ನಗ್ನ ಪೋಸ್ಟರ್: ನಟಿ ಅಮಲಾ ವಿರುದ್ಧ ಸಿಡಿದೆದ್ದ ರಾಜೇಶ್ವರಿ ಪ್ರಿಯಾ
ಚೆನ್ನೈ, ಜುಲೈ 20: ಬಹುಭಾಷಾ ನಟಿ ಅಮಲಾ ಅಭಿನಯದ ಚಿತ್ರ 'ಆಡೈ' ಚಿತ್ರದ ವಿರುದ್ಧ ರಾಜಕಾರಣಿ ರಾಜೇಶ್ವರಿ ಪ್ರಿಯಾ ಅವರು ಪೊಲೀಸರು ದೂರು ನೀಡಿದ್ದಾರೆ.
ನಟಿ ಅಮಲಾ ಪೌಲ್ ನಗ್ನತೆಯನ್ನು ಪ್ರಚಾರ ಮಾಡುತ್ತಿದ್ದಾರೆ, ಚಿತ್ರದ ಪೋಸ್ಟರ್ ಗಳಿಂದ ತಮಿಳುನಾಡಿನ ಸಂಸ್ಕೃತಿಯನ್ನು ಹಾಳಾಗುತ್ತಿದೆ. ಎಂದು ಅನೈತು ಮಕ್ಕಲ್ ಕಚ್ಚಿ ಸ್ಥಾಪಕಿ ರಾಜೇಶ್ವರಿ ಪ್ರಿಯಾ ಅವರು ಡಿಜಿಪಿಗೆ ದೂರು ದಾಖಲಿಸಿದ್ದಾರೆ.
ಹೊಸ ಸಿನಿಮಾ ಟೀಸರ್ ನಲ್ಲಿ ನಗ್ನವಾದ ಅಮಲಾ ಪೌಲ್ !
ಚಿತ್ರದ ಬಿಡುಗಡೆಗೆ ತಡೆ ನೀಡಲು ಸಾಧ್ಯವಾಗುತ್ತಿಲ್ಲ, ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೇಟ್ ಪಡೆದು ಪ್ರದರ್ಶನ ಕಂಡಿದೆ. ಆದರೆ, ಚಿತ್ರದ ಪೋಸ್ಟರ್ ಗಳು ಪ್ರಚೋದನಕಾರಿಯಾಗಿದ್ದು, ಇದರಿಂದ ಮಕ್ಕಳು ಹಾಳಾಗುತ್ತಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಚಿತ್ರದಲ್ಲಿ ನಗ್ನವಾಗಿ ಒಂದು ದೃಶ್ಯದಲ್ಲಿ ನಟಿ ಅಮಲಾ ಕಾಣಿಸಿಕೊಂಡಿದ್ದಾರೆ. ಇದನ್ನೇ ಪೋಸ್ಟರ್ ಮಾಡಿ ಚಿತ್ರದ ಪ್ರಚಾರಕ್ಕೆ ಬಳಸಲಾಗಿದೆ. "ಆಕೆ ಈ ರಾಜ್ಯದವಳಲ್ಲ, ಆಕೆ ದುಡ್ಡು, ಹೆಸರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ, ಅವರಿಗೆ ಇಲ್ಲಿ ನೆಲದ ಸಂಸ್ಕೃತಿ ಅರ್ಥವಾಗುವುದಿಲ್ಲ" ಎಂದು ಅಮಲಾ ವಿರುದ್ಧ ಕೂಡಾ ರಾಜೇಶ್ವರಿ ಕಿಡಿಕಾರಿದ್ದಾರೆ.
ಅಮಲಾ ಪೌಲ್ ನಗ್ನ ನಟನೆ: ವರ್ಮಾ ಮಾಡಿದ ಟ್ವೀಟ್ ಏನು?
ಈ ನಡುವೆ ಚಿತ್ರಕ್ಕೆ ಇನ್ನೊಂದು ವಿಘ್ನ ಎದುರಾಗಿತ್ತು. ತಾಂತ್ರಿಕ ಸಮಸ್ಯೆಯಿಂದ ಚೆನ್ನೈನ ಹಲವೆಡೆ ಮಾರ್ನಿಂಗ್ ಶೋ ಸ್ಥಗಿತಗೊಂಡಿತ್ತು. ಚಿತ್ರವನ್ನು ಎನ್ ಕ್ರಿಪ್ಟ್ ಮಾಡಲು ಬಳಸುವ ಕೀ ಡೆಲಿವರಿ ಮೆಸೇಜ್ ಸಿಗದ ಕಾರಣ ಹಲವು ಚಿತ್ರಮಂದಿರಗಳಲ್ಲಿ ಮೊದಲ ಶೋ ಭಾಗ್ಯ ಇರಲಿಲ್ಲ. ಇನ್ನು 700ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡಿರುವ ಈ ಮಹಿಳಾ ಪ್ರಧಾನ ಚಿತ್ರದ ಬಗ್ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.












Click it and Unblock the Notifications