ಪಂಜಾಬ್‌ನಲ್ಲಿ ತರಬೇತಿ ಹಂತದಲ್ಲಿದ್ದ ಮಿಗ್-29 ಯುದ್ಧ ವಿಮಾನ ಪತನ
ಚಂಡೀಗಢ, ಮೇ 8: ಭಾರತೀಯ ವಾಯು ಸೇನೆಯ ತರಬೇತಿ ಹಂತದಲ್ಲಿದ್ದ ಮಿಗ್-29 ಯುದ್ಧ ವಿಮಾನ ಪಂಜಾಬ್‌ನಲ್ಲಿ ಇಂದು ಪತನಗೊಂಡಿದೆ.
ನಿರ್ಜನ ಪ್ರದೇಶದಲ್ಲಿ ವಿಮಾನಪತನವಾಗಿದ್ದರಿಂದ ಹೆಚ್ಚಿನ ಸಾವು-ನೋವು ಸಂಭವಿಸಿಲ್ಲ. ಪ್ರಸ್ತುತ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ದೌಡಾಯಿಸಿದ್ದು, ಪೈಲಟ್ ರನ್ನು ರಕ್ಷಿಸಿದ್ದಾರೆ. ಅಂತೆಯೇ ವಾಯುಸೇನೆಯ ಉನ್ನತಾಧಿಕಾರಿಗಳು ಕೂಡ ಅಪಘಾತ ಸ್ಥಳಕ್ಕೆ ಆಗಮಿಸುತ್ತಿದ್ದು, ಅಪಘಾತ ಮಾಹಿತಿ ಪಡೆಯಲಿದ್ದಾರೆ.
ಪಂಜಾಬ್ ನ ನವಾನ್ ಶಹರ್ ನಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಯುದ್ಧ ವಿಮಾನ ಪತನಕ್ಕೂ ಮುನ್ನ ಪೈಲಟ್ ಪ್ಯಾರಾಚೂಟ್ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications