ಆದಾಯ ತೆರಿಗೆ ಮರುಪಾವತಿ ವಿಳಂಬ ಸಾಧ್ಯತೆ
ನವದೆಹಲಿ. ಫೆ. 19 : ಈ ಬಾರಿ ಆದಾಯ ತೆರಿಗೆ ಮರುಪಾವತಿ ವಿಳಂಬವಾಗುವ ಸಾಧ್ಯತೆಯಿದೆ. ಬಜೆಟ್ ನಲ್ಲಿ ಆದಾಯ ಮಿತಿ ಗುರುತು ಹಾಕಿಕೊಳ್ಳಬೇಕಾಗಿರುವುದು ಮರುಪಾವತಿ ಮೇಲೆ ಪರಿಣಾಮ ಬೀರಲಿದೆ.
ಮುಂದಿನ ತ್ರೈಮಾಸಿಕ ಅವಧಿ ಅಂದರೆ ಜೂನ್ 2015ರ ವೇಳೆಗೆ ಮರುಪಾವತಿ ಆಗುವ ಸಾಧ್ಯತೆ ಇದೆ. ಕಾರ್ಪೊರೇಟ್ ಕಂಪನಿಗಳು ಈಗಾಗಲೇ ಹೆಚ್ಚುವರಿ ತೆರಿಗೆ ಪಾವತಿ ಮಾಡಿವೆ. ಆದರೆ ಮರುಪಾವತಿ ಕುರಿತಂತೆ ಸ್ಪಷ್ಟ ಲೆಕ್ಕಾಚಾರ ಮಾಡಲು ಸರ್ಕಾರ ಕಾಲಾವಧಿ ತೆಗೆದುಕೊಳ್ಳಲಿದೆ.['ಸಾವಿರ ಕೋಟಿ ಒಡೆಯ ಕಳಂಕಿತ ಇಂಜಿನಿಯರ್ ವಜಾ']

ಕಾರ್ಪೊರೇಟ್ ಆದಾಯ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ ಮತ್ತು ಸಂಪತ್ತಿನ ತೆರಿಗೆ ಮೂಲಕ ಕಳೆದ ವರ್ಷ 6.36 ಲಕ್ಷ ಕೋಟಿ ರೂ. ಸಂಗ್ರಹ ಮಾಡಲಾಗಿತ್ತು. ಈ ಬಾರಿ ಇದನ್ನು ಶೇ. 15ರಷ್ಟು ಹೆಚ್ಚಿಸುವ ಗುರಿ ಸರ್ಕಾರದ ಮುಂದಿದೆ. ಒಟ್ಟು 7.36 ಲಕ್ಷ ಕೋಟಿ ರೂ. ತೆರಿಗೆ ಪಾವತಿ ನಿರೀಕ್ಷೆ ಹೊಂದಲಾಗಿದೆ.[ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಆನ್ ಲೈನ್ ನಲ್ಲಿ ಹೇಗೆ?]
ಜನವರಿ ಅಂತ್ಯಕ್ಕೆ ಲೆಕ್ಕ ಹಾಕಿದರೆ ಸರ್ಕಾರ ಶೇ. 70 ಅಂದರೆ 5.78715 ಕೋಟಿ ರೂ. ಗಳನ್ನು ನೇರತೆರಿಗೆಯಿಂದ ಸಂಗ್ರಹಿಸಿದೆ. ಇಲ್ಲಿ ಸಹ ಕೊರತೆ ಕಂಡುಬಂದಿದ್ದು ತೆರಿಗೆ ಮರುಪಾವತಿ ವಿಳಂಬಕ್ಕೆ ಕಾರಣವಾಗಲಿದೆ.












Click it and Unblock the Notifications