ಚಾಮರಾಜನಗರದಲ್ಲಿ ಡಯಾಗ್ನಸ್ಟಿಕ್ ಗೆ ಬೆಂಕಿ: ಭಾರೀ ನಷ್ಟ

ಚಾಮರಾಜನಗರ, ಮಾರ್ಚ್ 01: ಇಲ್ಲಿನ ಡಯಾಗ್ನಸ್ಟಿಕ್ ವೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಅಗ್ನಿ ಅನಾಹುತದಲ್ಲಿ ಕೋಟ್ಯಂತರ ರೂ. ಮೌಲ್ಯದ ವೈದ್ಯಕೀಯ ಸಲಕರಣೆಗಳು ಭಸ್ಮವಾಗಿವೆ.

ಚಾಮರಾಜನಗರದ ಶ್ರೀ ಭ್ರಮರಾಂಭ ಚಿತ್ರ ಮಂದಿರ ಬಳಿಯಿರುವ ಅಶ್ವಿನಿ ಡಯಾಗ್ನಸ್ಟಿಕ್ಸ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಇದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಬುಧವಾರ ಸಂಜೆ ಹೊಗೆಯೊಂದಿಗೆ ಕಾಣಿಸಿಕೊಂಡ ಬೆಂಕಿ ತೀವ್ರಗತಿಯಲ್ಲಿ ಹರಡಿದೆ. ಪರಿಣಾಮ ಒಳಗಿದ್ದವರೆಲ್ಲರೂ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಕಿ ಹೊತ್ತಿ ಉರಿಯುವುದನ್ನು ಕಂಡ ಸ್ಥಳೀಯರು ಅಗ್ನಿ ಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮತ್ತೊಂದೆಡೆ ಸಿಬ್ಬಂದಿಯೂ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲೇ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಹರ ಸಾಹಸ ಮಾಡಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರಾದರೂ ಅಷ್ಟರಲ್ಲೇ ಅಶ್ವಿನಿ ಡಯಾಗ್ನಸ್ಟಿಕ್ ಸೆಂಟರ್‍ನಲ್ಲಿದ್ದ ಎಂಆರ್ ಎ ಯಂತ್ರೋಪಕರಣ, ಕಂಪ್ಯೂಟರ್ ಮತ್ತು ಬ್ಯಾಟರಿಗಳು ಭಸ್ಮವಾಗಿದೆ. ಇದರಿಂದಾಗಿ ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಆಧುನಿಕ ವೈದ್ಯಕೀಯ ಸಲಕರಣಗಳು ಬೆಂಕಿಗಾಹುತಿಯಾಗಿದ್ದವು.

Accidential fire in a diagnostic centre in Chamarajanagar

ಅಶ್ವಿನಿ ಡಯಾಗ್ನಸ್ಟಿಕ್ ಯಳಂದೂರಿನ ರಮೇಶ್ ಎಂಬುವರಿಗೆ ಸೇರಿದ್ದಾಗಿದೆ. ಯಂತ್ರೋಪಕರಣಗಳು ಭಸ್ಮವಾಗಿದ್ದು, ಬಿಟ್ಟರೆ ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ ನಷ್ಟ ಎಷ್ಟು ಆಗಿರಬಹುದೆಂದು ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಇದು ವೈದ್ಯಕೀಯ ಸಲಕರಣಗಳಾಗಿದ್ದರಿಂದ ಇದರ ಮೌಲ್ಯವನ್ನು ಸಂಬಂಧಪಟ್ಟವರೇ ಹೇಳಬೇಕಾಗಿದೆ ಎಂದು ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ನವೀನ್ ಕುಮಾರ್ ತಿಳಿಸಿದ್ದಾರೆ.

Accidential fire in a diagnostic centre in Chamarajanagar

ಬೆಂಕಿ ಅವಘಡದ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸಕ್ಯೂರ್ಟ್ ನಿಂದ ಘಟನೆ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆಯಾದರೂ ತನಿಖೆಯ ಬಳಿಕವಷ್ಟೆ ನಿಜ ವಿಚಾರ ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+