ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡ್ಲುಪೇಟೆ ಚುನಾವಣೆ ಮುಗೀತು, ರೈತರಿಗಿನ್ನು ಭೂತಾಯಿಯೇ ಗತಿ!

ಯಾರು ಗೆದ್ದರೂ, ಯಾರು ಸೋತರೂ ಅನ್ನ ನೀಡುವ ಭೂತಾಯಿ ಮಾತ್ರವೇ ನಮ್ಮನ್ನು ಕಾಪಾಡುವವಳು ಎಂಬಂತೆ ಚುನಾವಣೆ ಮುಗಿಯುತ್ತಿದ್ದಂತೆಯೇ ಆ ಗುಂಗಿನಿಂದ ಹೊರಬಂದ ಗುಂಡ್ಲುಪೇಟೆ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಗುಂಡ್ಲುಪೇಟೆ, ಏಪ್ರಿಲ್ 12: ಸಚಿವರಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾದಾಗಿನಿಂದ ಅದರ ಗುಂಗಿನಲ್ಲೇ ಇದ್ದ ಹಳ್ಳಿಗಳ ರೈತರು, ಏಪ್ರಿಲ್ 9 ರಂದು ಚುನಾವಣೆ ಮುಗಿಯುತ್ತಿದ್ದಂತೆಯೇ ನಿರಾಳರಾಗಿ ಜಮೀನಿನತ್ತ ಮುಖ ಮಾಡಿದ್ದಾರೆ.

ಯಾರು ಗೆದ್ದರೂ, ಯಾರು ಸೋತರೂ ಅನ್ನ ನೀಡುವ ಭೂತಾಯಿ ಮಾತ್ರವೇ ನಮ್ಮನ್ನು ಕಾಪಾಡುವವಳು ಎಂಬಂತೆ ಬಿರುಬಿಸಿಲಿನಲ್ಲೂ, ಕೃಷಿ ಚಟುವಟಿಕೆಯಲ್ಲಿ ನಿರತರಾಗಿ ರೈತರು ಬೆವರು ಸುರಿಸುತ್ತಿದ್ದಾರೆ. [ಉಪಚುನಾವಣೆ ಮುಗೀತು, ಲೆಕ್ಕಾಚಾರ ಶುರುವಾಯ್ತು!]

After Gundlupet by election now farmers are back to farm

ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿರುವುದರಿಂದ ರೈತರು ಕೊಂಚ ನೆಮ್ಮದಿಯಿಂದಿದ್ದಾರೆ. ಈ ನಡುವೆ ಹೆಚ್ಚಿನ ಜನರು ಕಳೆದೊಂದು ತಿಂಗಳಿಂದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ಓಡಾಡಿ ಒಂದಷ್ಟು ದುಡಿದವರು. ಇದೀಗ ಚುನಾವಣೆ ಮುಗಿದಿದ್ದರಿಂದ ಜಮೀನಿನತ್ತ ಮುಖ ಮಾಡಿದ್ದಾರೆ. ಮತ್ತೂ ಕೆಲವರು ಏಪ್ರಿಲ್ 13 ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಎತ್ತುಗಳಿಗಿಂತ ಟ್ರ್ಯಾಕ್ಟರ್ ನಲ್ಲಿ ಕೃಷಿ ಚಟುವಟಿಕೆ ನಡೆಸುವವರು ಹೆಚ್ಚಾಗಿದ್ದಾರೆ. ಬರದಿಂದ ತತ್ತರಿಸಿದ ಹಲವರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿದ್ದರಿಂದ ಕೃಷಿ ಕೆಲಸಕ್ಕೂ ಜಾನುವಾರುಗಳಿಲ್ಲ. ಹೀಗಾಗಿ ಮಳೆ ಬಂದು ಕೃಷಿ ಮಾಡುವಂತಾದರೆ ಮತ್ತೆ ಜಾನುವಾರುಗಳನ್ನು ಖರೀದಿ ಮಾಡಬೇಕಾದ ಸ್ಥಿತಿ ಬಂದೊದಗಿದೆ. [ಬಿಸಿಲಿಗೂ ಬತ್ತದ ಉತ್ಸಾಹ, ಗುಂಡ್ಲುಪೇಟೆಯಲ್ಲಿ ಶೇಕಡಾ 75 ಮತದಾನ]

ಈಗಾಗಲೇ ತಾಲೂಕಿನ ಹಂಗಳ, ಬೇಗೂರು, ತೆರಕಣಾಂಬಿ ಮೊದಲಾದ ಕಡೆ ರೈತರಿಗೆ ಅನುಕೂಲವಾಗುವಂತೆ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಜೋಳ, ಸೂರ್ಯಕಾಂತಿಯನ್ನು ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಅಲಸಂದೆ, ಕಡಲೆಕಾಯಿ ಕೃಷಿಗೆ ಜಮೀನನ್ನು ಹದಗೊಳಿಸುತ್ತಿದ್ದಾರೆ.

ಈ ಬಾರಿಯಾದರೂ ಉತ್ತಮ ಮಳೆಯಾಗಿ ಬೆಳೆ ಬೆಳೆಯುವಂತಾಗಲಿ ಎಂದು ರೈತರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಯಾವುದೋ ಪಕ್ಷದ ಕಾರ್ಯಕರ್ತರಾಗಿ ನೆಚ್ಚಿನ ನಾಯಕರ ಗೆಲುವಿಗಾಗಿ ಶ್ರಮಿಸಿದ ಜನರು, ಮತ್ತೀಗ ಉಳುವ ಯೋಗಿಯಾಗಿ ತಮ್ಮ ಸ್ವಸ್ಥಾನಕ್ಕೆ ಮರಳಿದ್ದಾರೆ!

English summary
After Gundlupet by election which has ended on 9th April, now farmers of the region are back to farm. Summer shower in the area brought bit relief to farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X