ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವು ಬಿಜೆಪಿಯು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿರುವುದನ್ನು ತೋರಿಸುತ್ತಿದೆ ಎಂದು ನಟ-ರಾಜಕಾರಣಿ, ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಎಂದೇ ಗುರುತಿಸಿಕೊಳ್ಳುವ ರಜನೀಕಾಂತ್ ಮಂಗಳವಾರ ಹೇಳಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ರಜನೀಕಾಂತ್, ಚುನಾವಣೆಯ ಫಲಿತಾಂಶವು ಬಿಜೆಪಿ ಪಾಲಿಗೆ ಪ್ರಮುಖ ಹಿನ್ನಡೆ ಎಂದು ಬಣ್ಣಿಸಿದ್ದಾರೆ. ಚುನಾವಣೆ ಫಲಿತಾಂಶ ನೋಡಿ ಹೇಳುವುದಾದರೆ ಬಿಜೆಪಿಯು ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂದಿದ್ದು, ನರೇಂದ್ರ ಮೋದಿಯವರು ಪ್ರಭಾವಿ ನಾಯಕ ಎಂದು ಈಚೆಗಷ್ಟೇ ರಜನೀಕಾಂತ್ ಹೇಳಿದ್ದರು.
ಒಂದು ತಿಂಗಳ ಹಿಂದಷ್ಟೇ, ವಿರೋಧ ಪಕ್ಷಗಳೆಲ್ಲ ಸೇರಿ ಹೇಳುತ್ತಿವೆ ಅಂದರೆ ಬಿಜೆಪಿ ಅಪಾಯಕಾರಿಯೇ ಇರಬೇಕು ಎಂದಿದ್ದರು. ಅದಾದ ಮರು ದಿನ ಸ್ಪಷ್ಟನೆ ನೀಡಿದ್ದ ಅವರು, ವಿರೋಧ ಪಕ್ಷಗಳಿಗಿಂತ ಪ್ರಧಾನಿ ಬಲಶಾಲಿಗಳು ಎಂಬ ಮಾತನಾಡಿದ್ದರು.

ಈಚೆಗಷ್ಟೇ ರಜನೀಕಾಂತ್ ಅಭಿನಯದ 2.0 ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿ, ಭಾರೀ ಮೆಚ್ಚುಗೆ ಗಳಿಸಿದೆ. ಇನ್ನು ರಜನೀ ತಮ್ಮದೇ ಸ್ವಂತ ಪಕ್ಷ ಶುರು ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ.












Click it and Unblock the Notifications