Zomato Gold : ಜೊಮಾಟೊ ಗೋಲ್ಡ್ ಚಂದಾದಾರಿಕೆ 2023ಕ್ಕೆ ಪುನಾರಂಭ
ಬೆಂಗಳೂರು, ಡಿಸೆಂಬರ್ 30: ಆನ್‌ಲೈನ್ ಆಹಾರ ವಿತರಣಾ ಕಂಪೆನಿ ಜೊಮಾಟೊ 2023ರಲ್ಲಿ ಗೋಲ್ಡ್ ಚಂದಾರಿಕೆಯನ್ನು ಪುನರ್ ಆರಂಭಿಸುತ್ತದೆ ಸಿಇಒ ದೀಪಿಂದರ್ ಗೋಯಲ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಪೋಸ್ಟ್‌ನಲ್ಲಿ ಗೋಯಲ್ ಅವರು ಬ್ಯಾಕ್ ಸೂನ್ ಎಂಬ ಶೀರ್ಷಿಕೆಯೊಂದಿಗೆ ಜೊಮಾಟೊ ಗೋಲ್ಡ್ ಗಿಫ್ ಅನ್ನು ಹಂಚಿಕೊಂಡಿದ್ದಾರೆ. ಜೊಮಾಟೊ ಬಳಕೆದಾರರು ಫುಡ್‌ಟೆಕ್ ದೈತ್ಯ ಜೊಮಾಟೊ ತನ್ನ ಸದಸ್ಯತ್ವ ಕಾರ್ಯಕ್ರಮವನ್ನು ಮರು ಆರಂಭಿಸಲು ಸ್ವಲ್ಪ ಸಮಯದಿಂದ ಕಾಯುತ್ತಿದ್ದರು. ಗೋಯಲ್ ಅವರ ಟ್ವೀಟ್‌ನಿಂದ ಬಳಕೆದಾರು ಹರ್ಷಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜೊಮಾಟೊ ಗೋಲ್ಡ್ ಸದಸ್ಯತ್ವದೊಂದಿಗೆ ಬಳಕೆದಾರರು ಉಚಿತ ವಿತರಣೆ, ಹೆಚ್ಚುವರಿ ರಿಯಾಯಿತಿಗಳು, ಉಚಿತ ಆಹಾರ ಮತ್ತು ಪಾನೀಯಗಳು ಮತ್ತು ಹಲವಾರು ಇತರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜೊಮಾಟೋ ಗೋಲ್ಡ್ ಸದಸ್ಯತ್ವ ಕಾರ್ಯಕ್ರಮವನ್ನು 2017ರಲ್ಲಿ ಪ್ರಾರಂಭಿಸಲಾಯಿತು. ಇದು 2020 ರಲ್ಲಿ ಕಾರ್ಯಕ್ರಮವನ್ನು ಜೊಮಾಟೋ ಪ್ರೋಗೆ ಅಪ್‌ಗ್ರೇಡ್ ಮಾಡಲಾಗಿದೆ.

ಮುಂದಿನ ವರ್ಷದಲ್ಲಿ ಕಂಪನಿಯು ಇನ್ನೂ ಹೆಚ್ಚಿನ ಪ್ರಯೋಜನಗಳೊಂದಿಗೆ ಜೊಮಾಟೋ ಪ್ರೋ ಪ್ಲಸ್ ಸದಸ್ಯತ್ವ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಆದಾಗ್ಯೂ ಭಾರತದ ಅತಿದೊಡ್ಡ ಆಹಾರ ವಿತರಣಾ ಕಂಪನಿಯು ಆಗಸ್ಟ್‌ನಿಂದ 'ಪ್ರೋ' ಮತ್ತು 'ಪ್ರೋ ಪ್ಲಸ್' ಕಾರ್ಯಕ್ರಮಗಳಿಗೆ ಹೊಸ ಸದಸ್ಯರು ಮತ್ತು ವ್ಯಾಪಾರಿ ಪಾಲುದಾರರನ್ನು ನೇಮಿಸುವುದನ್ನು ನಿಲ್ಲಿಸಿತು.
ತಮ್ಮ ಅವಧಿ ಮೀರಿದ ಪ್ರೊ ಸದಸ್ಯತ್ವವನ್ನು ನವೀಕರಿಸಲು ಪ್ರಯತ್ನಿಸುತ್ತಿರುವ ಬಳಕೆದಾರರಿಗೆ ಸಂದೇಶದಲ್ಲಿ ಜೊಮಾಟೊ "ಝೊಮಾಟೊ ಪ್ರೊ ಪ್ರೋಗ್ರಾಂನ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ನಾವು ನಿಮಗಾಗಿ ಹೊಸ ಮತ್ತು ಉತ್ತಮ ಅನುಭವಕ್ಕಾಗಿ ಕೆಲಸ ಮಾಡುತ್ತಿರುವುದರಿಂದ ನವೀಕರಣಕ್ಕಾಗಿ ಸದಸ್ಯತ್ವವು ಲಭ್ಯವಿಲ್ಲ. ಇತ್ತೀಚಿನ ಕೊಡುಗೆಗಳ ಕುರಿತು ಅಪ್‌ಡೇಟ್ ಆಗಿರಲು ಜೊಮಾಟೊ ಅಪ್ಲಿಕೇಶನ್ ಅನ್ನು ಪರಿಶೀಲಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ ಎಂದು ತಿಳಿಸಿದೆ.

ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಅವರ ಟ್ವೀಟ್ ನಂತರ, ಕಂಪನಿಯು ಹೊಸ ಮತ್ತು ಉತ್ತಮ ಅನುಭವವನ್ನು ನೀಡುವಲ್ಲಿ ಬಹುತೇಕ ಸಿದ್ಧಗೊಂಡಿದೆ. ಜೊಮಾಟೊ ಗೋಲ್ಡ್ ಪ್ರೋಗ್ರಾಂ ಅನ್ನು ಮರುಪ್ರಾರಂಭಿಸಲು ಕಂಪನಿಯು ಯಾವುದೇ ನಿರ್ದಿಷ್ಟ ದಿನಾಂಕವನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ ಮುಂದಿನ ತಿಂಗಳಿನಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
2017 ರಲ್ಲಿ ಜೊಮಾಟೊ ಗೋಲ್ಡ್ ಚಂದಾದಾರಿಕೆಯು ಮೂರು ತಿಂಗಳಿಗೆ ರೂ 299 ಮತ್ತು ಒಂದು ವರ್ಷಕ್ಕೆ ರೂ 999 ರ ಆರಂಭಿಕ ಬೆಲೆಯಲ್ಲಿ ಲಭ್ಯವಿತ್ತು. ಮರುಪ್ರಾರಂಭದ ನಂತರ, ಜೊಮಾಟೊ ಗೋಲ್ಡ್ ಚಂದದಾರಿಕೆ ಬೆಲೆಯು ಹೆಚ್ಚಿನ ಏರಿಕೆಯನ್ನು ನಿರೀಕ್ಷಿಸಬಹುದಾಗಿದೆ.











Click it and Unblock the Notifications