ಚಿರತೆಗೆ ವಿಷಪ್ರಾಶನ: ಇಬ್ಬರು ಆರೋಪಿಗಳ ಬಂಧನ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 8: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಓಂಕಾರ ಅರಣ್ಯವಲಯದಲ್ಲಿ ನಡೆದ ಚಿರತೆ ವಿಷಪ್ರಾಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ತಾಲೂಕಿನ ಓಂಕಾರ ಅರಣ್ಯ ವಲಯದ ಕಾಡಂಚಿನ ಗ್ರಾಮ ಹಂಚೀಪುರದಲ್ಲಿ ಎರಡು ತಿಂಗಳ ಹಿಂದೆ ಚಿರತೆಗೆ ವಿಷಪ್ರಾಶನ ನಡೆಸಿ, ಹತ್ಯೆಗೈದ ಆರೋಪಕ್ಕೆ ಸಂಬಂಧಿಸಿದಂತೆ ಹಂಚೀಪುರದ ಕುಮಾರ ಮತ್ತು ನಾಗೇಶ್ ಎಂಬುವವರನ್ನು ಬಂಧಿಸಲಾಗಿದೆ.[ಎಚ್.ಡಿ.ಕೋಟೆ ಗಂಗಡಹೊಸಹಳ್ಳಿಯಲ್ಲಿ ರೈತರ ಮೇಲೆ ಚಿರತೆ ದಾಳಿ]

Two arrested in Leopard poison feeding case

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಉಳಿದ ಐವರು ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಈ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ನೀರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two arrested in Leopard poison feeding case in Bandipur. Other five accused arrestd some time before. Two were requested for bhel in court. But judge handed over them judicial custody.
Please Wait while comments are loading...