ನಟ- ರಾಜಕಾರಣಿ ವಿಜಯಕಾಂತ್ ರ 100 ಕೋಟಿ ಮೌಲ್ಯದ ಆಸ್ತಿ ಹರಾಜಿಗೆ
ಚೆನ್ನೈ, ಜೂನ್ 21: ನಟ- ರಾಜಕಾರಣಿ ವಿಜಯಕಾಂತ್ ರ ಮನೆಯೂ ಸೇರಿದಂತೆ ನೂರು ಕೋಟಿ ಮೌಲ್ಯದ ಮೂರು ಆಸ್ತಿಗಳನ್ನು ಹರಾಜು ಹಾಕಲಾಗುತ್ತಿದೆ. ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗೆ ವಿಜಯಕಾಂತ್ ಐದೂವರೆ ಕೋಟಿ ರುಪಾಯಿ ಪಾವತಿಸಬೇಕಿದೆ. ಅದಕ್ಕಾಗಿ ಆಸ್ತಿ ಹರಾಜಿಗೆ ಬಂದಿದೆ.
ವಿಜಯಕಾಂತ್ ಅವರ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷವು ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ವಿಜಯಕಾಂತ್ ಮತ್ತು ಅವರ ಪತ್ನಿ ನೂರು ಕೋಟಿ ಮೌಲ್ಯದ ತಮ್ಮ ಆಸ್ತಿಯನ್ನು ಅಡಮಾನ ಮಾಡಿ, ಆಂಡಾಳ್ ಅಳಗರ್ ಎಜುಕೇಷನಲ್ ಟ್ರಸ್ಟ್ ಗಾಗಿ ಸಾಲ ಪಡೆದುಕೊಂಡಿದ್ದರು. ಆ ಆಸ್ತಿಗಳ ಹರಾಜು ಜುಲೈ ಇಪ್ಪತ್ತಾರನೇ ತಾರೀಕು ನಡೆಯಲಿದೆ.

ಸಾಲಿಗ್ರಾಮಮ್ ನಲ್ಲಿ ಈಗ ತಮ್ಮ ಪತ್ನಿ, ಇಬ್ಬರು ಮಕ್ಕಳ ಜತೆಗೆ ವಿಜಯಕಾಂತ್ ವಾಸವಿರುವ ಮನೆಯೂ ಈ ಆಸ್ತಿಯಲ್ಲಿ ಸೇರಿದೆ. ಮತ್ತು ಇದೇ ಪ್ರದೇಶದಲ್ಲಿನ ವಸತಿ ನಿವೇಶನ ಹಾಗೂ ಚೆನ್ನೈ- ತಿರುಚಿರಾಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕಾಲೇಜು ಸಹ ಒಳಗೊಂಡಿದೆ.












Click it and Unblock the Notifications