ಕೊರೊನಾ ಲಸಿಕೆಯ 2ನೇ ಡೋಸ್ ಪಡೆಯಲು ಹರ್ಯಾಣ ಸಚಿವ ಅನಿಲ್ ವಿಜ್ ಹಿಂದೇಟು ಏಕೆ?

ನವದೆಹಲಿ,ಮಾರ್ಚ್ 1: ಈ ಹಿಂದೆಯೇ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದ ಹರ್ಯಾಣ ಸಚಿವ ಅನಿಲ್ ವಿಜ್ ಇದೀಗ ಎರಡನೇ ಡೋಸ್ ಪಡೆಯಲು ಹಿಂದೇಟು ಹಾಕಿದ್ದಾರೆ.
ಈ ಕುರಿತು ಅವರೇ ಖುದ್ದಾಗಿ ಬರೆದುಕೊಂಡಿದ್ದಾರೆ, ಹಾಗಾದರೆ ಅವರು ಎರಡನೇ ಬಾರಿ ಲಸಿಕೆ ಬೇಡ ಎನ್ನಲು ಕಾರಣವೇನಿರಬಹುದು ಎಂಬುದನ್ನು ನೋಡೋಣ.

ಮಾರ್ಚ್ 1 ರಿಂದ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ವಿತರಣೆ ಆರಂಭವಾಗಿದೆ, ಈಗ ಜನರು ಲಸಿಕೆ ಪಡೆಯಲು ಯಾವುದೇ ರೀತಿಯ ಹಿಂಜರಿಯಬಾರದು, ನಾನು ಲಸಿಕೆ ಪಡೆದ ಹೊರತಾಗಿಯೂ ಸೋಂಕಿಗೆ ತುತ್ತಾಗಿದ್ದೆ. ಬಳಿಕ ಚೇತರಿಸಿಕೊಂಡಿದ್ದೆ. ನನ್ನ ದೇಹದಲ್ಲಿ ಈಗ ಪ್ರತಿಕಾಯಗಳ ಸಂಖ್ಯೆ 300 ಆಗಿದ್ದು, ಇದು ಹೆಚ್ಚಿನ ಪ್ರಮಾಣದ್ದು ಎಂದು ವೈದ್ಯರು ಹೇಳಿದ್ದಾರೆ ಎಂದು ವಿಜ್ ತಿಳಿಸಿದ್ದಾರೆ.

ಬಹುಶಃ ನಾನು ಈ ಹಿಂದೆ ತೆಗೆದುಕೊಂಡಿದ್ದ ಕೋವಿಡ್ ಲಸಿಕೆಯ ಪರಿಣಾಮದಿಂದಾಗಿ ನನ್ನ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿರಬಹುದು. ಹೀಗಾಗಿ ನನಗೆ ಲಸಿಕೆಯ ಅಗತ್ಯವಿಲ್ಲ. ಹೀಗಾಗಿ ನಾನು ಲಸಿಕೆ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Haryana Health Minister Anil Vij Explains Why He Wont Take Covid Vaccine

ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ವೇಳೆ ಮಾಹಿತಿ ನೀಡಿದ್ದ ಲಸಿಕೆ ಸಂಸ್ಥೆ 2ನೇ ಡೋಸ್ ಪಡೆದರಷ್ಟೇ ಲಸಿಕೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದರು.

ಅನಿಲ್ ವಿಜ್ ಈ ಹಿಂದೆ ಮೊದಲ ಡೋಸ್ ಲಸಿಕೆ ಪಡೆದ ಹೊರತಾಗಿಯೂ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನವೆಂಬರ್ ನಲ್ಲಿ ಅವರಿಗೆ ಕೋವಿಡ್ ಲಸಿಕೆ ನೀಡಲಾಗಿತ್ತು. ಆದರೆ ಡಿಸೆಂಬರ್ ನಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+