Punjab Zee News Exit Poll 2022: ಎಎಪಿ ಜಯ ಸಾಧ್ಯತೆ

ಚಂಡೀಗಢ, ಮಾರ್ಚ್ 07: ಪಂಜಾಬ್‌ ವಿಧಾನಸಭೆ ಚುನಾವಣೆಯು ಫೆಬ್ರವರಿ 20ರಂದು ನಡೆದಿದೆ. ಚುನಾವಣೆಯ ಫಲಿತಾಂಶವು ಮಾರ್ಚ್ 10ರಂದು ಪ್ರಕಟವಾಗಲಿದೆ. ಇದಕ್ಕೂ ಮುನ್ನ ಹಲವಾರು ಮಾಧ್ಯಮಗಳು, ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟ ಮಾಡಿದೆ. ಝೀ ನ್ಯೂಸ್‌ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆಮ್‌ ಆದ್ಮಿ ಪಕ್ಷ (ಎಎಪಿ) ಪಕ್ಷವು ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ.

ಎಎಪಿ ಪಕ್ಷವು 52-61 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು ಕಾಂಗ್ರೆಸ್‌ 26-33 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. 24-32 ಸ್ಥಾನಗಳಲ್ಲಿ ಶಿರೋಮಣಿ ಅಕಾಲಿದಳವು ಜಯ ಗಳಿಸಲಿದೆ. ಇನ್ನುಳಿದಂತೆ ಬಿಜೆಪಿಯು ಬರೀ 3-7 ಕ್ಷೇತ್ರದಲ್ಲಿ ವಿಜಯ ಸಾಧಿಸಲಿದೆ. ಇತರೆ ಪಕ್ಷಗಳು 1-2 ಕ್ಷೇತ್ರದಲ್ಲಿ ಗೆಲುವು ಪಡೆಯುವ ಸಾಧ್ಯತೆ ಇದೆ ಎಂದು ಝೀ ನ್ಯೂಸ್‌ ಚುನಾವಣೋತ್ತರ ಸಮೀಕ್ಷೆಯು ಹೇಳಿದೆ.

ಝೀ ನ್ಯೂಸ್‌ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆಮ್‌ ಆದ್ಮಿ ಪಕ್ಷವು (ಎಎಪಿ) ಪಂಜಾಬ್‌ನಲ್ಲಿ ಸರ್ಕಾರವನ್ನು ರಚನೆ ಮಾಡುವ ಸಾಧ್ಯತೆ ಇದೆ. ಇನ್ನು ಎಎಪಿ ಶೇಕಡ 39ರಷ್ಟು, ಕಾಂಗ್ರೆಸ್‌ ಶೇಕಡ 25ರಷ್ಟು ಮತವನ್ನು ಪಡೆಯಲಿದೆ. ಎಸ್‌ಎಡಿ ಶೇಕಡ 24ರಷ್ಟು ಮತವನ್ನು ಪಡೆಯಲಿದೆ. ಇನ್ನುಳಿದಂತೆ ಬಿಜೆಪಿಯು ಶೇಕಡ 6ರಷ್ಟು ಮತದಾನ ಪಡೆಯಲಿದೆ. ಇತರೆ ಪಕ್ಷಗಳು ಶೇಕಡ 6 ಮತದಾನ ಗಳಿಸಲಿದೆ.

Punjab Election Zee News Exit Poll Results 2022 in Kannada

ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಚುನಾವಣೆ

ಪಂಜಾಬ್‌ನಲ್ಲಿ ಒಟ್ಟು 117 ವಿಧಾನಸಭೆ ಕ್ಷೇತ್ರಗಳು ಇದೆ. ಫೆಬ್ರವರಿ 20ರಂದು ಎಲ್ಲಾ ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲಾಗಿದೆ. ಮಾರ್ಚ್ 10ರಂದು ಇಲ್ಲಿ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಪ್ರಸ್ತುತ ಕಾಂಗ್ರೆಸ್‌ ಕೈಯಲ್ಲಿ ಪಂಜಾಬ್‌ ಅಧಿಕಾರ ಇದ್ದು ಸಮೀಕ್ಷೆಗಳು ಎಎಪಿ ಗದ್ದುಗೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದೆ.

ಮಾ.10ರಂದು ಪಂಚರಾಜ್ಯಗಳ ಚುನಾವಣಾ ಭವಿಷ್ಯ

ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಲಾಗಿದೆ. ಪಂಜಾಬ್‌ ಹೊರತಾಗಿ ನಾಲ್ಕು ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ ನಡೆದಿದೆ. ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲೂ ಚುನಾವಣೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮಾರ್ಚ್ 10ರಂದು ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.

ಕಳೆದ 2017ರಲ್ಲಿ ಪಂಜಾಬ್‌ ಮತದಾರರ ತೀರ್ಪು ಏನಿತ್ತು?

2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಭಾರತೀಯರ ಜನತಾ ಪಾರ್ಟಿ (ಬಿಜೆಪಿ) ಕೇವಲ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಶಿರೋಮಣಿ ಅಕಾಲಿದಳವು ಕೇವಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕ ಇನ್ಸಾಫ್‌ ಪಕ್ಷವು ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಪಂಜಾಬ್‌ನಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 59.

ಚುನಾವಣಾಪೂರ್ವ ಸಮೀಕ್ಷೆ ಹೇಳಿದ್ದೇನು?

ಪಂಜಾಬ್ ಅನ್ನು ಒಟ್ಟು ಮೂರು ಮಾಜಾ, ದೋಬಾ ಮತ್ತು ಮಾಲ್ವಾ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಮಾಝಾ ಕ್ಷೇತ್ರದಲ್ಲಿ ಕಾಂಗ್ರೆಸ್ 9-10 ಸ್ಥಾನಗಳನ್ನು ಪಡೆಯಬಹುದು. ಶಿರೋಮಣಿ ಅಕಾಲಿದಳ 9-10 ಸ್ಥಾನಗಳನ್ನು ಪಡೆಯಬಹುದು. ಆಮ್ ಆದ್ಮಿ ಪಕ್ಷ 5-6 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಬಿಜೆಪಿ 1-2 ಸ್ಥಾನ ಪಡೆಯುವ ಸಾಧ್ಯತೆ ಇದೆ. ಇನ್ನುಳಿದಂತೆ ಇತರೆ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಯಾವುದೇ ಸ್ಥಾನವನ್ನು ಪಡೆಯುವ ಸಾಧ್ಯತೆ ಇಲ್ಲ ಎಂದು ಝೀ ಚುನಾವಣಾ ಪೂರ್ವ ಸಮೀಕ್ಷೆ ಹೇಳುತ್ತದೆ. ದೋಬಾ ಕ್ಷೇತ್ರದಲ್ಲಿ 2022ರಲ್ಲಿ ಕಾಂಗ್ರೆಸ್ ಶೇ 30ರಷ್ಟು ಮತ ಗಳಿಸುವ ಸಾಧ್ಯತೆ ಇದೆ. ಶಿರೋಮಣಿ ಅಕಾಲಿದಳ ಶೇ.33ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಆಮ್ ಆದ್ಮಿ ಪಕ್ಷ 25% ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಶೇ 7ರಷ್ಟು ಮತ ಗಳಿಸುವ ಸಾಧ್ಯತೆ ಇದೆ. ಇತರರು ಶೇಕಡಾ 5 ರಷ್ಟು ಮತಗಳನ್ನು ಪಡೆಯಬಹುದು. 2022ರಲ್ಲಿ ಕಾಂಗ್ರೆಸ್ ಶೇ 29ರಷ್ಟು ಮತ ಗಳಿಸುವ ಸಾಧ್ಯತೆ ಇದೆ. ಶಿರೋಮಣಿ ಅಕಾಲಿದಳ ಶೇ.26ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಆಮ್ ಆದ್ಮಿ ಪಕ್ಷ 36% ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಶೇ 4ರಷ್ಟು ಮತ ಗಳಿಸುವ ಸಾಧ್ಯತೆ ಇದೆ. ಇತರರು ಶೇಕಡಾ 5ರಷ್ಟು ಮತಗಳನ್ನು ಪಡೆಯಬಹುದು ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+