ಹನೂರು: ಮಲೆ ಮಾದಪ್ಪನ ಬೆಟ್ಟದ ನೌಕರರಿಗೆ ಸಂಕ್ರಾತಿ ಉಡುಗೊರೆ ನೀಡಿದ ವಿ.ಸೋಮಣ್ಣ ಪತ್ನಿ

ಚಾಮರಾಜನಗರ, ಜನವರಿ, 11: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸೆಕ್ಯೂರಿಟಿ ಗಾರ್ಡ್ ಹಾಗೂ ಮಹಿಳಾ ನೌಕರರಿಗೆ ಮಾಜಿ ಸಚಿವ ವಿ.ಸೋಮಣ್ಣ ಅವರ ಪತ್ನಿ ಶೈಲಜಾ ಸೋಮಣ್ಣ ಆಹಾರ ಪದಾರ್ಥಗಳ ಕಿಟ್‌ಗಳನ್ನು ಇಂದು (ಜನವರಿ 11) ವಿತರಣೆ ಮಾಡಿದರು.

ಎಣ್ಣೆ ಮಜ್ಜನ ಹಾಗೂ ಎಳ್ಳಿನ ಅಮಾವಾಸ್ಯೆ ಪೂಜೆ ಹಿನ್ನೆಲೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಶೈಲಜಾ ಸೋಮಣ್ಣ ಮಹದೇಶ್ವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

V.Somanna Wife who gave gifts to the Male mahadeshwara hill employees

ನಂತರ ದೇವಾಲಯದ ಶ್ರೀ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಮಹದೇಶ್ವರ ಬೆಟ್ಟ ಧಾರ್ಮಿಕ ಪುಣ್ಯಸ್ಥಳ, ಹಾಗಾಗಿ ಇಲ್ಲಿಗೆ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಈ ಹಿನ್ನೆಲೆ ಭಕ್ತರ ಸೇವೆಗಾಗಿ ನಿಮ್ಮ ಶ್ರಮ ಅಪಾರ. ಇದನ್ನು ಮನಗಂಡು ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಇನ್ನು ಉತ್ತಮವಾಗಿ ಕಾರ್ಯನಿರ್ವಹಿಸುವುದರ ಮೂಲಕ ಭಕ್ತರಿಗೆ ಉತ್ತಮ ಸೇವೆ ನೀಡುವುದಾಗಿ ತಿಳಿಸಿದರು.

ಪ್ರಾಧಿಕಾರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಬೇಳೆ, ಧಾನ್ಯಗಳು, ಎಣ್ಣೆ, ಸಾಬೂನು, ಗೋದಿ ಹಿಟ್ಟು, ಅಕ್ಕಿ ಸೇರಿದಂತೆ 19 ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು. ಇನ್ನು ಮಹಿಳಾ ಸಿಬ್ಬಂದಿಗೆ 50 ಸೀರೆಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಉಡುಗೊರೆಯಾಗಿ ವಿತರಿಸಿದರು.

ಕಾಡ್ಗಿಚ್ಚು ಕಾವಲುಗಾರರಾಗಿ ಸೋಲಿಗರ ನೇಮಕ

ಇನ್ನು ಕಾಡಿ‌ನ ಕಿರು ಅರಣ್ಯ ಉತ್ಪನ್ನಗಳನ್ನೇ ನಂಬಿ ಜೀವನ ಸಾಗಿಸು ಸೋಲಿಗರು ಮತ್ತು ಬುಡಕಟ್ಟು ಜನರಿಗೆ ಸದ್ಯ ಈಗ ಕಾಡ್ಗಿಚ್ಚಿನಿಂದ ಕಾಡನ್ನು ಪಾರು ಮಾಡುವ ಹೊಣೆ ಹೊತ್ತಿದ್ದಾರೆ. ಸೋಲಿಗರ ಜೀವನಕ್ಕೆ ಬಂಡೀಪುರ ಅರಣ್ಯ ಇಲಾಖೆಯು ನೆರವಾಗಿದ್ದು, ನೂರಾರು ಸೋಲಿಗ ಸಮುದಾಯದ ಜನರಿಗೆ ಬಂಡೀಪುರ ಅರಣ್ಯ ಇಲಾಖೆ 5-6 ತಿಂಗಳ ನೌಕರಿ ನೀಡಿದೆ.

ಬರಗಾಲದಲ್ಲಿ ಕೂಲಿಗೆ ಕಷ್ಟ ಪಡುತ್ತಿದ್ದ ಸೋಲಿಗರಿಗೆ ಇದೀಗ ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ವೀಕ್ಷಕರಾಗಿ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದು, ಬೆಂಕಿ ರೇಖೆ ನಿರ್ಮಾಣ, ಹಾಗೂ ಕಾಡ್ಗಿಚ್ಚು ಕಾವಲುಗಾರರಾಗಿ ಸೋಲಿಗರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ 500ಕ್ಕೂ ಹೆಚ್ಚು ಸೋಲಿಗರಿಗೆ ದಿನಗೂಲಿ ಕೆಲಸ ನೀಡಿದ್ದು, ತಿಂಗಳಿಗೆ ಆಜುಮಾಸು 16 ಸಾವಿರ ವೇತನ ಸಿಗುತ್ತಿದೆ.

ಈ ಕುರಿತು ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, ಶೇಕಡಾ 100ರಷ್ಟು ಕಾಡ್ಗಿಚ್ಚು ಕಾವಲುಗಾರರನ್ನಾಗಿ ಸ್ಥಳೀಯ ಆದಿವಾಸಿಗಳನ್ನು ನೇಮಕ ಮಾಡಲಾಗಿದೆ. ಡಿಸೆಂಬರ್‌ನಲ್ಲಿ ಬೆಂಕಿ ರೇಖೆ ನಿರ್ಮಾಣ ಮಾಡಲು ನೇಮಕಗೊಂಡ ಬಳಿಕ ಅವರನ್ನೇ ಕಾಡ್ಗಿಚ್ಚು ಕಾವಲುಗಾರರನ್ನಾಗಿ ಮುಂದುವರೆಸಲಾಗುತ್ತದ. ಕನಿಷ್ಠ 6 ತಿಂಗಳುಗಳ ತನಕ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮಾಡಲಿದ್ದು, 16 ಸಾವಿರ ಸಂಬಳ ಸಿಗಲಿದೆ. ಬಹಳಷ್ಟು ಮಂದಿ ಬಂಡೀಪುರ ಅರಣ್ಯ ಇಲಾಖೆ ಮೇಲೆ ಅವಲಂಬಿತರಾಗಿದ್ದಾರೆ ಎಂದು ಹೇಳಿದರು.

ಮಳೆಗಾಲ ಆರಂಭವಾಗಿ ಉತ್ತಮ ಮಳೆ ಬರುವವರೆಗೂ ಕೂಡ ಇವರು ಕಾಡ್ಗಿಚ್ಚು ಕಾವಲುಗಾರರಾಗಿ ಕಾರ್ಯ ನಿರ್ವಹಿಸಲಿದ್ದ ಬೆಂಕಿಯಿಂದ ಕಾಡನ್ನು ಪಾರು ಮಾಡಲು ಕಾಡಿನ ಮಕ್ಕಳು ಹೊಣೆ ಹೊತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+