ಶಾಪಿಂಗ್ ಮಾರ್ಟ್‌ಗೆ ಏಕಾಏಕಿ ನುಗ್ಗಿ ಗುಂಡು ಹಾರಿಸಿದ ದುಷ್ಕರ್ಮಿಗಳ ದಂಡು

ಚಂಡೀಗಢ, ಮಾರ್ಚ್ 25: ಮೆಗಾ ಮಾರ್ಟ್ ಸ್ಟೋರ್‌ಗೆ ಏಕಾಏಕಿ ನುಗ್ಗಿದ 20-25 ದುಷ್ಕರ್ಮಿಗಳ ದಂಡು ಕಿಟಕಿಗಳನ್ನು ಪುಡಿ ಮಾಡಿ ಮನಬಂದಂತೆ ಗುಂಡು ಹಾರಿಸಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಗುರುವಾರ ಪಂಜಾಬ್‌ನಲ್ಲಿನ ಟಾರ್ನ್ ತರಣ್ ಜಿಲ್ಲೆಯ ವಿಶಾಲ್ ಮಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ಈ ಶಾಪಿಂಗ್ ಮಾರ್ಟ್ ಅನ್ನು ಈಚೆಗಷ್ಟೆ ಉದ್ಘಾಟನೆಗೊಳಿಸಲಾಗಿತ್ತು. ಟಾರ್ನ್ ತರಣ್ ಹಿರಿಯ ಎಸ್‌ಪಿ ಧ್ರುಮನ್ ನಿಂಬಲ್ ನಿವಾಸದ ಸಮೀಪದಲ್ಲೇ ಈ ಮಾರ್ಟ್ ಇದೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.

Miscreants Rushed To Mega Mart And Open Fire At Shoppers In Punjab

ಹೊಸದಾಗಿ ಉದ್ಘಾಟನೆಯಾದ್ದರಿಂದ ಶಾಪಿಂಗ್ ಮಾರ್ಟ್‌ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಜನರು ಖರೀದಿಯಲ್ಲಿ ನಿರತರಾಗಿದ್ದ ವೇಳೆ ಹಾಡಹಗಲಲ್ಲಿಯೇ ಏಕಾಏಕಿ 20-25 ದುಷ್ಕರ್ಮಿಗಳು ಮಾರ್ಟ್‌ಗೆ ನುಗ್ಗಿ ಎಲ್ಲಾ ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಅವರನ್ನು ತಡೆಯಲು ಪ್ರಯತ್ನಿಸಿದಾಗ ಗುಂಡು ಹಾರಿಸಿದ್ದಾರೆ ಎಂದು ಮಾರ್ಟ್ ನಿರ್ದೇಶಕರು ತಿಳಿಸಿದ್ದಾರೆ.

ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನಾಧರಿಸಿ ಪೊಲೀಸರು ತನಿಖೆ ಮುಂದುವರೆಸಿ, ದುಷ್ಕರ್ಮಿಗಳ ಸೆರೆಗೆ ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+