ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಮೇ19 : ತಮಿಳುನಾಡಿನಲ್ಲಿ ಮತ್ತೊಮ್ಮೆ ಎಐಎಡಿಎಂಕೆ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. 'ಅಮ್ಮ' ಜಯಲಲಿತಾ ಅಧಿಕಾರಕ್ಕೆ ಮತ್ತೆ ಮರಳಿದ್ದಾರೆ. ಈ ಮೂಲಕ ಎಲ್ಲಾ ಸಮೀಕ್ಷೆಗಳ ಫಲಿತಾಂಶವನ್ನು ಧೂಳಿಪಟ ಮಾಡಿ, ದಾಖಲೆಯ ಜಯ ದಾಖಲಿಸಿದ್ದಾರೆ.[ವಿಜಯೋತ್ಸಾಹದ ಚಿತ್ರಗಳು]

234 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರ ಬಿಟ್ಟು ಮಿಕ್ಕ ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರ ಬಂದಿದ್ದು, ಎಡಿಎಂಕೆ 151ಕ್ಕೂ ಅಧಿಕ ಸ್ಥಾನದಲ್ಲಿ ಜಯಭೇರಿ ಬಾರಿಸಲು ಸಜ್ಜಾಗಿದೆ. ಡಿಎಂಕೆ ಪ್ಲಸ್ 76ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದು, ಜಯಾ ಮುಂದೆ ಕರುಣಾನಿಧಿ ತಲೆಬಾಗಿಸುವಂತಾಗಿದೆ. [ಜಯಮ್ಮನ 1 ರು. ಇಡ್ಲಿ ಸಾಂಬಾರಿಗೆ ಮರುಳಾದ ಮತದಾರರು]

Amma returns in Tamil Nadu creates history, proves everyone wrong

ಐತಿಹಾಸಿಕ ಜಯ: 1984ರ ನಂತರ ಇದೇ ಮೊದಲ ಬಾರಿಗೆ ಎರಡನೇ ಅವಧಿಗೆ ಎಐಎಡಿಎಂಕೆ ಅಧಿಕಾರ ಹಿಡಿಯುವ ಮೂಲಕ ದಾಖಲೆ ಬರೆದಿದೆ. ಡಿಎಂಕೆ ಪರ ಬಂದಿದ್ದ ಎಲ್ಲಾ ಸಮೀಕ್ಷೆ ವರದಿಗಳನ್ನು ಅಮ್ಮ ಹವಾ ಸುನಾಮಿಯಂತೆ ಕೊಚ್ಚಿ ಹೊರಕ್ಕೆ ಹಾಕಿವೆ.[ಹಗರಣಗಳ ನಡುವೆಯೂ ಗಹಗಹಿಸಿದ ಮಮತಾ ಬ್ಯಾನರ್ಜಿ]

ಅಮ್ಮ ಗೆಲುವಿಗೆ ಏನು ಕಾರಣ?: ಮಹಿಳಾ ಮತದಾರರು ಜಯಲಲಿತಾ ಅವರ ಕೈಹಿಡಿದಿದ್ದೇ ಪಕ್ಷದ ಗೆಲುವಿಗೆ ಕಾರಣವಾಗಿದೆ. ಎಐಎಡಿಎಂಕೆ ನಿರೀಕ್ಷೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಮತ ಹಾಕಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಸಿಕ್ಕಿದೆ. ತನ್ನ ವೋಟ್ ಬ್ಯಾಂಕ್ ಉಳಿಸಿಕೊಳ್ಳುವ ಜಯಾ ಅವರ ತಂತ್ರ ಫಲಿಸಿದೆ.

ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ, ಕೋರ್ಟ್ ಕಚೇರಿ ಎಂದು ಜಯಲಲಿತಾ ಅವರು ಹೆಚ್ಚಾಗಿ ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಜಯಾ ಕರುಣಿಸಿದ ಜನಪ್ರಿಯ ಯೋಜನೆಗಳು ಕೂಡಾ ಗೇಲಿಗೆ ಒಳಗಾಗಿತ್ತು.

ಚೆನ್ನೈ ಪ್ರವಾಹ ಸಂದರ್ಭದಲ್ಲಿ ಅಗತ್ಯ ನೆರವು ನೀಡಿಲ್ಲ ಎಂಬ ದೂರು ಕೇಳಿ ಬಂದಿತ್ತು. ಆದರೆ, ಜಯಾರನ್ನು ಮತ್ತೆ ಅಧಿಕಾರಕ್ಕೆ ಕರೆ ತಂದಿದ್ದು ಇದೇ ಪ್ರವಾಹ ಎಂದರೆ ತಪ್ಪಾಗಲಾರದು. ಕಾದು ನೋಡುವ ತಂತ್ರದ ಮೂಲಕ ಜಯಾ ಅವರ ತಾಳ್ಮೆ ಫಲ ನೀಡಿದೆ.

ಜಯಲಲಿತಾ ಅವರ ಹಗರಣ, ಕೇಸ್ ಗಳ ಬಗ್ಗೆ ಕರ್ನಾಟಕ ಬಿಟ್ಟರೆ ಯಾರೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಜನರಿಗೆ ಡಿಎಂಕೆ ಮೇಲೆ ಯಾವ ರೀತಿಯ ನಂಬಿಕೆಯೂ ಹುಟ್ಟಲಿಲ್ಲ. ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೂ ಆ ಪಕ್ಷದಲ್ಲಿ ಸರಿಯಾದ ಉತ್ತರವಿಲ್ಲ. ಹೀಗಾಗಿ ಜಯಾ ಮತ್ತೆ ಜಯಭೇರಿ ಬಾರಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With the AIDMK heading towards a victory in Tamil Nadu, history is set to be created. Going by the numbers J Jayalalithaa is set to return as the Chief Minister of Tamil Nadu for a second term.
Please Wait while comments are loading...