ಆಕಸ್ಮಿಕ ಬೆಂಕಿಗೆ ತಾಯಿ ಮಗಳು ಸಜೀವ ದಹನ
ಚಾಮರಾಜನಗರ, ಜುಲೈ 4: ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಗುಡಿಸಿಲಿನೊಳಗೆ ಮಲಗಿದ್ದ ತಾಯಿ, ಮಗಳು ಸಜೀವ ದಹನವಾದ ಘಟನೆ ಗಡಿಭಾಗದ ತಾಳವಾಡಿ ತಾಲ್ಲೂಕಿನ ಮಲ್ಲಂಕುಳಿ ಗ್ರಾಮದಲ್ಲಿ ನಡೆದಿದೆ.
ಮಲ್ಲಂಕುಳಿ ಗ್ರಾಮದ ನಿವಾಸಿಗಳಾದ ರಾಜಮ್ಮ(38) ಗೀತಾ (19) ಮೃತ ದುರ್ದೈವಿಗಳು. ಇವರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆಯೇ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದರಿಂದ ಗುಡಿಸಲು ಸಂಪೂರ್ಣವಾಗಿ ಉರಿದುಹೋಗಿದೆ. ಈ ವೇಳೆ ಒಳಗಿದ್ದ ತಾಯಿ ರಾಜಮ್ಮ ಮತ್ತು ಗೀತಾ ಗುಡಿಸಲಿನಿಂದ ಹೊರ ಬರಲಾರದೆ ಉಸಿರುಗಟ್ಟಿ ಸಜೀವ ದಹನವಾಗಿದ್ದಾರೆ.

ಈ ಸಂಬಂಧ ತಾಳವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications