ಹರ್ಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾಗೆ ಕೊರೊನಾ ಸೋಂಕು ದೃಢ
ಚಂಡೀಗಢ, ಅಕ್ಟೋಬರ್ 06: ಹರ್ಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಖುದ್ದಾಗಿ ಅವರೇ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚೌಟಾಲಾ ಅವರಿಗೆ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದಾಗಿ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ನಾನು ಆರೋಗ್ಯವಾಗಿದ್ದೇನೆ, ವೈದ್ಯರ ಸಲಹೆ ಮೇರೆಗೆ ಗೃಹಬಂಧನದಲ್ಲಿರಲಿದ್ದೇನೆ ಎಂದು ಹೇಳಿದ್ದಾರೆ.
सभी साथियों के लिए सूचना -
— Dushyant Chautala (@Dchautala) October 6, 2020
मेरी Covid-19 की रिपोर्ट positive आई है। मेरा स्वास्थ्य ठीक है। आग्रह है कि बीते कुछ दिनों में मेरे संपर्क में आए लोग अपना ध्यान रखें और डॉक्टर सलाह दें तो टेस्ट करवाएं। pic.twitter.com/whuguUR3bp
ನನ್ನ ಜೊತೆ ಯಾರ್ಯಾರು ಸಂಪರ್ಕದಲ್ಲಿದ್ದೀರೋ ಅವರೆಲ್ಲರೂ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿ ಟ್ವಿಟ್ಟರ್‌ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬರುವವರೆಗೂ ಕೂಡ ಯಾವುದೇ ಲಕ್ಷಣಗಳಿರಲಿಲ್ಲ. ವರದಿ ಪಾಸಿಟಿವ್ ಬಂದ ಬಳಿಕ ತೀವ್ರ ನಿಗಾದಲ್ಲಿರಿಸಲಾಗಿದೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೆಲವು ಕ್ಯಾಬಿನೆಟ್ ಸಚಿವರು, ಸ್ಪೀಕರ್ ಗ್ಯಾನ್ ಚಂದ್ ಗುಪ್ತಾಗೂ ಕೊರೊನಾ ಸೋಂಕು ತಗುಲಿದೆ.












Click it and Unblock the Notifications