ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಗಳ ಆಸ್ತಿ ವಿವರ ಬಹಿರಂಗ, ಇಲ್ಲಿದೆ ವಿವರ

ಚಾಮರಾಜನಗರ, ಏಪ್ರಿಲ್‌, 17: ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರ (ಏಪ್ರಿಲ್‌ 17) ನಾಮಪತ್ರ ಸಲ್ಲಿಕೆಯ ಜಾತ್ರೆಯೇ ನಡೆದಿದ್ದು, ಶುಭ ಮುಹೂರ್ತದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ಅಲ್ಲದೇ ಪ್ರಮುಖ ಅಭ್ಯರ್ಥಿಗಳು ಅಫಿಡವಿಟ್‌ನಲ್ಲಿ ತಮ್ಮ ಆಸ್ತಿಯ ವಿವರವನ್ನು ಘೋಷಣೆ ಮಾಡಿಕೊಂಡಿದ್ದಾರೆ.

ಮಂಜುನಾಥ್ ಆಸ್ತಿಯ ವಿವರ

ಹನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಅವರು ಇಂದು ನಾಮಪತ್ರ ಸಲ್ಲಿಸಿದ್ದು, ಒಟ್ಟು ಚರಾಸ್ತಿ ತಮ್ಮ ಬಳಿ 53,09,15,860 ರೂಪಾಯಿ ಇದ್ದು, ಪತ್ನಿ ಬಳಿ 6,43,13,235 ರೂಪಾಯಿ, ‌ಮಗಳ ಬಳಿ 16,51,151 ರೂಪಾಯಿ ಹಾಗೂ ಮಗನ ಹತ್ತಿರ 61,132 ರೂಪಾಯಿ ಮೌಲ್ಯದ ಚರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

Candidates Property details revealed of Chamarajanagar District Constituencies: Know details

ಸ್ವಯಾರ್ಜಿತವಾಗಿ 123,32,45,833 ಆಸ್ತಿ ಇದ್ದು, ಪಿತ್ರಾರ್ಜಿತವಾಗಿ 62 ಕೋಟಿ ಮೌಲ್ಯದ ಆಸ್ತಿ ಬಂದಿದೆ. ಪತ್ನಿಗೂ ಕೂಡ ಪಿತ್ರಾರ್ಜಿತವಾಗಿ 71.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಅಭ್ಯರ್ಥಿ ಮಂಜುನಾಥ್ ಅವರದ್ದು 59 ಕೋಟಿ ರೂಪಾಯಿ ಸಾಲ ಇದ್ದು, ಪತ್ನಿ ಅವರದ್ದು 1 ಕೋಟಿ ರೂಪಾಯಿನಷ್ಟು ಸಾಲ ಇದೆ ಎಂದು ತಿಳಿಸಿದರು.

ಇನ್ನು, ಚರಾಸ್ತಿ ವಿಚಾರಕ್ಕೆ ಬಂದರೆ ಶತ ಕೋಟ್ಯಾಧಿಪತಿ ಮಂಜುನಾಥ್ ಹೆಸರಿನಲ್ಲಿ ಯಾವುದೇ ಕಾರು ಮತ್ತಿತರ ವಾಹನಗಳಿಲ್ಲ. ಹಾಗೆಯೆ ಅವರ ಮಗಳ ಬಳಿ ಒಂದು ಕಾರಿದೆ. ತಮ್ಮ ಬಳಿ 500 ಗ್ರಾಂ ಚಿನ್ನ, 3 ಕೆ.ಜಿ.ಯಷ್ಟು ಬೆಳ್ಳಿ ಇದ್ದು, ಪತ್ನಿ ಹೆಸರಿನಲ್ಲಿ 600 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ, ಮಗಳ ಬಳಿ 100 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ಪ್ರೀತಂ ನಾಗಪ್ಪನವರ ಆಸ್ತಿ ಎಷ್ಟು?

ಹನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತಂ ನಾಗಪ್ಪ 1.45 ಕೋಟಿ ಸ್ವಯಾರ್ಜಿತ, 1.67 ಕೋಟಿ ಪಿತ್ರಾರ್ಜಿತ ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇನ್ನು ಪತ್ನಿ ಬಳಿ 35 ಲಕ್ಷ ರೂಪಾಯಿ ಸ್ವಯಾರ್ಜಿತ ಆಸ್ತಿ ಹಾಗೂ 40 ಲಕ್ಷ ಪಿತ್ರಾರ್ಜಿತ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. ಇನ್ನು, ತಮಗೆ 42 ಲಕ್ಷ ರೂಪಾಯಿ ಸಾಲವಿದ್ದು, ಪತ್ನಿ 49 ಲಕ್ಷ ಸಾಲ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Candidates Property details revealed of Chamarajanagar District Constituencies: Know details

ಪ್ರಸ್ತುತ ಮಾರುಕಟ್ಟೆ ಮೌಲ್ಯ ಇರುವ ಸ್ಥಿರಾಸ್ಥಿ 3,12,52,000 ರೂಪಾಯಿ ಇದ್ದು, ಪತ್ನಿ ಬಳಿ 75 ಲಕ್ಷ ಮೌಲ್ಯದ ಆಸ್ತಿ ಇದೆ. ತಮ್ಮ ಬಳಿ ಟ್ರಾಕ್ಟರ್ ಹಾಗೂ ಕಾರು ಇದೆ. ಹಾಗೆಯೇ ಪತ್ನಿ ಬಳಿ ಕಾರಿದ್ದು, ಇಬ್ಬರಿಂದಲೂ ಸೇರಿ 2.5 ಕೆ.ಜಿ. ಬೆಳ್ಳಿ, 900 ಗ್ರಾಂ ನಷ್ಟು ಚಿನ್ನ ಹೊಂದಿದ್ದಾರೆ. ಇದರ ಜೊತೆಗೆ ಕೈಯಲ್ಲಿ 2 ಲಕ್ಷ ರೂಪಾಯಿ ನಗದು ಇದ್ದು, ಪತ್ನಿ ಬಳಿ 1 ಲಕ್ಷ ರೂಪಾಯಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ಸಿ.ಪುಟ್ಟರ‌ಂಗಶೆಟ್ಟಿ ಆಸ್ತಿ ವಿವರ

ಸತತ ಮೂರು ಬಾರಿ ಜಯಗಳಿಸಿ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಚಾಮರಾಜನಗರದ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಕೈಯಲ್ಲಿ ಒಟ್ಟು 10 ಲಕ್ಷ ರೂಪಾಯಿ ನಗದು ಇದ್ದು, ಪತ್ನಿ ಮತ್ತು ಇಬ್ಬರ ಮಕ್ಕಳ ಕೈಯಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣ ಇದೆ ಎಂದು ತಿಳಿಸಿದ್ದಾರೆ.

ಇನ್ನು ತಮ್ಮ ಹೆಸರಿನಲ್ಲಿ 1 ಟ್ರಾಕ್ಟರ್, 1 ಬೈಕ್, 2 ಕಾರಿದ್ದು ಇಬ್ಬರ ಮಕ್ಕಳು ಒಂದೊಂದು ಕಾರನ್ನು ಹೊಂದಿದ್ದಾರೆ. ತಮ್ಮಲ್ಲಿ 58 ಗ್ರಾಂ ಚಿನ್ನ, 1.7 ಲಕ್ಷ ಮೌಲ್ಯದ ವಾಚ್ ಇದೆ. ಹಾಗೆಯೆ ಪತ್ನಿ ಬಳಿ 127 ಗ್ರಾಂ ಚಿನ್ನ, 1 ಕೆ.ಜಿ. ಬೆಳ್ಳಿ, ಹಿರಿಯ ಪುತ್ರನ ಬಳಿ 125 ಗ್ರಾಂ ಚಿನ್ನ, ಕಿರಿಯ ಪುತ್ರನ ಬಳಿ 45 ಗ್ರಾಂ ಚಿನ್ನ ಇದೆ. ಅಲ್ಲದೇ ತಮ್ಮ ಬಳಿ 79.55 ಲಕ್ಷ, ಪತ್ನಿ ಬಳಿ 8.96 ಸಾವಿರ ಮೌಲ್ಯದ ವಸ್ತುಗಳಿವೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ತಮ್ಮ ಹೆಸರಿನಲ್ಲಿ 8.74 ಕೋಟಿ ರೂಪಾಯಿ ಮೌಲ್ಯದಷ್ಟಿದ್ದು, ಪತ್ನಿ ಹೆಸರಿನಲ್ಲಿ 3 ಕೋಟಿ ರೂಪಾಯಿ, ಹಿರಿಯ ಮಗನ ಬಳಿ 92 ಲಕ್ಷ, ಕಿರಿಯ ಮಗನ ಬಳಿ 25 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಜೊತೆಗೆ ಜಂಟಿ ಖಾತೆಯಲ್ಲಿ 4.52 ಕೋಟಿ ರೂಪಾಯಿ ಸಾಲ ಇದ್ದು, ತಮ್ಮ ಹೆಸರಿನಲ್ಲಿ 3.57 ಕೋಟಿ ಸಾಲ ಇದೆ. ತಮಗೆ ಒಟ್ಟು 8.9 ಕೋಟಿ ರೂಪಾಯಿನಷ್ಟು ಸಾಲ ಇದೆ ಎಂದು ತಿಳಿಸಿದ್ದಾರೆ.

ಹ.ರಾ.ಮಹೇಶ್ ಆಸ್ತಿಯ ವಿವರ

ಚಾಮರಾಜನಗರ ಕ್ಷೇತ್ರದಿಂದ ಬಿಎಸ್'ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹ.ರಾ.ಮಹೇಶ್ ಇಂದು ನಾಮಪತ್ರ ಸಲ್ಲಿಸಿದ್ದು, ತಮ್ಮ ಕೈಯಲ್ಲಿ 1 ಲಕ್ಷ ನಗದು, 2 ಕಾರು, ಒಂದು ಬೈಕ್, 18 ಗ್ರಾಂ ಚಿನ್ನ ಸೇರಿದಂತೆ ಒಟ್ಟು ಚರಾಸ್ತಿ 17.25 ಲಕ್ಷ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅಲ್ಲದೆ ವಿವಿಧ ಬ್ಯಾಂಕ್‌ಗಳಲ್ಲಿ 31 ಲಕ್ಷ ರೂಪಾಯಿ ಸಾಲ ಇದೆ ಅಂತಲೂ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+