ಕೊರೊನಾ ಭೀತಿಯಲ್ಲೂ ಶಾಲೆ ಪುನರಾರಂಭಕ್ಕೆ ಮುಂದಾದ ಆ ರಾಜ್ಯ

ಚಂಡೀಗಡ, ಜುಲೈ 1: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇದೆ. ಜುಲೈ 31ರವರೆಗೂ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಅನ್‌ಲಾಕ್‌2 ಮಾರ್ಗಸೂಚಿ ಹೊರಡಿಸಿದೆ. ಕೇಂದ್ರದ ಆದೇಶದಂತೆ ಜುಲೈ 31ರವರೆಗೂ ಶಾಲೆ-ಕಾಲೇಜು ತೆರೆಯುವಂತಿಲ್ಲ.

Recommended Video

      Patanjali,ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು , ಕೈ ಎತ್ತಿದ ಬಾಬಾ ರಾಮ್‌ದೇವ್ | Oneindia Kannada

      ಆದರೆ, ಹರ್ಯಾಣ ಸರ್ಕಾರವೂ ಶಾಲೆಗಳನ್ನು ಪುನರಾರಂಭಿಸಲು ಸಜ್ಜಾಗಿದೆ. ಬೇಸಿಗೆ ರಜೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲಿದೆ ಎಂದು ಶಿಕ್ಷಣ ಇಲಾಖೆ ಬುಧವಾರ ಸೂಚಿಸಿದೆ.

      ಜುಲೈ 1 ರಿಂದ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಿರುವ ಸರ್ಕಾರ ಜುಲೈ 26ಕ್ಕೆ ಸಮ್ಮರ್ ಹಾಲಿಡೇ ಮುಗಿಯಲಿದೆ. ಜುಲೈ 27 ರಿಂದ ಎಂದಿನಂತೆ ಶಾಲೆಗಳು ಆರಂಭವಾಗಲಿದೆ ಎಂದು ಅಧಿಸೂಚನೆ ಹೊರಡಿಸಿದೆ.

      ಪ್ರಸ್ತುತ ದೇಶದಲ್ಲಿ ಕೊರೊನಾ ಪರಿಸ್ಥಿತಿ ಗಮನಿಸಿದರೆ ಜುಲೈ ತಿಂಗಳಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

      Schools To Reopen From July 27 In Haryana


      ಮತ್ತೊಂದೆಡೆ ಕೇಂದ್ರ ಸರ್ಕಾರವೂ ತಜ್ಞರ ವರದಿ ಹಾಗೂ ಕೊರೊನಾ ವಿರುದ್ಧ ಹೋರಾಟದ ಮುನ್ನೆಚ್ಚರಿಕೆಯಿಂದಾಗಿ ಶಾಲೆ-ಕಾಲೇಜು ತೆರೆಯವುದರ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅಷ್ಟರೊಳಗೆ ಹರ್ಯಾಣ ಸರ್ಕಾರ ಶಾಲೆ ಪುನರಾರಂಭಿಸುವ ಬಗ್ಗೆ ನಿರ್ಧರಿಸಿರುವುದು ಅಚ್ಚರಿ ತಂದಿದೆ.

      ಇದುವರೆಗೂ ಬೇರೆ ಯಾವ ರಾಜ್ಯಗಳು ಶಾಲೆ ಮತ್ತು ಕಾಲೇಜು ಆರಂಭಿಸುವ ಬಗ್ಗೆ ದಿನಾಂಕ ಪ್ರಕಟಿಸಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+