ಪಂಜಾಬ್ ಚುನಾವಣೆ: ಸಿದ್ದು ಕೂಡ ‘ಲಾಲಿಪಾಪ್’ ಹಂಚಲು ಆರಂಭ
ಚಂಡೀಗಢ ಜನವರಿ 3: ಕೆಲವೇ ವಾರಗಳಲ್ಲಿ ಪಂಚರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ರಾಜಕೀಯ ಪಕ್ಷಗಳಿಂದ ಹಲವಾರು ಯೋಜನೆ ಅನುಷ್ಠಾನಕ್ಕೆ ತರುವ ಭರವಸೆಗಳ ಮಹಾಪೂರವೇ ಹರಿದು ಬರುತ್ತಿದೆ. ನಾ ಮುಂದು ತಾ ಮುಂದು ಎನ್ನುವಂತೆ ಜನಪ್ರತಿನಿಧಿಗಳು ಮತದಾರರನ್ನು ಆಕರ್ಷಿಸಲು ಪೈಪೋಟಿಗಳಿದು ಭರವಸೆಗಳನ್ನು ನೀಡುತ್ತಿದ್ದಾರೆ. ಪಂಜಾಬ್ ಇಂಥಹ ಭರವಸೆಗಳಿಗೆ ಹೊರತಾಗಿಲ್ಲ. ಈ ಹಿಂದೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಭರವಸೆಗಳನ್ನು ಲಾಲಿಪಾಪ್ ಎಂದು ಕರೆದಿದ್ದರು. ಆದರೀಗ ಕೇಜ್ರಿವಾಲ್ ಅವರಂತೇ ಸಿಧು ಕೂಡ ಮತದಾರರಿಗೆ ಭರವಸೆಗಳನ್ನು ನೀಡಿದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವರ್ಷದಲ್ಲಿ 8 ಉಚಿತ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದಿದ್ದಾರೆ. ಜೊತೆಗೆ ಮಹಿಳೆಯರಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

20,000 ರೂ. ನೀಡುವ ಭರವಸೆ
ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಪಕ್ಷ ಕಾಂಗ್ರೆಸ್ ವಿದ್ಯಾರ್ಥಿ ವರ್ಗಕ್ಕೆ ಸಂಬಂಧಿಸಿದ ಆಕರ್ಷಕ ಘೋಷಣೆ ಮಾಡಿದೆ. ಇಂದು ಭದೌರ್ ರ್ಯಾಲಿಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು, ತಮ್ಮ ಸರ್ಕಾರ ರಚನೆಯಾದರೆ 5, 10 ಮತ್ತು 12ನೇ ತರಗತಿ ಪಾಸಾದ ವಿದ್ಯಾರ್ಥಿನಿಯರಿಗೆ ಸಾವಿರಾರು ರೂಪಾಯಿ ನೀಡಲಾಗುವುದು ಎಂದು ಹೇಳಿದ್ದಾರೆ. ಇದರೊಂದಿಗೆ ಕಂಪ್ಯೂಟರ್-ಟ್ಯಾಬ್ಲೆಟ್‌ಗಳನ್ನು ಸಹ ವಿತರಿಸಲಾಗುವುದು. ಪಂಜಾಬ್‌ನಲ್ಲಿ 5ನೇ ತರಗತಿ ತೇರ್ಗಡೆಯಾಗುವ ವಿದ್ಯಾರ್ಥಿನಿಯರಿಗೆ 5000 ಹಾಗೂ 10ನೇ ತರಗತಿಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿನಿಯರಿಗೆ 15,000 ರೂ.ಗಳನ್ನು ಕಾಂಗ್ರೆಸ್ ಪಕ್ಷ ನೀಡಲಿದೆ ಎಂದು ಸಿಧು ಭರವಸೆ ನೀಡಿದ್ದಾರೆ. ಇದಾದ ಬಳಿಕ 12ನೇ ತರಗತಿ ಪಾಸಾದ ಪ್ರತಿ ವಿದ್ಯಾರ್ಥಿನಿಯರಿಗೆ 20,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದ ಸಿದ್ದು, ವಿದ್ಯಾರ್ಥಿನಿಯರು ಉನ್ನತ ವ್ಯಾಸಂಗಕ್ಕೆ ನೆರವಾಗಲು ಅವರಿಗೆ ಕಂಪ್ಯೂಟರ್-ಟ್ಯಾಬ್ಲೆಟ್‌ಗಳನ್ನು ನೀಡುವುದಾಗಿ ತಿಳಿಸಿದರು.

ಕೇಜ್ರಿವಾಲ್ ಎಲ್ಲಿಂದ ತರುತ್ತಾರೆ ಇಷ್ಟು ಹಣ?
ಈ ಹಿಂದೆ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ರಚನೆ ವೇಳೆ ಪ್ರತಿ ಮಹಿಳೆಗೆ ಒಂದು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಸಿದ್ದು ಅದನ್ನು ಲಾಲಿಪಾಪ್ ಎಂದು ಕರೆದಿದ್ದು, ಕೇಜ್ರಿವಾಲ್ ಸುಳ್ಳು ಹೇಳುತ್ತಿದ್ದಾರೆಂದು ಹೇಳಿದ್ದಾರೆ. ಆದರೆ ನಾನು ಖಂಡಿತವಾಗಿಯೂ ಈ ಭರವಸೆಯನ್ನು ಈಡೇರಿಸುತ್ತೇನೆ ಎಂದು ಬೇಡಿಕೊಂಡರು. ಈ ಭರವಸೆಯನ್ನು ಪಂಜಾಬ್‌ನಲ್ಲಿ ಮಾಫಿಯಾದ ಜೇಬಿನಿಂದ ಹೊರತೆಗೆಯುವ ಮೂಲಕ ಈಡೇರಿಸುವುದಾಗಿ ಸಿಧು ಹೇಳಿದ್ದಾರೆ.

ಆಸ್ತಿ ನೋಂದಣಿ ಸಂಪೂರ್ಣ ಉಚಿತ
ಕಾಂಗ್ರೆಸ್ ಸರಕಾರ ರಚನೆಯಾದರೆ ಪ್ರತಿ ಗೃಹಿಣಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡಲಾಗುತ್ತದೆ. ಇದಲ್ಲದೇ ಒಂದು ವರ್ಷದಲ್ಲಿ 8 ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ಪಡೆಯಲಿದ್ದಾರೆ. ಪ್ರತಿ ಒಂದುವರೆ ತಿಂಗಳಿಗೊಮ್ಮೆ ಒಂದು ಉಚಿತ ಗ್ಯಾಸ್ ಸಿಲಿಂಡರ್ ಸಿಗಲಿದೆ. ಇದಲ್ಲದೇ ಮಹಿಳೆಯರ ಹೆಸರಿನಲ್ಲಿರುವ ಆಸ್ತಿ ನೋಂದಣಿ ಸಂಪೂರ್ಣ ಉಚಿತವಾಗಿರುತ್ತದೆ ಎಂದಿದ್ದಾರೆ.

ಕೇಜ್ರಿವಾಲ್ ಭರವಸೆಗಳೆಲ್ಲ ಸುಳ್ಳು
ನಿಮ್ಮ ಭರವಸೆಗಳು ಇಲ್ಲಿ ನಡೆಯುವುದಿಲ್ಲ ಎಂದು ನವಜೋತ್ ಸಿಧು ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ಹೇಳಿದ್ದರು. ಪಂಜಾಬ್‌ನ ಮಹಿಳೆಯರನ್ನು ಭಿಕ್ಷುಕರು ಎಂದು ಭಾವಿಸಬೇಡಿ. ಅವರಿಗೆ ತಲಾ ಒಂದು ಸಾವಿರ ರೂ. ಕೊಡಲು ಈ ಹಣವನ್ನು ಕೇಜ್ರಿವಾಲ್ ಎಲ್ಲಿಂದ ತರುತ್ತಾರೆ ಎಂದು ಸಿದ್ದು ಹೇಳಿದ್ದರು.

ಕೇಜ್ರಿವಾಲ್ ಅವರಂತೆ ಭರವಸೆ ನೀಡಿದ ಸಿಧು
ಕೆಲವು ದಿನಗಳ ಹಿಂದೆ ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ನಲ್ಲಿ ಸರ್ಕಾರ ರಚನೆಯಾದರೆ ಪ್ರತಿ ಮಹಿಳೆಗೆ ಒಂದು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಆಗ ಸಿದ್ದು ಅದಕ್ಕೆ ಲಾಲಿಪಾಪ್ ಎಂದಿದ್ದರು. ಕೇಜ್ರಿವಾಲ್ ಅವರ ಘೋಷಣೆಯನ್ನು ಭಿಕ್ಷೆ ಎಂದು ಕರೆದ ಅವರು, ಎಎಪಿ ಸುಳ್ಳು ಹೇಳುತ್ತಿದೆ, ಆದರೆ ನಾನು ಖಂಡಿತವಾಗಿಯೂ ಈ ಭರವಸೆಯನ್ನು ಈಡೇರಿಸುತ್ತೇನೆ ಎಂದು ಹೇಳಿದರು. ಈಗ ಪಂಜಾಬ್‌ನ ಮಾಫಿಯಾದ ಜೇಬಿನಿಂದ ಹಣವನ್ನು ಹೊರತೆಗೆಯುವ ಮೂಲಕ ನಾವು ಈ ಭರವಸೆಯನ್ನು ಈಡೇರಿಸುತ್ತೇವೆ ಎಂದು ಸಿಧು ಹೇಳಿದ್ದಾರೆ. ಮಾಫಿಯಾ ನಿರ್ಮೂಲನೆ ಮಾಡಿದರೂ ಹಣ ಕೊಡಲು ಕೋಟ್ಯಂತರ ರೂಪಾಯಿ ಹಣ ಬೇಕು. ಆದರೆ ಈಗ ಅದೇ ಪ್ರಶ್ನೆಯ ಸಾಲಿಗೆ ಸಿದ್ದು ಕೂಡ ಸೇರಿಕೊಂಡಿದ್ದಾರೆ.
Recommended Video












Click it and Unblock the Notifications