ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಾಯುಸೇನೆಗೆ ಅಮೆರಿಕದ ಚಿನೂಕ್ ಹೆಲಿಕಾಪ್ಟರ್ ಸೇರ್ಪಡೆ

|
Google Oneindia Kannada News

ಚಂಡೀಗಢ, ಮಾರ್ಚ್ 25: ಚಂಡೀಘಡದಲ್ಲಿ ಭಾರತೀಯ ವಾಯುನೆಲೆಗೆ ಅಮೆರಿಕದ ನಾಲ್ಕು ಚಿನೂಕ್ ಹೆಲಿಕಾಪ್ಟರ್ ಇಂದು ಸೇರ್ಪಡೆಗೊಂಡಿದೆ.

ಬಿಕಾನೇರ್ ಬಳಿ ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನಬಿಕಾನೇರ್ ಬಳಿ ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನ

ಸೇನಾ ಕ್ಯಾಂಪ್ ಗಳಿಗೆ ಸೈನಿಕರ ರವಾನೆ, ಫಿರಂಗಿಗಳ ರವಾನೆ, ಇತರೆ ಶಸ್ತ್ರಾಸ್ತ್ರಗಳ ಪೂರೈಕೆ, ಇಂಧನವನ್ನು ಸಾಗಿಸಬಲ್ಲದು. ಒಟ್ಟು 9.6 ಟನ್ ತೂಕದ ವಸ್ತುಗಳನ್ನು ಎತ್ತಿಕೊಂಡು ಹೋಗುವ ಸಾಮಥ್ರ್ಯ ಈ ಹೆಲಿಕಾಪ್ಟರ್ ಗೆ ಇದೆ. ಬೋಯಿಂಗ್ ಕಂಪನಿ ಇದೂವರೆಗೆ ಒಟ್ಟು 1,179 ಹೆಲಿಕಾಪ್ಟರ್ ಗಳನ್ನು ಉತ್ಪಾದಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

2015ರಲ್ಲಿ ಭಾರತ ಸರ್ಕಾರ ಅಮೆರಿಕ ಮೂಲದ ಬೋಯಿಂಗ್ ಕಂಪನಿಯ ಜೊತೆ 15 ಚಿನೂಕ್ ಹೆಲಿಕಾಪ್ಟರ್ ಖರೀದಿ ಸಂಬಂಧ 10 ಸಾವಿರ ಕೋಟಿ ರೂ. ವೆಚ್ಚದ ಒಪ್ಪಂದ ಮಾಡಿಕೊಂಡಿತ್ತು. 15ರ ಪೈಕಿ 4 ಹೆಲಿಕಾಪ್ಟರ್ ಗಳು ಈಗ ಭಾರತಕ್ಕೆ ಬಂದಿವೆ.

Induction ceremony of Chinook helicopters at Air Force Station 12 wing in Chandigarh

ದಾಳಿ ನಡೆಸಬಲ್ಲ 22 ಅಪಾಚಿ ಹೆಲಿಕಾಪ್ಟರ್ ಖರೀದಿ ಸಂಬಂಧ ಭಾರತ ಬೋಯಿಂಗ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ಹೆಲಿಕಾಪ್ಟರ್ ಗಳು ಪಂಜಾಬಿನಲ್ಲಿರುವ ಪಠಾಣ್‍ಕೋಟ್ ವಾಯುನೆಲೆಗೆ ಬರಲಿವೆ.

ಯಲಹಂಕ ವಾಯುನೆಲೆಯಿಂದ ಗ್ವಾಲಿಯರ್‌ಗೆ 53 ಏರ್‌ಜೆಟ್‌ಗಳ ರವಾನೆ ಯಲಹಂಕ ವಾಯುನೆಲೆಯಿಂದ ಗ್ವಾಲಿಯರ್‌ಗೆ 53 ಏರ್‌ಜೆಟ್‌ಗಳ ರವಾನೆ

ಹೊಸದಾಗಿ ಬಂದಿರುವ ಚಿನೂಕ್ ಹೆಲಿಕಾಪ್ಟರ್ ಗಳು ರಷ್ಯಾ ನಿರ್ಮಿತ ಮಿ-1, ಮಿ-26, ಮಿ-35 ಹೆಲಿಕಾಪ್ಟರ್ ಗಳ ಜಾಗವನ್ನು ತುಂಬಲಿದೆ.

ಬಹುಉಪಯೋಗಿ ಹೆಲಿಕಾಪ್ಟರ್ ಚಿನೂಕ್ ಎಲ್ಲ ಬಗೆಯ ಸೇನಾ ಕಾರ್ಯಾಚರಣೆಗೆ ನೆರವಾಗಲಿದ್ದು, ಪ್ರಮುಖವಾಗಿ ಪ್ರವಾಹ, ಅಗ್ನಿ ಅವಘಡ, ಸೇನಾ ವಸ್ತುಗಳ ಪೂರೈಕೆಯಂತಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

English summary
The Indian Air Force (IAF), which is undergoing modernization, formally inducted CH-47F (I) Chinook, an advanced multi-mission helicopter at Air Force Station Chandigarh on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X