Elephant Census: ಗಡಿಜಿಲ್ಲೆಯಲ್ಲಿ ಮೂರನೇ ದಿನದ "ಗಜ"ಗಣತಿ-ಮಾಹಿತಿ
ಚಾಮರಾಜನಗರ, ಮೇ, 26: ಮೂರು ದಿನಗಳ ಕಾಲ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಗಜಗಣತಿ ಶನಿವಾರ (ಮೇ 25) ಅಂತ್ಯಗೊಂಡಿದ್ದು, ಕೊನೆಯ ದಿನ ಅಂದರೆ ಶನಿವಾರ ಜಲಮೂಲಗಳ ಬಳಿ ಬಂದ ಆನೆಗಳನ್ನು ಲೆಕ್ಕ ಹಾಕಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್‌ಗಳು, ಕಾವೇರಿ ವನ್ಯಜೀವಿಧಾಮದ 43 ಬೀಟ್‌ಗಳು, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 170 ಮಂದಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಗಣತಿ ಕಾರ್ಯ ನಡೆದಿದ್ದು, ಬೆಳಗ್ಗೆಯಿಂದ ಸಂಜೆವರೆಗೂ ಕೆರೆಗಳು, ಜಲಮೂಲಗಳ ಸಮೀಪ ಕುಳಿತು ಆನೆ ಲೆಕ್ಕಚಾರ ನಡೆಸಲಾಗಿದೆ.

ಮೊದಲ ದಿನ ಪ್ರತಿ ಬೀಟ್‌ನಲ್ಲಿ 15 ಕಿಲೋ ಮೀಟರ್ ನಡೆದು ಆನೆಗಳನ್ನು ಪ್ರತ್ಯಕ್ಷವಾಗಿ ಕಂಡು ದಾಖಲು ಮಾಡಿಕೊಂಡರೆ, ಎರಡನೇ ದಿನ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ 2 ಕಿಲೋ ಮೀಟರ್ ನಡೆದು ಲದ್ದಿ ನೋಡಿ ಆನೆ ಇರುವಿಕೆಯ ಬಗ್ಗೆ ತಿಳಿಯುವ ಕಾರ್ಯ ಕೈಗೊಂಡರು. ದು ಪರೋಕ್ಷವಾಗಿ ಆನೆ ಇರುವುದನ್ನು ಗುರುತಿಸುವ ಕಾರ್ಯವಾಗಿತ್ತು. ಇದರಿಂದ ಗಣತಿ ಪ್ರದೇಶದಲ್ಲಿ ಆನೆ ಇಲ್ಲದಿದ್ದರೂ, ಅವುಗಳ ಇರುವಿಕೆಯನ್ನು ನಿಯೋಜನೆಗೊಂಡ ನೌಕರರು ನೋಡಿದ ಲದ್ದಿ ಬಗ್ಗೆ ಪುಸ್ತಕದಲ್ಲಿ ಸ್ಪಷ್ಟವಾಗಿ ದಾಖಲಿಸುವ ಮೂಲಕ ಖಚಿತಪಡಿಸಿಕೊಂಡರು.
ಎರಡನೇ ದಿನ "ಗಜ"ಗಣತಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿ ಧಾಮ, ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಗಜ ಗಣತಿ ನಡೆದಿದೆ.
ಮೊದಲ ದಿನ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಆನೆಗಳ ಗುಂಪು, ಒಂಟಿ ಆನೆಗಳನ್ನು ನೇರವಾಗಿ ಕಂಡು ಗಣತಿ ನಡೆದಿದ್ದು, ಎರಡನೇ ದಿನವಾದ ಶುಕ್ರವಾರ (ಮೇ 24) ಲದ್ದಿ ಮೂಲಕ ಆನೆ ಲೆಕ್ಕಾಚಾರ ಮಾಡಲಾಗಿದೆ.
ಮೊದಲ ದಿನ ಆನೆಗಳ ಲೆಕ್ಕ ಹಾಕಿದ ಸಿಬ್ಬಂದಿ: ಗುರುವಾರದುಂದ ಗಜ ಗಣತಿ ಆರಂಭವಾಗಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೊದಲ ದಿನ ಸಿಬ್ಬಂದಿ ಗಣತಿ ಕಾರ್ಯ ನಡೆಸಿದ್ದರು.
ಗಜ ಗಣತಿಯು ಮೂರು ದಿನಗಳ ಕಾಲ ಬೆಳಗ್ಗೆ 6ರಿಂದ ಸಂಜೆ 6 ತನಕ ನಡೆಯಲಿದ್ದು, ಮೊದಲ ದಿನವಾದ ಗುರುವಾರದಂದು 15 ಕಿಮೀ ನಡೆಸು ಆನೆ ಗುಂಪುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಲೆಕ್ಕ ಹಾಕಿದ್ದಾರೆ. ಆನೆ ಗುಂಪಿನಲ್ಲಿ ಎಷ್ಟು ಹೆಣ್ಣಾನೆಗಳಿವೆ, ಎಷ್ಟು ಮರಿಗಳಿವೆ, ಗುಂಪಿನಲ್ಲಿ ಎಷ್ಟು ಆನೆಗಳಿವೆ ಎಂಬುದನ್ನು ಗುರುತು ಮಾಡಿಕೊಳ್ಳಲಾಗುತ್ತದೆ. ಪ್ರತಿ ಬೀಟ್‌ನಲ್ಲೂ ಮೂವರು ಸಿಬ್ಬಂದಿ ನಡೆದುಕೊಂಡು ಆನೆ ಗುಂಪುಗಳನ್ನು ಕಂಡು ಈ ಲೆಕ್ಕ ಹಾಕಿದ್ದಾರೆ.












Click it and Unblock the Notifications