Times Now Veto Survey: ಪಂಜಾಬ್‌ನಲ್ಲಿ ಎಎಪಿಗೆ ಬಹುಮತ
ಚಂಡೀಗಢ, ಫೆಬ್ರವರಿ 9: ಪಂಜಾಬ್ ವಿಧಾನಸಭೆ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ನಡುವೆ ತೀವ್ರ ಪೈಪೋಟಿ ಇದೆ.
ಟೈಮ್ಸ್ ನೌ ಒಪೀನಿಯನ್ ಪೋಲ್ ಪ್ರಕಾರ, ಅರವಿಂದ್ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷವು ಬಹುಮತವನ್ನು ಪಡೆಯಲಿದೆ. ಪಂಜಾಬ್‌ನಲ್ಲಿ ಒಟ್ಟು 117 ಸೀಟುಗಳಿದ್ದು, ಆಮ್ ಆದ್ಮಿ ಪಕ್ಷವು 62-63 ಸ್ಥಾನಗಳನ್ನು ಗೆಲ್ಲಲಿದೆ. ಆಮ್ ಆದ್ಮಿ ಪಕ್ಷವು ಭಗವಂತ್ ಮನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಪಂಜಾಬ್ ಸಿಎಂ ಅಭ್ಯರ್ಥಿಯಾಗಿ ಚನ್ನಿ ಆಯ್ಕೆ ಕಾಂಗ್ರೆಸ್ನ ತಪ್ಪು: ಅಮರಿಂದರ್
ಫೆಬ್ರವರಿ 20ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 41-44 ಸ್ಥಾನಗಳನ್ನು ಗೆಲ್ಲಲಿದೆ. ಹಾಗೆಯೇ ಶಿರೋಮಣಿ ಆಕಾಲಿದಳ ಹಾಗೂ ಬಿಜೆಪಿ ಎರಡೂ ಸೇರಿ 8-11 ಸೀಟುಗಳನ್ನು ಪಡೆದುಕೊಳ್ಳಲು ಯಶಸ್ವಿಯಾಗಬಹುದು ಎನ್ನಲಾಗಿದೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಹೊಸ ಪಕ್ಷ ಪಂಜಾಬ್ ಲೋಕ್ ಕಾಂಗ್ರೆಸ್ ಕೇವಲ 3 ಸೀಟುಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಒಟ್ಟು ಮತದ ಶೇ.44.61 ಭಾಗದಷ್ಟು ಮತಗಳನ್ನು ಗಳಿಸಲಿದ್ದಾರೆ, ಕಾಂಗ್ರೆಸ್ ಶೇ.33.53ರಷ್ಟು ಮತ ಗಳಿಸಿದರೆ, ಬಿಜೆಪಿಯು ಶೇ.3.99ರಷ್ಟು ಮತ ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿರುವುದು ತಪ್ಪು ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ಹಿಂದೆಂದೂ ಜಾತಿ ಅಥವಾ ಧರ್ಮದ ಆಧಾರದ ಮೇಲೆ ವಿಭಜನೆಯಾಗಿಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ಚನ್ನಿ ಯೋಗ್ಯರಲ್ಲ, ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದರು.
ಚರಣ್‌ಜಿತ್ ಸಿಂಗ್ ಚನ್ನಿಯನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ, ಆದರೆ ಜಾತಿ ಆಧಾರದಲ್ಲಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಬಾರದು.
ಸಿಎಂ ಆಗಿದ್ದ 111 ದಿನಗಳಲ್ಲಿ ಎಲ್ಲವನ್ನೂ ಮಾಡಿದ್ದೇನೆ ಎಂದು ಚನ್ನಿ ಹೇಳಿಕೊಂಡಿದ್ದಾರೆ, ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ, ಪ್ರತಿಯೊಂದು ಯೋಜನೆಯನ್ನು ಪ್ರಾರಂಭಿಸಲು ತಿಂಗಳುಗಳು ಬೇಕಾಗುತ್ತದೆ, ಈ ಕುರಿತು ಜನರು ಎಚ್ಚರವಾಗಿರಬೇಕು, ಚನ್ನಿ ಹೇಳಿರುವ ಎಲ್ಲಾ ಯೋಜನೆಗಳು ನಮ್ಮ ಸರ್ಕಾರದಿಂದ ಆರಂಭವಾಗಿತ್ತು ಎಂದರು.
ಪಂಜಾಬ್‌ನ ಮುಖ್ಯಮಂತ್ರಿ ಅಭ್ಯರ್ಥಿಯ ನಿರ್ಧಾರ ನನ್ನ ನಿರ್ಧಾರವಲ್ಲ ಎಂದು ಹೇಳಿದ ರಾಹುಲ್. "ನಾನು ಅದರ ಬಗ್ಗೆ ನಿರ್ಧರಿಸಿಲ್ಲ, ನಾನು ಇದನ್ನು ಪಂಜಾಬ್‌ನ ಜನರು, ಯುವಕರು, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಕೇಳಿದೆ.
ನನಗೆ ಅಭಿಪ್ರಾಯವಿರಬಹುದು ಆದರೆ ನನ್ನ ಅಭಿಪ್ರಾಯಕ್ಕಿಂತ ನಿಮ್ಮ ಅಭಿಪ್ರಾಯ ಮುಖ್ಯ. ಬಡವರನ್ನು ಅರ್ಥಮಾಡಿಕೊಳ್ಳಬಲ್ಲ ವ್ಯಕ್ತಿಯೊಬ್ಬರು ನಮಗೆ ಬೇಕು ಎಂದು ಅವರು ಹೇಳಿದ್ದರು ಎಂದು ಚನ್ನಿ ಹೆಸರು ಘೋಷಣೆ ಮಾಡಿ ಭಾಷಣ ಮಾಡಿದ ರಾಹುಲ್ ಹೇಳಿದ್ದಾರೆ.
ಟೆಲಿಪೋಲ್ ಮತ್ತು ನಂತರದ ಘೋಷಣೆಯು ಮುಖ್ಯಮಂತ್ರಿ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ನವಜೋತ್ ಸಿಧು ನಡುವಿನ ಜಗಳದ ಫಲಿತಾಂಶವಾಗಿದೆ. ಅವರು 2017 ರಲ್ಲಿ ರಾಜ್ಯ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದಾಗಿನಿಂದ ತಮ್ಮ ಮಹತ್ವಾಕಾಂಕ್ಷೆಗಳನ್ನು ಸ್ಪಷ್ಟಪಡಿಸಿದ್ದಾರೆ.