1000ಕ್ಕೂ ಹೆಚ್ಚು ಅಂಶ ಕುಸಿದ ಸೆನ್ಸೆಕ್ಸ್, ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ

ಮುಂಬೈ, ಸೆಪ್ಟೆಂಬರ್ 21: ಶುಕ್ರವಾರದಂದು ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕವೂ ಭಾರೀ ಇಳಿಕೆ ಕಂಡಿತು. ಸೆನ್ಸೆಕ್ಸ್ ನಲ್ಲಿ ಒಟ್ಟಾರೆಯಾಗಿ ಸಾವಿರಕ್ಕೂ ಹೆಚ್ಚು ಅಂಶ ಹಾಗೂ ನಿಫ್ಟಿ ಮುನ್ನೂರಕ್ಕೂ ಹೆಚ್ಚು ಅಂಶ ಇಳಿಕೆ ಕಂಡಿತು. ಸೆನ್ಸೆಕ್ಸ್ ಬುಧವಾರದ ದಿನಾಂತ್ಯಕ್ಕೆ 37,121 ವಹಿವಾಟು ಮುಗಿಸಿತ್ತು. ಶುಕ್ರವಾರ 37,489 ಅಂಶದೊಂದಿಗೆ ವ್ಯವಹಾರ ಆರಂಭಿಸಿ, 35,993.64 ಅಂಶ ತಲುಪಿತು.

ಇನ್ನು ನಿಫ್ಟಿ 11,234.35 ಅಂಶದೊಂದಿಗೆ ಬುಧವಾರ ವ್ಯವಹಾರ ಮುಗಿಸಿತ್ತು. ಶುಕ್ರವಾರ 11,271.30 ಅಂಶದೊಂದಿಗೆ ದಿನದ ವಹಿವಾಟು ಆರಂಭಿಸಿ 10,866.45 ಅಂಶ ತಲುಪಿತು. ದಿನದ ಆರಂಭದ ವಹಿವಾಟಿನಲ್ಲೇ ಯೆಸ್ ಬ್ಯಾಂಕ್ ನ ಷೇರು ಶೇ 34ರಷ್ಟು ಕುಸಿತ ಕಂಡಿತು. ಬುಧವಾರದ ದಿನಾಂತ್ಯಕ್ಕೆ 318.5ಕ್ಕೆ ಯೆಸ್ ಬ್ಯಾಂಕ್ ಷೇರು ವಹಿವಾಟು ಮುಗಿಸಿತ್ತು. ಗುರುವಾರ ಮೊಹರಂ ಪ್ರಯುಕ್ತ ಷೇರು ಮಾರುಕಟ್ಟೆ ಕಾರ್ಯ ನಿರ್ವಹಿಸಿರಲಿಲ್ಲ.

ಶುಕ್ರವಾರ ಬೆಳಗ್ಗೆ ರು.286.65ರೊಂದಿಗೆ ವ್ಯವಹಾರ ಆರಂಭಿಸಿದ ಈ ಖಾಸಗಿ ಬ್ಯಾಂಕ್ ನ ಷೇರು ವಾರ್ಷಿಕ ಕನಿಷ್ಠ ಬೆಲೆಯಾದ 210.10ಕ್ಕೆ ತಲುಪಿತು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಯೆಸ್ ಬ್ಯಾಂಕ್ ಷೇರಿನ ಬೆಲೆ ಸೆನ್ಸೆಕ್ಸ್ ನಲ್ಲಿ ರು.73.10 (ಶೇ 23.05) ಇಳಿಕೆಯಲ್ಲಿ 245.10 ದರದಲ್ಲಿ ವ್ಯವಹಾರ ನಡೆಸುತ್ತಿತ್ತು. ಯೆಸ್ ಬ್ಯಾಂಕ್ ನ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಇಒ ರಾಣಾ ಕಪೂರ್ ರನ್ನು ತಮ್ಮ ಸ್ಥಾನದಿಂದ ನಿರ್ಗಮಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿತ್ತು.

Yes bank shares plunge 34% after RBI trims CEO Rana Kapoors term

ಈ ವರ್ಷದ ಆಗಸ್ಟ್ ನಲ್ಲಿ ಕಪೂರ್ ಅವರಿಗೆ ಮೂರು ವರ್ಷದ ವಿಸ್ತರಣೆ ನೀಡಿ, ಬ್ಯಾಂಕ್ ನ ಮಂಡಳಿ ಒಪ್ಪಿಗೆ ಸೂಚಿಸಿತ್ತು. ಅದಕ್ಕಾಗಿ ಆರ್ ಬಿಐ ನ ಒಪ್ಪಿಗೆಗಾಗಿ ಕೇಳಲಾಗಿತ್ತು. ಯೆಸ್ ಬ್ಯಾಂಕ್ ನ ಅನುತ್ಪಾದಕ ಆಸ್ತಿ (ಎನ್ ಪಿಎ) ಹತ್ತು ಸಾವಿರ ಕೋಟಿಯಷ್ಟನ್ನು ಕಳೆದ ಎರಡು ಅವಧಿಯಿಂದ ಕಡಿಮೆ ತೋರಿಸಲಾಗುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.

ಅರವತ್ತೊಂದು ವರ್ಷದ ಕಪೂರ್ ಯೆಸ್ ಬ್ಯಾಂಕ್ ನಲ್ಲಿ ಶೇಕಡಾ ಹತ್ತರಷ್ಟು ಷೇರನ್ನು ಹೊಂದಿದ್ದಾರೆ. ಇದೀಗ ಅವರ ಅಧಿಕಾರಾವಧಿಯನ್ನು ಜನವರಿ 31,2019ಕ್ಕೆ ಮೊಟಕುಗೊಳಿಸಿ, ಆ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಿಕೊಳ್ಳುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+