ಯೆಸ್ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ಕೊಟ್ಟ ಸರ್ಕಾರ

ನವದೆಹಲಿ, ಮಾರ್ಚ್ 15: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಪುನಶ್ಚೇತನ, ಬ್ಯಾಂಕ್ ಮಂಡಳಿ ಪುನರ್ ರಚನೆ ಕಾರ್ಯ ಪ್ರಗತಿಯಲ್ಲಿದೆ. ಬ್ಯಾಂಕ್ ವ್ಯವಹಾರದ ಮೇಲೆ ಹೇರಿದ್ದ ನಿರ್ಬಂಧವನ್ನು ಮಾರ್ಚ್ 18ರಿಂದ ತೆರವುಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಗೆಜೆಟ್ ನೋಟಿಫಿಕೇಷನ್ ಪ್ರಕಾರ, ಮಾರ್ಚ್ 13ರಿಂದ ಯೆಸ್ ಬ್ಯಾಂಕ್ ಪುನರ್ ರಚನೆ ಯೋಜನೆ 2020 ಜಾರಿಯಲ್ಲಿದೆ. ಹೊಸ ನಿರ್ದೇಶಕರ ಮಂಡಳಿ ರಚಿಸಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಾಜಿ ಅಧ್ಯಕ್ಷ ಸುನೀಲ್ ಮೆಹ್ತಾರನ್ನು ಹೊಸ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಲಿ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಮುಂದಿನ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಬ್ಯಾಂಕಿಂಗ್ ನಿಯಮವನ್ನು ಗಾಳಿಗೆ ತೂರಿದ ಕಾರಣದಿಂದಾಗಿ ಯೆಸ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಆರ್ ಬಿಐ ನಿರ್ದೇಶನದಂತೆ ಹಣಕಾಸು ಇಲಾಖೆ ಮಾರ್ಚ್ 5ರಂದು ಹೊರಡಿಸಿದ ಸುತ್ತೋಲೆಯಂತೆ ಹಣ ವಿತ್‌ ಡ್ರಾ ಮಾಡಲು 50,000 ರೂಪಾಯಿಗಳ ಮಿತಿ ಹೇರಲಾಗಿದ್ದು, ಮಾರ್ಚ್ 5ರಿಂದ ಏಪ್ರಿಲ್ 3ರ ವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಯೆಸ್ ಬ್ಯಾಂಕ್ ಜೊತೆಗೆ ಡಿಜಿಟಲ್ ಪೇಮೆಂಟ್ ಒಪ್ಪಂದ ಮಾಡಿಕೊಂಡಿದ್ದ ಸಹ ಸಂಸ್ಥೆಗಳ ವ್ಯವಹಾರಕ್ಕೂ ತೊಂದರೆ ಉಂಟಾಗಿದೆ. ಮುಖ್ಯವಾಗಿ ಫೋನ್ ಪೇ ವ್ಯವಹಾರ ಕೂಡಾ ಸರಿಯಾಗಿ ಆಗುತ್ತಿಲ್ಲ. ಈ ಕುರಿತಂತೆ ಮುಖ್ಯ ಕಾರ್ಯಕಾರಿ ಸಮೀರ್ ನಿಗಮ್ ಅವರು ಸ್ಪಷ್ಟಪಡಿಸಿದ್ದರು.

ಮಾರ್ಚ್ 11ರಂದು ಕ್ರೆಡಿಟ್ ಕಾರ್ಡ್ ಬಳಕೆಗೆ ಅನುಮತಿ

ಮಾರ್ಚ್ 11ರಂದು ಕ್ರೆಡಿಟ್ ಕಾರ್ಡ್ ಬಳಕೆಗೆ ಅನುಮತಿ

ಮಾರ್ಚ್ 11ರಂದು ಯೆಸ್ ಬ್ಯಾಂಕ್ ಗ್ರಾಹಕರು ಈಗ ಎಟಿಎಂನಿಂದ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಯೆಸ್ ಬ್ಯಾಂಕ್ ಡೆಬಿಟ್ ಕಾರ್ಡನ್ನು ಯೆಸ್ ಬ್ಯಾಂಕ್ ಎಟಿಎಂ ಅಲ್ಲದೆ ಇತರೆ ಎಟಿಎಂ ಬ್ಯಾಂಕ್ ಎಟಿಎಂಗಳಲ್ಲೂ ಬಳಸಬಹುದು ಎಂದು ಯೆಸ್ ಬ್ಯಾಂಕ್ ಅಧಿಕೃತವಾಗಿ ಟ್ವೀಟ್ ಮಾಡಿತ್ತು. ಈಗ ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತ ಪಾವತಿ, ಸಾಲ ಪಾವತಿ ಬಗ್ಗೆ ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇತರೆ ಬ್ಯಾಂಕ್ ಖಾತೆಗಳ ಮೂಲಕವೂ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿ ಕಟ್ಟುವ ಅವಕಾಶವನ್ನು ನೀಡಲಾಗಿದೆ ಎಂದು ಯೆಸ್ ಬ್ಯಾಂಕ್ ಹೇಳಿದೆ.

ಠೇವಣಿದಾರರು ಆತಂಕಪಡುವ ಅಗತ್ಯವಿಲ್ಲ

ಠೇವಣಿದಾರರು ಆತಂಕಪಡುವ ಅಗತ್ಯವಿಲ್ಲ

ಯೆಸ್ ಬ್ಯಾಂಕ್‌ನಲ್ಲಿ ಠೇವಣಿ ಹೊಂದಿರುವವರು ಆತಂಕಪಡುವ ಅಗತ್ಯವಿಲ್ಲ. ಅವರ ಹಣ ಭದ್ರವಾಗಿದೆ. ಆರ್‌ಬಿಐ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 1949 ಸೆಕ್ಷನ್ 35ಎ ಅಡಿ ನಿರ್ದೇಶನ ನೀಡಿದೆ. ಲೋನ್ ರಿನ್ಯೂ ಮಾಡುವಂತಿಲ್ಲ. ಆದರೆ ಬಂಡವಾಳ ಹೂಡಬಹುದಾಗಿದೆ. ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾಣಾ ಕಪೂರ್ ಬಂಧಿಸಿದೆ. 2004ರಲ್ಲಿ ರಾಣಾ ಕಪೂರ್ ಮತ್ತು ಅಶೋಕ್ ಕಪೂರ್ ಯೆಸ್ ಬ್ಯಾಂಕ್ ಸ್ಥಾಪನೆ ಮಾಡಿದ್ದರು.

ಯೆಸ್ ಬ್ಯಾಂಕ್ ನೆರವಿಗೆ ಬಂದ ಎಸ್ಬಿಐ

ಯೆಸ್ ಬ್ಯಾಂಕ್ ನೆರವಿಗೆ ಬಂದ ಎಸ್ಬಿಐ

ಯೆಸ್ ಬ್ಯಾಂಕ್ ನಲ್ಲಿ ಶೇ 49ರಷ್ಟು ಪಾಲನ್ನು 2450 ಕೋಟಿ ರು ಮೊತ್ತಕ್ಕೆ ಖರೀದಿಸುವುದಾಗಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಘೋಷಿಸಿದೆ. ಯೆಸ್ ಬ್ಯಾಂಕ್ 255 ಕೋಟಿ ರು ಮೌಲ್ಯ ಷೇರು ಲಭ್ಯವಿದ್ದು, ಪ್ರತಿ ಷೇರಿಗೆ 2 ರು ದರ ಹೊಂದಿದೆ. ಪ್ರತಿ ಷೇರಿಗೆ 10 ರು ನಂತೆ 2450 ಕೋಟಿ ರು ಮೌಲ್ಯವನ್ನು ಎಸ್ ಬಿಐ ಘೋಷಿಸಿದೆ.

ಆದರೆ ನಂತರ ಯೆಸ್ ಬ್ಯಾಂಕ್ ಪುನಶ್ಚೇತನ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ ಆರ್ ಬಿಐ ನಿರ್ದೇಶನದ ಮೇರೆಗೆ ಎಸ್ಬಿಐ 7,250 ಕೋಟಿ ರು ಬಂಡವಾಳ ಜೊತೆಗೆ ಇತರೆ ಬ್ಯಾಂಕ್ ಕೂಡಾ ಹೂಡಿಕೆಗೆ ನಿರ್ಧರಿಸಿವೆ.

ಫುಡ್ ಕೂಪನ್ ಕಾರ್ಡ್ ವರ್ಕ್ ಆಗುತ್ತಾ?

ಫುಡ್ ಕೂಪನ್ ಕಾರ್ಡ್ ವರ್ಕ್ ಆಗುತ್ತಾ?

ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ನೀಡಲಾಗುವ ಫುಡ್ ಕೂಪನ್ ಕಾರ್ಡ್ ಅಥವಾ ಮೀಲ್ ಕಾರ್ಡ್ ಯೆಸ್ ಬ್ಯಾಂಕ್ ಡೆಬಿಟ್ ಕಾರ್ಡ್ ಆಗಿತ್ತು. ಸದ್ಯ ಈ ಕಾರ್ಡ್ ಗಳು ವರ್ಕ್ ಆಗುತ್ತಿಲ್ಲ. ಇದರಿಂದ ದಿನಸಿ ಖರೀದಿ, ಆನ್ ಲೈನ್ ಆಹಾರ ಖರೀದಿ ಮಾಡದೆ ಅನೇಕರು ಕಷ್ಟಪಟ್ಟಿದ್ದರು. ಆದರೆ, ಮಾರ್ಚ್ 18ರ ಸಂಜೆ 6 ಗಂಟೆ ನಂತರ ನಿರ್ಬಂಧ ತೆರವುಗೊಳ್ಳಲಿದ್ದು, ಎಂದಿನಂತೆ ಕಾರ್ಡ್ ಕಾರ್ಯ ನಿರ್ವಹಿಸಲಿದೆ ಎಂದು ಯೆಸ್ ಬ್ಯಾಂಕ್ ಎಸ್ಎಂಎಸ್ ಮೂಲಕ ಗ್ರಾಹಕರಿಗೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+