ಗೀತಾ ಮಹದೇವಪ್ರಸಾದ್ ರಾಜಕೀಯಕ್ಕೆ ಬರ್ತಾರೆ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜನವರಿ 7: ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದ ಕಂಗಾಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮುಂದಿನ ದಿನಗಳಲ್ಲಿ ಚೈತನ್ಯ ಬರುವುದು ಖಚಿತವಾಗಿದೆ. ಕಾರಣ, ಮಹದೇವಪ್ರಸಾದ್ ಬಳಿಕ ರಾಜಕಾರಣದ ಉತ್ತರಾಧಿಕಾರಿಯಾಗಲು ಪತ್ನಿ ಗೀತಾ ಒಲವು ತೋರಿದ್ದಾರೆ.

ಇದು ಕೈಪಾಳಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ ಕಂಗಾಲಾಗಿದ್ದ ನಾಯಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ಮುಂದೆ ಗುಂಡ್ಲುಪೇಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಸುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಯಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಎಂಬ ಚಿಂತೆಯಲ್ಲಿದ್ದ ನಾಯಕರಿಗೆ ಗೀತಾ ಅವರು ರಾಜಕೀಯದತ್ತ ಒಲವು ತೋರಿಸಿರುವುದರಿಂದ ಸದ್ಯ ಹಾದಿ ಸುಗಮವಾಗಿದೆ.

ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಗೀತಾ, ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸುತ್ತೂರು ಶ್ರೀಗಳ ತಮ್ಮನ್ನು ರಾಜಕಾರಣಕ್ಕೆ ಬರುವಂತೆ ಸೂಚಿಸಿದರೆ ಮಾತ್ರ ರಾಜಕಾರಣಕ್ಕೆ ಬರುವುದಾಗಿ ತಿಳಿಸಿದ್ದಾರೆ. ತಮ್ಮ ರಾಜಕಾರಣದ ನಡೆ ಆಕಸ್ಮಿಕವೇ ಹೊರತು ಪೂರ್ವ ಉದ್ದೇಶಿತವಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಪತಿ ಹಾಕಿಕೊಟ್ಟ ರಾಜಕಾರಣದ ಹಾದಿಯಲ್ಲಿ ಸಾಗುವುದಾಗಿ ಹೇಳಿದರು.[ಸಹಕಾರಿ ಸಚಿವ ಮಹದೇವ ಪ್ರಸಾದ್ ಹೃದಯಾಘಾತದಿಂದ ನಿಧನ]

Geetha Mahadeva prasad

ಗೀತಾ ಅವರು ರಾಜಕೀಯಕ್ಕೆ ಬರಲು ಒಪ್ಪಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಅವರನ್ನೇ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು, ಆ ಮೂಲಕ ಗೆಲುವಿಗೆ ಶ್ರಮಿಸುವುದು ಕೈ ನಾಯಕರ ಉದ್ದೇಶವಾಗಿದೆ.

ಕಾಂಗ್ರೆಸ್ ಹಿರಿಯ ನಾಯಕರಾದ ಜನಾರ್ದನ ಪೂಜಾರಿ ಕೂಡ ಅದನ್ನೇ ಹೇಳಿದ್ದರು. ಈಗಿನ ಮಟ್ಟಿಗೆ ಕಾಂಗ್ರೆಸ್ ಗೆಲುವು ಸಾಧಿಸಬೇಕಾದರೆ ಇದು ಅನಿವಾರ್ಯವಾಗಿದೆ. ಮಹದೇವಪ್ರಸಾದ್ ಬಗ್ಗೆ ಈ ವ್ಯಾಪ್ತಿಯಲ್ಲಿ ಮತದಾರರು ಹೆಚ್ಚಿನ ಒಲವು ಹೊಂದಿದ್ದಾರೆ. ಅದನ್ನು ಅವರು ಅನುಕಂಪದ ಮೇಲೆ ಗೀತಾ ಅವರಿಗೆ ತೋರಿದರೆ ಗೆಲುವು ಖಚಿತ ಎಂಬುದು ಕೈ ನಾಯಕರ ಲೆಕ್ಕಾಚಾರವಾಗಿದೆ.[ಮಹದೇವಪ್ರಸಾದ್ ಎಂಬ 'ಭುಜಕೀರ್ತಿ' ಕಳಚಿದ ಮೇಲೆ 'ಕೈ' ಸ್ಥಿತಿ ಏನು?]

ಈಗಾಗಲೇ ಪತಿ ಅಗಲಿಕೆ ನೋವಿನಲ್ಲಿರುವ ಗೀತಾ ಅವರು, ಎಲ್ಲವನ್ನೂ ಮರೆತು ರಾಜಕೀಯ ರಣರಂಗಕ್ಕೆ ಧುಮುಕಿ ಮತದಾರರ ಮುಂದೆ ಬಂದು ನಿಂತ ಮೇಲೆಯೇ ಎಲ್ಲ ಲೆಕ್ಕಾಚಾರಗಳಿಗೆ ಅರ್ಥ ಬರುವುದು. ಅಲ್ಲಿವರೆಗೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Geetha wife of H.S. Mahadeva prasad expresses her political interest. After Mahadeva parasad, there is a question of who is next for Congress in Chamarajanagar. Now, option opened.
Please Wait while comments are loading...