ಫರೀದಾಬಾದ್ ವಿದ್ಯಾರ್ಥಿನಿ ಹತ್ಯೆಯ ಹಿಂದಿದ್ದ ಕಾರಣವನ್ನು ಬಿಚ್ಚಿಟ್ಟ ಆರೋಪಿ
ಚಂಡೀಗಢ, ಅಕ್ಟೋಬರ್ 27: ಕಾಲೇಜಿನ ಎದುರು ನಡೆದ ವಿದ್ಯಾರ್ಥಿನಿ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ.
ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿ ಮೇಲೆ ಆರೋಪಿ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಸಿಸಿಟಿವಿ ದೃಶ್ಯಾವಳಿಗಳು ಹರಿದಾಡಿದ್ದವು.ಪ್ರಕರಣದ ಪ್ರಮುಖ ಆರೋಪಿ ತೌಸೀಫ್ ಬಂಧನವಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಮತ್ತೊಬ್ಬನೊಂದಿಗೆ ಮದುವೆಯಾಗಲು ಆಕೆ ಒಪ್ಪಿದ್ದಕ್ಕೆ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.
ಕೊಲೆಯಾಗುವ ಒಂದು ದಿನದ ಮುಂಚೆ ಅಕ್ಟೋಬರ್ 24ರ ಮಧ್ಯರಾತ್ರಿ ವಿದ್ಯಾರ್ಥಿನಿ ಹಾಗೂ ತೌಸಿಫ್ ಮಾತನಾಡಿದ್ದಾರೆ. ಸುಮಾರು 16 ನಿಮಿಷಗಳ ಕಾಲ ಸಂಭಾಷಣೆ ನಡೆದಿದೆ.

ವಿದ್ಯಾರ್ಥಿನಿ ಕುಟುಂಬದ ಪ್ರಕಾರ ತೌಸಿಫ್ ಹಲವು ದಿನಗಳಿಂದ ಮಗಳಿಗೆ ಕಿರುಕುಳ ನೀಡುತ್ತಿದ್ದ, ಮದುವೆಯಾಗುವಂತೆ ಪೀಡಿಸುತ್ತಿದ್ದ, ಅಪಹರಿಸಿದ್ದ, ಈ ದೂರಿನ ಮೇರೆಗೆ 2018ರಲ್ಲಿ ತೌಸಿಫ್‌ನನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಎರಡೂ ಕುಟುಂಬಗಳು ಸೇರಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರು.
ನನ್ನ ವಿರುದ್ಧ ದೂರು ನೀಡಿರುವ ಆಕೆಯನ್ನು ಕೊಂದು ನಾನು ಸೇಡು ತೀರಿಸಿಕೊಂಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ. ನಾನು ಅರೆಸ್ಟ್ ಆಗಿದ್ದರಿಂದ ಡಾಕ್ಟರ್ ಆಗಲು ಆಗಲಿಲ್ಲ, ಅದೇ ದ್ವೇಷಕ್ಕೆ ಕೊಲೆ ಮಾಡಿದ್ದೀನಿ ಎಂದಿದ್ದಾನೆ.












Click it and Unblock the Notifications