ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲಮನ್ನಾ ಘೋಷಿಸಿದ ದಿನವೇ ಚಾಮರಾಜನಗರದಲ್ಲಿ ಆತ್ಮಹತ್ಯೆಗೆ ಶರಣಾದ ರೈತ

By Gururaj
|
Google Oneindia Kannada News

Recommended Video

Karnataka Budget 2018 : ಎಚ್ ಡಿ ಕೆ ರೈತರ ಸಾಲ ಮನ್ನಾ ಘೋಷಣೆ ಮಾಡ್ತಿದ್ದ ಹಾಗೆ ರೈತ ಆತ್ಮಹತ್ಯೆ

ಚಾಮರಾಜನಗರ, ಜುಲೈ 06 : ಚಾಮರಾಜನಗರದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚಾಮರಾಜನಗರದ ದೇಮಹಳ್ಳಿಯ ನಿವಾಸಿ ಚಿಕ್ಕಸ್ವಾಮಿ ಆತ್ಮಹತ್ಯೆ ಮಾಡಿಕೊಂಡವರು. ವಿವಿಧ ಬ್ಯಾಂಕ್ ಮತ್ತು ಖಾಸಗಿಯಾಗಿ ಸುಮಾರು 2 ಲಕ್ಷ ರೂ. ಸಾಲವನ್ನು ಚಿಕ್ಕಸ್ವಾಮಿ ಮಾಡಿಕೊಂಡಿದ್ದರು.

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2017ರ ಡಿಸೆಂಬರ್ 31ರವರೆಗಿನ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ, ಚಿಕ್ಕಸ್ವಾಮಿ 2018ರ ಮೇ 31ರ ತನಕದ ಸಾಲ ಮನ್ನಾ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದರು.

Farmer commits suicide in Chamarajanagar

ಗುರುವಾರ ರಾತ್ರಿ ಚಿಕ್ಕಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlightsಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights

ರೈತ ಚಿಕ್ಕಸ್ವಾಮಿ ಅವರಿಗೆ ಸುಮಾರು 2 ಎಕರೆ ಮಳೆಯಾಶ್ರಿತ ಭೂಮಿಯನ್ನು ಹೊಂದಿದ್ದಾರೆ. ಸರಿಯಾಗಿ ಮಳೆಯಾಗದ ಕಾರಣ ಎರಡು ವರ್ಷಗಳಿಂದ ಯಾವುದೇ ಬೆಳೆ ಬೆಳೆದಿರಲಿಲ್ಲ. ಕುಟುಂಬ ಸದಸ್ಯರ ಆರೋಗ್ಯವೂ ಹದಗೆಟ್ಟ ಕಾರಣ ಸುಮಾರು 2 ಲಕ್ಷ ರೂ. ಸಾಲ ಮಾಡಿದ್ದರು. ಖಾಸಗಿ ವ್ಯಕ್ತಿಯಗಳ ಕೈಯಲ್ಲಿ 1 ಲಕ್ಷ ಸಾಲ ಪಡೆದಿದ್ದರು.

English summary
Chikkaswamy farmer form Chamarajanagar district committed suicide. Chief Minister H.D.Kumaraswamy announced waived all defaulted crop loans of the farmers made upto December 31, 2017 in the Karnataka budget 2018-19 on July 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X