ಟಿವಿಯ ಲೈವ್‌ನಲ್ಲಿ ಇಬ್ಬರು ಮಹಿಳೆಯರನ್ನು ಕೊಂದಿದ್ದು ಒಪ್ಪಿಕೊಂಡ
ಚಂಡೀಗಢ, ಜನವರಿ 16: ಕಳೆದ 10 ವರ್ಷಗಳಲ್ಲಿ ಇಬ್ಬರು ಮಹಿಳೆಯರನ್ನು ಕೊಂದು ಟಿವಿ ಚಾನೆಲ್ ಎದುರು ಬಂದು ತಪ್ಪೊಪ್ಪಿಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಣಿಂದರ್ ಸಿಂಗ್ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದಾನೆ. ಆತ ತನ್ನ ಪ್ರೇಯಸಿಯನ್ನು ಹೊಸ ವರ್ಷದಂದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಸರಬಜಿತ್ ಕೌರ್(27) ವೃತ್ತಿಯನ್ನು ನರ್ಸ್ ಆಗಿದ್ದರು. ಆಕೆಯನ್ನು ಹೋಟೆಲ್‌ನ ರೂಮಿನಲ್ಲಿ ಕೊಲೆ ಮಾಡಿದ್ದೇನೆ. ಏಕೆಂದರೆ ಆಕೆ ನಾದಿನಿಯ ಸಹೋದರನೊಂದಿಗೆ ಆಕೆಗೆ ಸಂಬಂಧವಿತ್ತು ಎಂದು ಆರೋಪಿಸಿದ್ದಾನೆ.

2010ರಲ್ಲಿ ಕರ್ನಲ್‌ನಲ್ಲಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಜೈಲು ಸೇರಿ, ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಈಗ ಮತ್ತೊಂದು ಕೊಲೆ ಮಾಡಿದ್ದಾನೆ. ಟಿವಿಯಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ವೇಳೆಯೇ ಆತನನ್ನು ಬಂಧಿಸಲಾಗಿದೆ.












Click it and Unblock the Notifications