ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ರ‍್ಯಾಲಿಯಿಂದಾಗಿ ಪಂಜಾಬ್ ಸಿಎಂ ಚನ್ನಿ ಹೆಲಿಕಾಪ್ಟರ್ ಹಾರಾಟ ನಿಷೇಧ

|
Google Oneindia Kannada News

ಚಂಡೀಗಢ, ಫೆಬ್ರವರಿ 14: ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಮೆರವಣಿಗೆಯಿಂದಾಗಿ ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಅವರ ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶ ನೀಡದಿರುವ ಘಟನೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಚಾರದಲ್ಲಿ ಮತ್ತೊಮ್ಮೆ ವಿವಾದ ಎದ್ದಿದೆ, ವಾಸ್ತವವಾಗಿ, ಪ್ರಧಾನಿ ಭೇಟಿಯ ಕಾರಣದಿಂದ ಮುಖ್ಯಮಂತ್ರಿ ಚನ್ನಿ ಹೋಶಿಯಾರ್‌ಪುರದಲ್ಲಿ ರಾಹುಲ್ ಗಾಂಧಿಯ ರ‍್ಯಾಲಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಪಂಜಾಬ್‌ ಚುನಾವಣೆ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲುಪಂಜಾಬ್‌ ಚುನಾವಣೆ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ಪ್ರಧಾನಿ ಭದ್ರತೆ ಕಾರಣದಿಂದಾಗಿ ಚನ್ನಿ ಅವರ ಹೆಲಿಕಾಪ್ಟರ್ ಹಾರಾಡಲು ಅವಕಾಶ ನೀಡಿಲ್ಲ, ಚನ್ನಿ ಚಂಡೀಗಢದಿಂದ ಹೋಶಿಯಾರ್‌ಪುರಕ್ಕೆ ತೆರಳಬೇಕಾಗಿತ್ತು.

Battle For Punjab Hits The Sky: CM Channis Helicopter Not Allowed To Take Off Due To PMs Movement

ಮತ್ತೊಂದೆಡೆ, ಈ ಇಡೀ ವಿವಾದದ ಬಗ್ಗೆ ಚನ್ನಿ ಮಾತನಾಡಿ, ರಾಜಕೀಯದ ಕಾರಣದಿಂದ ತಮ್ಮ ಹೆಲಿಕಾಪ್ಟರ್ ಹಾರಲು ಬಿಡಲಿಲ್ಲ ಎಂದು ಹೇಳಿದರು, ಪ್ರಚಾರಕ್ಕೆ ಬಿಡದಿರುವುದು ಸರಿಯಲ್ಲ ಎಂದರು.

ಈ ವೇಳೆ ಸುನೀಲ್ ಜಾಖರ್ ಹೋಶಿಯಾರ್‌ಪುರದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಸಿಎಂ ಇಲ್ಲಿಗೆ ಬರಬೇಕಿತ್ತು ಆದರೆ ಅವರ ಅನುಮತಿಯನ್ನು ರದ್ದುಗೊಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಚುನಾವಣಾ ಆಯೋಗ ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದರೆ, ಈ ಚುನಾವಣೆ ನೆಪಮಾತ್ರ ಎಂದು ಭಾವಿಸುತ್ತೇವೆ, ಕೆಲವು ದಿನಗಳ ಹಿಂದೆ ಪ್ರಧಾನಿ ಅವರು ಪಂಜಾಬ್‌ಗೆ ಬಂದಾಗ ಫಿರೋಜ್‌ಪುರಕ್ಕೆ ಹೋಗಲು ಬಿಡಲಿಲ್ಲ ಮತ್ತು ಅವರ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು.

ಪಂಜಾಬ್‌ ಚುನಾವಣೆ: ಸರ್ಕಾರಿ ಉದ್ಯೋಗದಲ್ಲಿ ರಾಜ್ಯದ ಶೇ.75 ಯುವಕರಿಗೆ ಮೀಸಲಾತಿ, ಬಿಜೆಪಿ ಭರವಸೆಪಂಜಾಬ್‌ ಚುನಾವಣೆ: ಸರ್ಕಾರಿ ಉದ್ಯೋಗದಲ್ಲಿ ರಾಜ್ಯದ ಶೇ.75 ಯುವಕರಿಗೆ ಮೀಸಲಾತಿ, ಬಿಜೆಪಿ ಭರವಸೆ

ಇಂದು ಚರಣ್‌ಜಿತ್ ಸಿಂಗ್ ಚನ್ನಿಯನ್ನು ಹೋಶಿಯಾರ್‌ಪುರಕ್ಕೆ ಬರದಂತೆ ತಡೆಯುತ್ತಿದ್ದಾರೆ, ಮೋದಿಯವರು ಈ ಕುರಿತು ಸ್ವಲ್ಪ ಆಲೋಚಿಸಬೇಕು ಎಂದರು.

ಜನವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದರು. ಭಾರಿ ಮಳೆಯಿಂದಾಗಿ ರಸ್ತೆ ಮೂಲಕ ಹೋಗಬೇಕಾಯಿತು ಆ ಸಮಯದಲ್ಲಿ ಪ್ರತಿಭಟನಾಕಾರರು ಹುಸೇನಿವಾಲಾದಿಂದ 30 ಕಿ.ಮೀ ದೂರದಲ್ಲಿದ್ದರು. ಆ ಸಮಯದಲ್ಲಿ ಮೋದಿ ಬೆಂಗಾವಲು ಪಡೆ 20 ನಿಮಿಷಗಳ ಕಾಲ ಅಸುರಕ್ಷಿತ ಪ್ರದೇಶದಲ್ಲಿ ಇರಬೇಕಾಯಿತು.

ಅಪ್ಪ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ: ಸಿಧು ಪುತ್ರಿ ರಾಬಿಯಾಅಪ್ಪ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ: ಸಿಧು ಪುತ್ರಿ ರಾಬಿಯಾ

ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರು ಸ್ಪರ್ಧಿಸುತ್ತಿರುವ ಎರಡೂ ಸ್ಥಾನಗಳಲ್ಲಿ ಸೋಲುತ್ತಾರೆ ಮತ್ತು ಇದು ಅವರ ಮತ್ತೊಂದು ಟೆಲಿಪೋಲ್ ಮೂಲಕ ದೃಢೀಕರಿಸಲ್ಪಟ್ಟಿದೆ. ಮೂರು ಬಾರಿ ಪುನರಾವರ್ತನೆಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದರು.

ಪಂಜಾಬ್‍ನ ಅಮೃತಸರದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಕೇಜ್ರಿವಾಲ್ ಅವರು, ಚರಣ್‍ಜಿತ್ ಸಿಂಗ್ ಚನ್ನಿ ಅವರು ಚಮ್ಕೌರ್ ಸಾಹಿಬ್ ಮತ್ತು ಭದೌರ್‌ನಿಂದ ಸ್ಪರ್ಧಿಸುತ್ತಿದ್ದಾರೆ. ನಾವು ಮೂರು ಬಾರಿ ಸಮೀಕ್ಷೆ ನಡೆಸಿದ್ದೇವೆ. ಚನ್ನಿ ಸಾಹೇಬ್ ಎರಡೂ ಸ್ಥಾನಗಳಲ್ಲಿಯೂ ಸೋಲುತ್ತಿದ್ದಾರೆ ಎಂದಿದ್ದಾರೆ.

ಚಮ್ಕೌರ್‌ನಲ್ಲಿ ಆಮ್ ಆದ್ಮಿ ಪಕ್ಷ ಶೇ.52ರಷ್ಟು ಮತಗಳನ್ನು ಪಡೆಯಲಿದೆ. ಇದು ಭದೌರ್‌ನಲ್ಲಿ ಶೇಕಡಾ 48 ರಷ್ಟು ಮತಗಳನ್ನು ಪಡೆಯುತ್ತದೆ. ಹಾಗಾದರೆ ಚರಣ್‍ಜಿತ್ ಸಿಂಗ್ ಚನ್ನಿ ಶಾಸಕರೇ ಆಗದಿದ್ದರೆ, ಮುಖ್ಯಮಂತ್ರಿ ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

English summary
On Monday, Punjab Chief Minister Charanjit Singh Channi's helicopter was not permitted to take off from Chandigarh's Rajendra Park as a 'no-fly zone' had been imposed due to the movement of Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X