ಐಎಎಸ್ ಅಧಿಕಾರಿ 28 ವರ್ಷಗಳ ಸೇವಾವಧಿಯಲ್ಲಿ 53 ಬಾರಿ ವರ್ಗಾವಣೆ

ಚಂಡೀಗಢ, ನವೆಂಬರ್ 28: ''ಮತ್ತೊಮ್ಮೆ ವರ್ಗಾವಣೆ ಮಾಡಲಾಗಿದೆ. ಸಂವಿಧಾನದ ದಿನವನ್ನು ನಾವು ಆಚರಿಸಿದ ಮರುದಿನವೇ ಸುಪ್ರೀಂಕೋರ್ಟ್‌ನ ಆದೇಶ ಹಾಗೂ ನಿಯಮಗಳನ್ನು ಮತ್ತೊಮ್ಮೆ ಉಲ್ಲಂಘಿಸಲಾಗಿದೆ. ಕೊನೆಗೂ ಮೂಲೆಗುಂಪು ಮಾಡಲಾಗಿದೆ. ಅಪಮಾನವೇ ಪ್ರಾಮಾಣಿಕತೆಗೆ ದೊರೆಯುವ ಪುರಸ್ಕಾರವಾಗಿದೆ" ಎಂದು ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಟ್ವೀಟ್ ಮಾಡಿದ್ದಾರೆ.

ದಕ್ಷ ಐಎಎಸ್ ಅಧಿಕಾರಿ ಖೇಮ್ಕಾ ಅವರು ತಮ್ಮ 28 ವರ್ಷಗಳ ಸೇವಾವಧಿಯಲ್ಲಿ 53ನೇ ವರ್ಗಾವಣೆಯಾಗಿದ್ದಾರೆ. ಹರ್ಯಾಣ ಸರಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ದಾಖಲೆಗಳ ಇಲಾಖೆಗೆ ವರ್ಗಾಯಿಸಲಾಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಅವರನ್ನು ಕ್ರೀಡಾ ಹಾಗೂ ಯುವಜನ ವ್ಯವಹಾರ ಇಲಾಖೆಗೆ ವರ್ಗಾಯಿಸಲಾಗಿತ್ತು.

1991ನೇ ಸಾಲಿನ ಐಎಎಸ್ ಅಧಿಕಾರಿಯಾದ ಅಶೋಕ್ ಖೇಮ್ಕಾ ಅವರು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಸೇರಿದ ಕಂಪನಿ ಮತ್ತು ರಿಯಲ್ ಎಸ್ಟೇಟ್ ಕಂಪನಿ ಡಿಎಲ್ಎಫ್ ಜತೆಗಿನ ಭೂ ವ್ಯವಹಾರವನ್ನು ರದ್ದುಗೊಳಿಸಿದ್ದು ದೇಶದಾದ್ಯಂತ ಸದ್ದು ಮಾಡಿತ್ತು.

Transferred 53 times, IAS officer Ashok Khemka says reward for honesty is humiliation

"ಕೆಲಸ ಮಾಡಲು ತುಂಬಾ ಪ್ಲಾನ್ ಹಾಕಿಕೊಂಡಿದ್ದೆ. ಮತ್ತೊಂದು ವರ್ಗಾವಣೆಯ ಸುದ್ದಿ ಬಂದಿದೆ. ಮತ್ತೆ ಕ್ರ್ಯಾಶ್ ಲ್ಯಾಂಡಿಂಗ್ ಆಗಿದೆ. ಹಿತಾಸಕ್ತಿಗಳು ಗೆದ್ದಿವೆ. ಆದರೆ ಇದು ತಾತ್ಕಾಲಿಕ. ಹೊಸ ಶಕ್ತಿಯೊಂದಿಗೆ ಚಟುವಟಿಕೆ ಮುಂದುವರಿಯುತ್ತದೆ " ಎಂದು ಬಿಜೆಪಿ ಸರ್ಕಾರ ಬಂದ ಮೇಲೂ ವರ್ಗಾವಣೆ ಮುಂದುವರೆದಾಗ ಅಶೋಕ್ ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+