ಸೇಲಂನಲ್ಲಿ 13 ವರ್ಷದ ಬಾಲಕಿಯ ರುಂಡ ಕಡಿದು ರಸ್ತೆಗೆ ಎಸೆದ ಧೂರ್ತ
ಸೇಲಂ, ಅಕ್ಟೋಬರ್ 24: ವಿದ್ಯಾರ್ಥಿನಿಯ ರುಂಡ ಕಡಿದು ರಸ್ತೆಗೆ ಎಸೆದು ಹೋಗಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಮೃತ ಬಾಲಕಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಬಾಲಕಿ ರಾಜಲಕ್ಷ್ಮೀ ದಿನ ಶಾಲೆಗೆ ಹೋಗುವಾಗ ಪಕ್ಕದ ಮನೆಯಲ್ಲಿ ವಾಸವಾಗಿದ್ದ ದಿನೇಶ್ ಕುಮಾರ್ ಎಂಬಾತ ಚುಡಾಯಿಸುತ್ತಿದ್ದ, ಆಕೆಯನ್ನು ಹಿಂಬಾಲಿಸಿಕೊಂಡು ಶಾಲೆಯವರೆಗೂ ಹೋಗುತ್ತಿದ್ದ, ಆಕೆ ಮನೆಯಿಂದ ಹೊರಗಡೆ ಕಾಲಿಡಲು ಹಿಂಜರಿಯುವಂತೆ ಮಾಡಿದ್ದ.
ಆಕೆ ತಲವೈಪತ್ತಿ ನಿವಾಸಿಯಾಗಿದ್ದಳು, ಎಂದಿನಂತೆ ಆತ ಕಂಠಪೂರ್ತಿಯಾಗಿ ಕುಡಿದಿದ್ದ, ಬಾಲಕಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮನೆಯೊಳಗೆ ನುಗ್ಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನ ಈ ವೇಳೆ ಆಕೆ ಜೋರಾಗಿ ಕೂಗಿಕೊಂಡಿದ್ದಾಳೆ. ಬಾಲಕಿಯ ತಾಯಿ ಮನೆಗೆ ಬರುತ್ತಿರುವುದನ್ನು ನೋಡಿದ ದಿನೇಶ್ ಶಸ್ತ್ರಾಸ್ತರ ತೆಗೆದುಕೊಂಡು ಬಾಲಕಿಯ ರುಂಡವನ್ನು ಕತ್ತರಿಸಿ ರಸ್ತೆಗೆ ಎಸೆದಿದ್ದಾನೆ.

ತಾಯಿಗೆ ಈ ವಿಷಯ ತಿಳಿದು ಕಂಗಾಲಾಗಿ ನೆಲಕ್ಕೆ ಕುಸಿದಿದ್ದಾರೆ, ಕುಡಿದ ಅಮನಲಿನಲ್ಲಿ ಮಾಡಿದ ಕೃತ್ಯ ಒಂದು ಜೀವವನ್ನೇ ಬಲಿತೆಗೆದುಕೊಂಡಿತು. ಅತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ವೇಳೆ ದಿನೇಶ್ ಪಾನಮತ್ತನಾಗಿದ್ದು, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆದರೆ ನಿಜವಾದ ಕಾರಣ ಇನ್ನೂ ಹೊರಬರಬೇಕಿದೆ.












Click it and Unblock the Notifications