ಚಾಮರಾಜನಗರ: ಮಗ ಬೈಕ್‌ ಚಾಲನೆ ಮಾಡಿದ್ದಕ್ಕೆ ₹25,000 ದಂಡ ಕಟ್ಟಿದ ಅಪ್ಪ

ಚಾಮರಾಜನಗರ, ಸೆಪ್ಟೆಂಬರ್, 22: ನಿಯಮದ ಪ್ರಕಾರದ ಚಿಕ್ಕಮಕ್ಕಳು ವಾಹನಗಳನ್ನು ಓಡಿಸಬಾರದು. ಆದರೆ ಮನೆಯವರು ತಮ್ಮ ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ವಾಹನಗಳನ್ನು ಒಡಿಸುವುದನ್ನು ಕಲಿತಿದ್ದಾರೆ ಎಂದು ಸಂತೋಷಪಡುತ್ತಾರೆ. ಇನ್ನೂ ಕೆಲವು ಮಕ್ಕಳು ಪೋಷಕರ ಬಳಿ ಹಠ ಮಾಡಿಯಾದರೂ ಬೈಕ್‌ಗಳನ್ನು ಕೊಡಿಸಿಕೊಳ್ಳುತ್ತಾರೆ. ಆದರೆ ಪೋಷಕರು ಅಪ್ಪಿತಪ್ಪಿಯೂ ಮಕ್ಕಳ ಕೈಗೆ ವಾಹನಗಳನ್ನು ನೀಡಬೇಡಿ. ಯಾಕೆ ಅಂತೀರಾ ಇಲ್ಲಿದೆ ನೋಡಿ ಸೂಕ್ತ ಉದಾಹರಣೆ.

ಚಿಕ್ಕಮಕ್ಕಳು ವಾಹನಗಳನ್ನು ಓಡಿಸಬಾರದು ಎಂದು ಪೊಲೀಸರು ಹೇಳುವುದು ಏಕೆ ಅಂದರೆ, ಅವರಿಗೆ ಮಿತಿ ಇರುವುದಿಲ್ಲ. ಸಂಚಾರ ನಿಯಮ ಮೀರಿ ಅತೀ ವೇಗವಾಗಿ ಬೈಕ್‌ಗಳನ್ನು ಓಡಿಸುವುದು & ವ್ಹೀಲಿಂಗ್‌ ಮಾಡುವುದು ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡುಬಿಡುತ್ತಾರೆ. ಇಂತಹ ಅಭ್ಯಾಸಗಳಿಂದ ಕೊನೆಗೆ ತಮ್ಮ ಜೀವಕ್ಕೆ ಕುತ್ತು ತಂದುಕೊಂಡಿರುವ ಉದಾಹರಣೆಗಳು ಇವೆ. ಆದ್ದರಿಂದ ಪೊಲೀಸರು ಯಾದರೂ ಚಿಕ್ಕಮಕ್ಕಳು ವಾಹನಗಳನ್ನು ಓಡಿಸುತ್ತಿದ್ದರೆ, ನೇರವಾಗಿ ವಾಹನ ಮಾಲೀಕರಿಗೆ ದಂಡ ವಿಧಿಸುತ್ತಾರೆ. ಇಂತಹದ್ದೆ ಒಂದು ಘಟನೆ ಚಾಮರಾಜನಗೆ ಜಿಲ್ಲೆಯಲ್ಲಿ ನಡೆದಿದೆ.

Father fined 25 000 for son riding bike in Chamarajanagar

ಅಪ್ರಾಪ್ತ ಬಾಲಕನಿಗೆ ಬೈಕ್ ಕೊಟ್ಟಿದ್ದಕ್ಕೆ ತಂದೆಯು ನ್ಯಾಯಾಲಯಕ್ಕೆ 25,000 ರೂಪಾಯಿ ದಂಡ ಕಟ್ಟಿ ಬೈಕ್ ವಾಪಾಸ್ ಪಡೆದ ಘಟನೆ ಶನಿವಾರ (ಸೆಪ್ಟೆಂಬರ್ 21) ಚಾಮರಾಜನಗರಲ್ಲಿ ನಡೆದಿದೆ.

ಚಾಮರಾಜನಗರದಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸುವ ವೇಳೆ ಅಪ್ರಾಪ್ತ ಬೈಕ್ ಚಾಲನೆ ಮಾಡುತ್ತಿದುದನ್ನು ಕಂಡು ಬೈಕ್‌ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ಬಳಿಕ ಅಪ್ರಾಪ್ತನ‌ ತಂದೆ ನ್ಯಾಯಾಲಯಕ್ಕೆ ಹಾಜರಾಗಿ 25,000 ರೂಪಾಯಿ ದಂಡ ಪಾವತಿಸಿದ್ದಾರೆ.

ಫೋಷಕರು ಗಮನಿಸಬೇಕಾದ ಪ್ರಮುಖಾಂಶಗಳು

* 18 ವರ್ಷದೊಳಗಿನ ಮಕ್ಕಳಿಗೆ ವಾಹಾನ ಚಾಲನಾ ಪರವಾನಗಿ ನೀಡಲಾಗಿರುವುದಿಲ್ಲ.
* ಅಪಘಾತ ಸಂಭವಿಸಿದರೆ ಅವರಿಗಾಗಲೀ, ಅವರ ಎದುರು ವಾಹನದವರಿಗಾಗಿ ಇನ್ಶೂರೆನ್ಸ್‌ ಸಿಗುವುದಿಲ್ಲ.
* ನಾವೇ ಡ್ರೈವಿಂಗ್‌ ಮಾಡಿಕೊಂಡು ಹೋಗಿ ಅಪಘಾತ ಮಾಡಿಕೊಂಡರೆ, ನಮ್ಮ ಸಮಸ್ಯೆ ನಾವೇ ನೋಡಿಕೊಳ್ಳುತ್ತೇವೆಂದು ಕೆಲವು ಪೋಷಕರು ಮಾತನಾಡಬಹುದು.
* ಬೇರೆಯವರಿಗೆ ಹೋಗಿ ಡಿಕ್ಕಿ ಹೊಡೆದರೆ ಯಾರು ಜವಾಬ್ದಾರರು?
* ಮಕ್ಕಳಿಗೆ ವಾಹನ ಚಲಾಯಿಸಲು ಗೊತ್ತೇ ಹೊರತು, ಹೆಚ್ಚಿನವರಿಗೆ ಸೂಕ್ಷ್ಮ ಸಂದರ್ಭದಲ್ಲಿ ಟ್ರಬಲ್‌ ಶೂಟಿಂಗ್‌, ಸಮಸ್ಯೆಗಳನ್ನು ನಿಭಾಯಿಸುವುದು ಗೊತ್ತಿರುವುದಿಲ್ಲ.
* ಅವರ ಚಾಲನೆಯಿಂದ ಇತರರ ವಾಹನ ಚಲಾವಣೆಗೂ ತೊಂದರೆ ಆಗುವ ಅಪಾಯ ಇರುತ್ತದೆ.
* ಅಪ್ರಾಪ್ತಾ ವಯಸ್ಸಿನ ಮಕ್ಕಳಿಗೆ ವಾಹನ ಕೊಟ್ಟರೆ ಅವರು ಶೋಕಿ ಮಾಡುವುದು, ವೀಲಿಂಗ್‌ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಅಪಾಯ ಹೆಚ್ಚಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+