ನನ್ನನ್ನು ಮಾತ್ರವಲ್ಲ, ಎಲ್ಲರನ್ನೂ ರಕ್ಷಿಸುತ್ತದೆ; ಲಸಿಕೆ ಪಡೆದುಕೊಂಡ ನಟ ಕಮಲ್ ಹಾಸನ್

ಚೆನ್ನೈ, ಮಾರ್ಚ್ 02: ನಟ ಹಾಗೂ ಮಕ್ಕಳ ನೀದಿಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಮಂಗಳವಾರ ಚೆನ್ನೈನಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡರು.

ಲಸಿಕೆ ಪಡೆದುಕೊಂಡ ನಂತರ, "ಕೊರೊನಾ ಲಸಿಕೆ ನನ್ನನ್ನು ಮಾತ್ರವಲ್ಲ, ನನ್ನೊಂದಿಗೆ ಇರುವವರನ್ನೂ ರಕ್ಷಿಸುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಭರದ ಸಿದ್ಧತೆ ನಡೆದಿದೆ. ಚುನಾವಣೆಯಲ್ಲಿ ಮಕ್ಕಳ ನೀದಿಮಯ್ಯಂ ಪಕ್ಷ ಸ್ಪರ್ಧಿಸುವುದಾಗಿ ಕಮಲ್ ಹಾಸನ್ ಘೋಷಿಸಿದ್ದು, ಹೊಸ ಕಾರ್ಯತಂತ್ರಗಳೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಕಮಲ್ ಹಾಸನ್ ಕಾಲಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದೀಗ ಗುಣಮುಖರಾಗಿದ್ದು, ರಾಜಕೀಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

Actor And Politician Kamal Hassan Recieves Corona Vaccine At Chennai

ಮಾರ್ಚ್ 01ರಿಂದ ಭಾರತದಲ್ಲಿ ಎರಡನೇ ಹಂತದ ಕೊರೊನಾ ಲಸಿಕಾ ಅಭಿಯಾನ ಆರಂಭಗೊಂಡಿದ್ದು, 60 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದೆ. 50 ವರ್ಷ ಮೇಲ್ಪಟ್ಟವರಿಗೆ ಈ ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಹಲವು ರಾಜಕಾರಣಿಗಳು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್ ಒಳಗೊಂಡಂತೆ ಹಲವು ಬಿಜೆಪಿ ನಾಯಕರು ಲಸಿಕೆ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+