ಅಮ್ಮಾಗೆ ಬೆಂಬಲ, ತಮಿಳು ಚಿತ್ರೋದ್ಯಮ ಬಂದ್

ಚೆನ್ನೈ, ಸೆ. 30 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ತಮಿಳು ಚಿತ್ರರಂಗ ಬೆಂಬಲ ನೀಡಿದೆ. ಜಯಲಲಿತಾ ಅವರಿಗೆ ಶಿಕ್ಷೆ ಆಗಿದ್ದನ್ನು ಖಂಡಿಸಿ ತಮಿಳು ಚಿತ್ರೋದ್ಯಮ ಮಂಗಳವಾರ ಬಂದ್‌ ನಡೆಸುತ್ತಿದೆ. ಇಂದು ಬೆಳಗ್ಗೆಯಿಂದ ಸಂಜೆ 6 ಗಂಟೆಯ ತನಕ ಚಿತ್ರಪ್ರದರ್ಶನ ರದ್ದುಗೊಳಿಸಲಾಗಿದೆ.

ಜಯಲಲಿತಾ ಅವರಿಗೆ ಬೆಂಬಲ ನೀಡಿರುವ ನಟ ನಟಿಯರು, ಚಿತ್ರ ಪ್ರದರ್ಶಕರು ಚೆಪಾಕ್ ಕ್ರೀಡಾಂಗಣದಲ್ಲಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿರಿಯ ನಟ ಶರತ್ ಕುಮಾರ್ ಸೇರಿದಂತೆ ಹಲವು ನಟ-ನಟಿಯರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರೀಕರಣ ಸೇರಿದಂತೆ ಕಾಲಿವುಡ್‌ನ‌ ಎಲ್ಲಾ ಚಟುವಟಿಕೆಗಳು ಸಂರ್ಪೂಣವಾಗಿ ಸ್ಥಗಿತಗೊಂಡಿವೆ.

film screenings

ತಮಿಳುನಾಡಿನಾದ್ಯಂತೆ ಮಂಗಳವಾರ ಚಿತ್ರ ಪ್ರದರ್ಶನವನ್ನು ಬೆಳಗ್ಗೆ 9ರಿಂದ ಸಂಜೆ 6ರ ತನಕ ರದ್ದುಪಡಿಸಲಾಗಿದೆ. ಚಿತ್ರಮಂದಿರದ ಮಾಲೀಕರು, ಪ್ರದರ್ಶಕರು, ವಿತರಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. [ಜಯಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ]

ಇತ್ತ ಬೆಂಗಳೂರಿನಲ್ಲಿ ಜಯಲಲಿತಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ ಕರ್ನಾಟಕ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಅ.6ರ ಸೋಮವಾರಕ್ಕೆ ಮುಂದೂಡಿದೆ. [ತಮಿಳು ಚಿತ್ರರಂಗದ ಪ್ರತಿಭಟನೆ, ಚಿತ್ರಗಳು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+