• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಮೇ 30 ರಂದು ಜಿ.ಪಂ ಅಧ್ಯಕ್ಷರ ಆಯ್ಕೆ ಚುನಾವಣೆ

|
Google Oneindia Kannada News

ಚಾಮರಾಜನಗರ, ಮೇ 30: ಚಾಮರಾಜನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯು ಶನಿವಾರ ಬೆಳಿಗ್ಗೆ 11.30 ಕ್ಕೆ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣಾ ಸಭೆ ನಡೆಯಲಿದೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದ್ದು, ಚಾಮರಾಜನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ನರೇಗಾದಿಂದ ಚಾಮರಾಜನಗರದ ಕೆರೆಗಳಿಗೆ ಮರುಜೀವ ಬಂತುನರೇಗಾದಿಂದ ಚಾಮರಾಜನಗರದ ಕೆರೆಗಳಿಗೆ ಮರುಜೀವ ಬಂತು

ಚಾಮರಾಜನಗರ ಜಿಲ್ಲಾ ಪಂಚಾಯತ್ ನ ಒಟ್ಟು 23 ಸ್ಥಾನಗಳಲ್ಲಿ 9 ಬಿಜೆಪಿ, 14 ಕಾಂಗ್ರೆಸ್ ಸದಸ್ಯರಿದ್ದಾರೆ. ಪೂರ್ಣ ಬಹುಮತವಿರುವ ಕಾಂಗ್ರೆಸ್ ಪಕ್ಷವು ನಿರಾಯಾಸವಾಗಿ ಅಧಿಕಾರ ಹಿಡಿಯಲಿದೆ.

ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಯು ಮುಂದೂಡಲಾಗಿತ್ತು. ಮಾ.೧೮ ರಂದು ಚಾಮರಾಜನಗರ ಜಿ.ಪಂ ಪ್ರಭಾರ ಅಧ್ಯಕ್ಷರಾಗಿ ಮಹೇಶ್ ಆಯ್ಕೆಯಾಗಿದ್ದರು. ಈ ಬಾರಿ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಕ್ಷೇತ್ರದ ಸದಸ್ಯೆ ಅಶ್ವಿನಿ ಎನ್ನುವವರು ಜಿ.ಪಂ ಅಧ್ಯಕ್ಷೆಯಾಗುವುದು ಖಚಿತವಾಗಿದೆ.

ಜಿಲ್ಲಾ ಪಂಚಾಯತ್ ನ ಎರಡನೇ ಅವಧಿಯಲ್ಲಿ ಅಧಿಕಾರ ಹಂಚಿಕೆ ಅನ್ವಯ ಅಶ್ವಿನಿ ಅವರು ಅಧ್ಯಕ್ಷ ಗಾದಿಗೇರಲಿದ್ದಾರೆ. ಜಿ.ಪಂ ಅಧಿಕಾರವಧಿ ಹನ್ನೊಂದು ತಿಂಗಳು ಮಾತ್ರ ಉಳಿದಿದೆ.

English summary
Chamarajanagar Zilla Panchayat President Election will be held at 11:30 am, On Saturday under the chairmanship of the Regional Commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X