Ration Card: ಅಮಾನತುಗೊಂಡ ಬಿಪಿಎಲ್ ಪಡಿತರ ಚೀಟಿಗಳ ಮರುಚಾಲನೆ
BPL Card: ಈಗಾಗಲೇ ರಾಜ್ಯದಲ್ಲಿ ಸರ್ಕಾರವು ನಕಲಿ ದಾಖಲೆ ನೀಡಿ ಪಡೆದಂತರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಾ ಬರುತ್ತಿದ್ದು, ಇಂತಹವರಿಗೆ ಎಪಿಎಲ್ ಕಾರ್ಡ್‌ಗಳನ್ನು ನೀಡಲು ಮುಂದಾಗಿತ್ತು. ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಅಮಾನತುಗೊಳಿಸಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಮರುಚಾಲನೆಗೊಳಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಯೋಗಾನಂದ ತಿಳಿಸಿದ್ದಾರೆ.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಆಯುಕ್ತರ ನಿರ್ದೇಶನದಂತೆ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಜನಾಕ್ರೋಶದ ಬಳಿಕ ಅಧಿಕಾರಿಗಳು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ಅಮಾನತುಗೊಳಿಸಿರುವ 6 ತಿಂಗಳು ಪಡಿತರ ತೆಗೆದುಕೊಳ್ಳದವರ 7,522 ಪಡಿತರ ಚೀಟಿಗಳು, 1.20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವವರಲ್ಲಿ ಅರ್ಹರಿರುವ 453 ಪಡಿತರ ಚೀಟಿಗಳು ಮತ್ತು ಆದಾಯ ತೆರಿಗೆ ಇಲಾಖೆಗೆ ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್‍ಗಾಗಿ 1,000 ರೂಪಾಯಿ ದಂಡ ಪಾವತಿಸಿರುವ ಪಡಿತರ ಚೀಟಿಗಳನ್ನು ಮರುಚಾಲನೆಗೊಳಿಸಲಾಗುತ್ತಿದೆ ಎಂದು ಪ್ರಕಟನಣೆ ಮೂಲಕ ಮಾಹಿತಿ ಕೊಟ್ಟಿದ್ದಾರೆ.
ಅಮಾನತುಗೊಂಡ ಪಡಿತರ ಚೀಟಿಗಳನ್ನು ಮರುಚಾಲನೆಗೊಳಿಸುವ ಕಾರ್ಯವನ್ನು ನವೆಂಬರ್ 23 ಹಾಗೂ 24ರಂದು ಪೂರ್ಣಗೊಳಿಸಲಾಗುವುದು. ಅಲ್ಲದೆ, ಇದೇ ನವೆಂಬರ್‌ನಲ್ಲಿ ಆಹಾರ ಧಾನ್ಯವನ್ನು ಹಂಚಿಕೆ ಮಾಡಲಾಗುವುದು ಎಂದು ಯೋಗಾನಂದ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿವೆ ಎನ್ನಲಾಗುತ್ತಿದ್ದು, ಇದೇ ತೀವ್ರ ವಿವಾದಕ್ಕೂ ಕಾರಣವಾಗಿತ್ತು. ಯಾಕೆಂದರೆ ಬಡವರ ಬಳಿಯಿದ್ದ ಬಿಪಿಎಲ್ ಕಾರ್ಡ್‌ಗಳನ್ನು ಕಿತ್ತುಕೊಂಡಿದೆ ಎನ್ನುವ ಆರೋಪಗಳನ್ನು ಜೋರಾಗಿ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಒಂದು ವೇಳೆ ಬಡವರ ಕಾರ್ಡ್ ರದ್ದಾಗಿದ್ದರೆ, ಅವುಗಳನ್ನು ಮತ್ತೆ ಹಿಂತಿರುಗಿಸುವುದಾಗಿ ಹೇಳಿದೆ.
ಹಾಗೆಯೇ ಒಂದು ವೇಳೆ ನಿಮ್ಮ ಬಿಪಿಎಲ್ ಪಡಿತರ ಚೀಟಿ ರದ್ದಾಗಿದ್ದರೆ, ತಹಶೀಲ್ದಾರರ ಗಮನಕ್ಕೆ ತನ್ನಿ. ಆಗ ಒಂದು ವಾರದಲ್ಲೇ ಸಮಸ್ಯೆ ಬಗೆಹರಿಸಿ, ನಿಮ್ಮ ಬಿಪಿಎಲ್ ಕಾರ್ಡ್ ವಾಪಾಸ್ ಸಿಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ. ಒಂದು ವೇಳೆ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಡವರಿಗೆ ತೊಂದರೆ ಆಗಿದ್ದರೆ, ತಹಶೀಲ್ದಾರರ ಗಮನಕ್ಕೆ ತಂದರೆ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಅರ್ಹರಿಗೆ ಬಿಪಿಎಲ್ ತಪ್ಪಿ ಹೋಗಬಾರದು. ಒಂದು ವಳೆ ತಪ್ಪಿ ಹೋಗಿದ್ದರೆ ಅದನ್ನು ವಾಪಸ್ ಕೊಡಲಾಗುವುದು. ಹಾಗೆಯೇ ಪಡಿತರ ಚೀಟಿ ಇಲ್ಲವೆಂದು ಆರೋಗ್ಯ ಸೌಲಭ್ಯ ವಿಚಾರದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಈಗಾಗಲೇ ಮಾಹಿತಿ ನೀಡಿದ್ದಾರೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ, ತಕ್ಷಣವೇ ವಾಪಸ್ ನೀಡಬೇಕು. ಬಡ ಕುಟುಂಬಗಳ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ, ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಕೂಡ ತಿಳಿಸಿದ್ದಾರೆ.












Click it and Unblock the Notifications