ಗುಂಡ್ಲುಪೇಟೆ: ಕೆರೆ ಬಳಿ ಜೂಜಾಡುತ್ತಿದ್ದ 13 ಮಂದಿ ಬಂಧನ; ಈ ವೇಳೆ ಪೊಲೀಸರು ವಶಕ್ಕೆ ಪಡೆದ ಹಣ ಎಷ್ಟು ಗೊತ್ತಾ?

ಚಾಮರಾಜನಗರ, ನವೆಂಬರ್, 17: ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ಕೆರೆ ಬಳಿಯಲ್ಲಿ ಜೂಜಾಡುತ್ತಿದ್ದ 13 ಮಂದಿಯನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಈ ವೇಳೆ ಅವರ ಬಳಿಯಿದ್ದ 1 ಲಕ್ಷದ 65 ಸಾವಿರ ರೂಪಾಯಿ ಹಣ ಮತ್ತು 7 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗುಂಡ್ಲುಪೇಟೆ ಪಟ್ಟಣದ ಶಿವಕುಮಾರ್, ರಂಗಸ್ವಾಮಿ, ರವಿ ಎಸ್, ಗುರುರಾಜ್, ಆನಂದ, ದೇವರಹಳ್ಳಿ ಗ್ರಾಮದ ಸುರೇಶ್, ಬಸವೇಶ, ಮಾದಪ್ಪ, ಮಲ್ಲಪ್ಪ, ಮಾದಪ್ಪ ಹಂಗಳ ಗ್ರಾಮದ ನಾಗೇಶ, ಶ್ರೀಕಾಂತ್, ಎಚ್.ಎನ್.ಶಿವಪ್ಪ ಬಂಧಿತರು.

13 People Arrested for Gambling Near Devarahalli Lake

ಗುಂಡ್ಲುಪೇಟೆ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ದೇವರಹಳ್ಳಿ ಗ್ರಾಮದ ಮಲ್ಲೇಶ್ವರ ದೇವಾಲಯದ ಪಕ್ಕದ ದೇವರಹಳ್ಳಿ ಕೆರೆಯ ಏರಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಚಾರ್ಜಬಲ್ ಲೈಟ್‌ ಅನ್ನು ಕಬ್ಬಿಣದ ಸರಳಿಗೆ ಅಳವಡಿಸಿ ಅದೇ ಬೆಳಕಿನಲ್ಲಿ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದರು. ಇನ್ನು ಈ ಬಗ್ಗೆ ಮಾಹಿತಿ ದೊರೆತ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುತ್ತುವರೆದು ಆರೋಪಿಗಳನ್ನು ಬಂಧಿಸಿ, ನಗದು, ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಇಬ್ಬರ ಬಂಧನ: ಅಕ್ರಮವಾಗಿ ಕೇರಳ ಲಾಟರಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೋಸ್ಟ್‌ನಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಹಾಗಾದರೆ ಎಷ್ಟು ಲಾಟರಿಗಳು ಹಾಗೂ ಇದರ ಮೌಲ್ಯ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ನಿವಾಸಿ ವೆಂಕಟೇಶ್ ಹಾಗೂ ಹಂಗಳದ ನಾಗರಾಜು ಬಂಧಿತ ಆರೋಪಿಗಳು. ಕೇರಳದಿಂದ ಅಕ್ರಮವಾಗಿ ಲಾಟರಿ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗುಂಡ್ಲುಪೇಟೆ ಪೊಲೀಸರು 2,14,610 ಮೌಲ್ಯದ 5,319 ಲಾಟರಿ ಟಿಕೆಟ್‌ಗಳು ಹಾಗೂ ಬಂಧಿತರ ಬಳಿಯಿದ್ದ 1,500 ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಇನ್ನೂ ಈ ಬಗ್ಗೆ ಇಬ್ಬರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಹಂದಿ ಮಾಂಸ ಸಂಗ್ರಹ: ತೋಟದ ಮನೆಯಲ್ಲಿ ಅಕ್ರಮವಾಗಿ ಕಾಡು ಹಂದಿ ಮಾಂಸ ಶೇಖರಣೆ ಮಾಡಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ ಹಾಗೂ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ತಮಿಳುನಾಡು ಮೂಲದ ಕಾರ್ತಿಕ್ ಪೆರುಮಾಳ್, ತಂಗರಾಜು ಪೆರುಮಾಳ್, ಮಾದೈಯನ್ ಪಳನಿ, ಗೋಪಿನಾಥಂ ಗ್ರಾಮದ ತಂಗರಾಜು ಬಂಧಿತ ಆರೋಪಿಗಳಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+