ಚಾಮರಾಜನಗರದಲ್ಲಿ ಮತ್ತೆ ಕಳ್ಳರ ಕಾಟ: ವೃದ್ಧರು.. ಮಹಿಳೆಯರೇ ಟಾರ್ಗೆಟ್‌..ಚಿನ್ನ..ನಗದು ಮಂಗಮಾಯ

ಚಾಮರಾಜನಗರ, ಸೆಪ್ಟೆಂಬರ್‌ 30: ವೃದ್ಧನ ಕೈ-ಕಾಲು ಕಟ್ಟಿ ಮನೆಯೊಂದರಲ್ಲಿ ಚಿನ್ನ, ಹಣವನ್ನು ಹಾಡಹಗಲೇ ದೋಚಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಮನೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸದೊಡ್ಡಿ ಗ್ರಾಮದ ಜಗದೀಶ(77) ಎಂಬವರ ಮನೆಯಲ್ಲಿ ಕಳವಾಗಿದೆ.

ಹೊಸದೊಡ್ಡಿ ಗ್ರಾಮದ ಜಗದೀಶ್ ರೆಡ್ಡಿ ಅವರ ಪತ್ನಿ ರುಕ್ಮಿಣಿ ಕೌದಳ್ಳಿ ಗ್ರಾಮಕ್ಕೆ ಹಾಲು ಹಾಕಲು ತೆರಳಿದ್ದಾಗ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಜಗದೀಶ್‌ರವರನ್ನು ನೀರು ಕೊಡುವಂತೆ ಕೇಳಿದ್ದಾರೆ. ನೀರು ತರಲು ಒಳಗೆ ಹೋಗುತ್ತಿದ್ದಂತೆ ಇಬ್ಬರು ಅಪರಿಚಿತರು ಅವರ ಕೈಕಾಲು, ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕಟ್ಟಿ ಹಾಕಿದ್ದಾರೆ.

Theft Cases Increasing In Chamarajanagar District Hanur Taluk

ಬಳಿಕ ಮನೆಯಲ್ಲಿದ್ದ 168 ಗ್ರಾಂ ಚಿನ್ನ ಹಾಗೂ 41,000 ರೂಪಾಯಿ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಜಗದೀಶ್ ರೆಡ್ಡಿ ರವರ ಅಣ್ಣ ಮನೆಗೆ ಬಂದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಅಪರಿಚಿತ ವ್ಯಕ್ತಿಗಳನ್ನು ಧರ್ಮ ರೆಡ್ಡಿ ಎಂಬುವರು ನೋಡಿದ್ದು 30 ರಿಂದ 35 ವರ್ಷ ಒಳಗಿನ ವ್ಯಕ್ತಿಗಳಾಗಿದ್ದು, ಜೀನ್ಸ್ ಪ್ಯಾಂಟ್ ಧರಿಸಿ ಟೋಪಿ ಧರಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಭಾರ ಪಿ.ಐ ಶಶಿಕುಮಾರ್, ಕಾನೂನು ವಿಭಾಗದ ಈಶ್ವರ್, ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಲೋಕೇಶ್, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹನೂರಿನಲ್ಲಿ ಕಳ್ಳತನ 20 ಲಕ್ಷ ನಗದು 308 ಗ್ರಾಂ ಚಿನ್ನ ಕಳ್ಳತನ

ಹನೂರು ಪಟ್ಟಣದ 11 ವಾರ್ಡಿನಲ್ಲಿ ಸೆಪ್ಟೆಂಬರ್ ಹತ್ತರಂದು ಚಿನ್ನ ದೊರೆ, ಧನಲಕ್ಷ್ಮಿ ಎಂಬುವರ ಮನೆಯಲ್ಲಿ 20 ಲಕ್ಷ ನಗದು 308 ಗ್ರಾಂ ಚಿನ್ನ ಕಳ್ಳತನವಾಗಿದೆ. ಈ ಪ್ರಕರಣವು ಸಹ ತನಿಖಾ ಹಂತದಲ್ಲಿ ಇದೆ.

Theft Cases Increasing In Chamarajanagar District Hanur Taluk

ಜುಲೈ 31 ರಂದು ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರನತ್ತ ಗ್ರಾಮದ ರಾಜಮ್ಮ ಎಂಬುವರು ದೇವನ ಬೀಜಗಳನ್ನು ಸಂಗ್ರಹಣೆ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಅಕ್ಕ ಪಕ್ಕದಲ್ಲಿ ಜಮೀನು ಸಿಗುತ್ತದೆಯೇ ಎಂದು ಮಾತನಾಡಿದ್ದಾರೆ. ಬಳಿಕ ಏಕಾಏಕಿ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಬಿಚ್ಚಿಕೊಡುವಂತೆ ಹೆದರಿಸಿ ಓಲೆ ದೋಚಿ ಪರಾರಿಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಒಟ್ಟರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂರು ಪ್ರಕರಣಗಳು ನಡೆದಿದ್ದು, ಎರಡು ಪ್ರಕರಣದಲ್ಲಿ ಚಿನ್ನ ದೋಚಿ, ಇನ್ನೊಂದು ಪ್ರಕರಣದಲ್ಲಿ ಚಿನ್ನ, ನಗದು ದೋಚಿ ಪರಾರಿಯಾಗಿರುವ ಘಟನೆಗಳು ತಾಲೂಕು ವ್ಯಾಪ್ತಿಯ ಸ್ಥಳೀಯರಲ್ಲಿ ತಲ್ಲಣ ಉಂಟುಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+