ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷವಿಕ್ಕಿದ ಆರೋಪಿಗಳ ಪರ ವಕಾಲತ್ತಿಗೆ ವಕೀಲರು ಬರಲಿಲ್ಲ!

|
Google Oneindia Kannada News

ಚಾಮರಾಜನಗರ, ಜನವರಿ 30:ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಹಾಕಿ ಜೈಲು ಸೇರಿರುವ ಆರೋಪಿಗಳ ಪರ ವಕಾಲತ್ತು ವಹಿಸಲು ವಕೀಲರು ಬಾರದ ಹಿನ್ನಲೆಯಲ್ಲಿ ಆರೋಪಿಗಳಿಗೆ ಫೆಬ್ರವರಿ12 ರವರೆಗೆ ನ್ಯಾಯಾಂಗ ಬಂಧನವನ್ನು ಮುಂದುವರೆಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ವಿಷ ಪ್ರಸಾದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ಅರ್ಜಿ ಸಲ್ಲಿಸಿದ ವಕೀಲರುವಿಷ ಪ್ರಸಾದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ಅರ್ಜಿ ಸಲ್ಲಿಸಿದ ವಕೀಲರು

ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರವಾಗಿ ಕೊಡಗಿನ ವಕೀಲರಾದ ಅಪ್ಪಣ್ಣ ಮತ್ತು ಇತರ ವಕೀಲರು ವಕಾಲತ್ತು ಹಾಕಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮಂಗಳವಾರ ನಡೆದ ವಿಚಾರಣೆಯ ವೇಳೆಯಲ್ಲಿ ವಕಾಲತು ವಹಿಸಿದ್ದ ವಕೀಲರು ನ್ಯಾಯಾಲಯಕ್ಕೆ ಹಾಜರಿರಲಿಲ್ಲ.

 ಪ್ರಸಾದ ಸ್ವೀಕರಿಸದೆ ಬಚಾವಾದ ಸಾಲೂರು ಮಠದ ಶ್ರೀಗಳು ಪ್ರಸಾದ ಸ್ವೀಕರಿಸದೆ ಬಚಾವಾದ ಸಾಲೂರು ಮಠದ ಶ್ರೀಗಳು

ಇನ್ನುಳಿದ ಆರೋಪಿಗಳು ವಕೀಲರನ್ನು ತಾವೂ ಕೂಡ ನೇಮಿಸಿಕೊಂಡಿರುವುದಾಗಿ ಮೌಖಿಕವಾಗಿ ಹೇಳಿದ್ದರೂ ಕೂಡ ನ್ಯಾಯಾಲಯಕ್ಕೆ ಇವರ ಪರವಾಗಿ ವಕೀಲರು ವಕಾಲತ್ತು ಹಾಕಿರಲಿಲ್ಲ ಇದನ್ನೆಲ್ಲ ಗಮನಿಸಿದ ನ್ಯಾಯಾಧೀಶರು ಪ್ರಕರಣವನ್ನು ಫೆಬ್ರವರಿ12ಕ್ಕೆ ಮುಂದೂಡಿದ್ದಾರೆ.

Judge ordered to accused to continue judicial custody

ಅಲ್ಲದೆ, ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಯವರ ಜಾಮೀನಿನ ಅರ್ಜಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಕಾಯ್ದಿರಿಸಿರುವುದಾಗಿ ಸರ್ಕಾರಿ ಅಭಿಯೋಜಕಿ ಲೋಲಾಕ್ಷಿ ತಿಳಿಸಿದ್ದಾರೆ.

English summary
Sulwadi temple poisoning tragedy case:judge ordered to accused to continue judicial custody till February 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X