ಅಪ್ಪ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ: ಸಿಧು ಪುತ್ರಿ ರಾಬಿಯಾ
ಚಂಡೀಗಢ, ಫೆಬ್ರವರಿ 11: ಪಂಜಾಬ್ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಇದೀಗ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಪುತ್ರಿಯೂ ತಂದೆಯ ಪರ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಚುನಾವಣೆಯಲ್ಲಿ ಗೆಲ್ಲುವವರೆಗೂ ತತಾನು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳೆ. ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ರಾಬಿಯಾ ಅವರ ಮಾತುಗಳು ತೀಕ್ಷ್ಣವಾಗಿತ್ತು.
ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ತಂದೆಯವರನ್ನು ಸಿಲುಕಿಸಲು ಯತ್ನಿಸುತ್ತಿದ್ದಾರೆ. ಆದರೆ ಸಿಧು ಗೆದ್ದು ಬಂದರೆ ಮಾಫಿಯಾ ರಾಜ್ಯ ಏನಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಅದಕ್ಕಾಗಿಯೇ ಎಲ್ಲರೂ ಸಿದ್ದು ಅವರನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ನಿಜವಾದ ಮನುಷ್ಯ ಮತ್ತು ಅವರಿಗೆ ಗೆಲುವು ಖಚಿತ ಎಂದು ರಾಬಿಯಾ ಹೇಳಿದ್ದಾಳೆ.

ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನೇ ಮತ್ತೆ ಟಾರ್ಗೆಟ್ ಮಾಡಿದ ರಾಬಿಯಾ, 133 ಕೋಟಿಯ ಒಡೆಯ ಬಡವ ಹೇಗೆ ಹೇಗೆ ಎಂದು ಪ್ರಶ್ನಿಸಿದರು. ಚರಣ್‌ಜಿತ್ ಸಿಂಗ್ ಚನ್ನಿ ಅವರ ಬ್ಯಾಂಕ್ ಖಾತೆಯನ್ನು ತೆಗೆದು ನೋಡಿ ಹಾಗೆಯೇ ನನ್ನ ತಂದೆಯ ಬ್ಯಾಂಕ್ ಖಾತೆಯನ್ನು ನೋಡಿ. 133 ಕೋಟಿಯ ಒಡೆಯ ಬಡವ ಹೇಗಾಗಲು ಸಾಧ್ಯ ಎಂದು ಆಕೆ ಕೇಳಿದಳು.
ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿರುವ ಸಿಧು ಪುತ್ರಿ ಚುನಾವಣಾ ಅಖಾಡಕ್ಕಿಳಿದಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರುವಂತೆ ಮಾಡಿದ್ದಾರೆ.
ಹಣದ ಕೊರತೆಯಿಂದ ಮಗಳ ಮದುವೆ ಆಗುವುದಿಲ್ಲ ಎಂದು ತಂದೆ ನವಜೋತ್ ಸಿಧು ಭಾವನಾತ್ಮಕವಾಗಿ ಹೇಳಿದ್ದರು ಎಂದು ಮಗಳು ರಬಿಯಾ ಹೇಳಿದ್ದು, ಹೀಗಾಗಿ ಆಕೆ ತನ್ನ ತಂದೆಯ ವಿಜಯದ ನಂತರವೇ ಮದುವೆಯಾಗುವುದಾಗಿ ಪ್ರತಿಜ್ಞೆ ಮಾಡಿದ್ದಾಳೆ.
ಆದರೆ ನವಜೋತ್ ಸಿಂಗ್ ಸಿಧು ಇಂದಿಗೂ ತನ್ನ ಪುತ್ರಿ ಓದಲು ಮತ್ತು ಆಕೆಗೆ ಏನು ಬೇಕು ಅದೆಲ್ಲವನ್ನೂ ಮಾಡಲು ಪ್ರೋತ್ಸಾಹಿಸುತ್ತಾರೆ. ಆದರೆ ಆಕೆಯ ಮದುವೆಗೆ ಹಣವಿಲ್ಲ ಎಂದರೆ ಹೇಗೆ ಎಂಬುದು ತಿಳಿಯುತ್ತಿಲ್ಲ.
ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ತನ್ನ ತಂದೆಯ ಸಮೀಪ ನಿಲ್ಲಲ್ಲು ಕೂಡ ಸಾಧ್ಯವಿಲ್ಲ. ಸಿದ್ದುಗೆ ಸರಿಸಮಾನ ಎಂದು ಭಾವಿಸಿದ ಸಿಎಂ ಚನ್ನಿ ಅವರಿಗೆ ಮುಂದೆ ಯಾವುದೇ ಸ್ಥಾನಮಾನವಿರುವುದಿಲ್ಲಎಂದು ಸಿಎಂ ಚನ್ನಿ ಅವರನ್ನು ಟಾರ್ಗೆಟ್ ಮಾಡಿ ರಾಬಿಯಾ ಕಿಡಿಕಾರಿದ್ದಾಳೆ.
ತನ್ನ ತಂದೆ 14 ವರ್ಷಗಳಿಂದ ಪಂಜಾಬ್‌ನ್ನು ಮಾದರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಯಾರೂ ಶ್ಲಾಘಿಸುತ್ತಿಲ್ಲ. ಆದರೆ ಅವರು ಶೀಘ್ರದಲ್ಲೇ ಜನ ಮೆಚ್ಚುಗೆ ಗಳಿಸಲಿದ್ದಾರೆ.
ನನ್ನ ತಂದೆ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ. ವಿಜಯವು ಯಾರು ಅರ್ಹರಾಗಿರುತ್ತಾರೋ ಅವರಿಗೆ ಸಿಗುತ್ತದೆ.












Click it and Unblock the Notifications