2017ರ ಅತಿಕೆಟ್ಟ ಪಾಸ್ವರ್ಡ್ ಗಳು ಬಹಿರಂಗ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 22: 'ಸುಲಭವಾದ ಪಾಸ್ವರ್ಡ್ ಬಳಸಿ, ನಿಮ್ಮ ಖಾತೆ ನಾಶಕ್ಕೆ ನೀವೇ ಕಾರಣರಾಗಿ' ಪ್ರತಿ ವರ್ಷದಂತೆ ಈ ವರ್ಷ ಕೂಡಾ ಅತಿ ಕೆಟ್ಟ ಪಾಸ್ವರ್ಡ್ ನೀಡುವ ಅಭ್ಯಾಸ ಮುಂದುವರೆದಿದೆ. 123456 ಇದು 2013, 2014, 2015, 2016 ಹಾಗೂ 2017ರಲ್ಲಿ ಅತಿ ಕೆಟ್ಟ ಪಾಸ್ವರ್ಡ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

ಸುಲಭವಾದ ಪಾಸ್ವರ್ಡ್ ನೀಡಿದ ಹಲವು ಇಂಟರ್ ನೆಟ್ ಬಳಕೆದಾರರು ಹ್ಯಾಕರ್ ಗಳ ತುತ್ತಾಗುವುದು ಸಾಮಾನ್ಯ ಸಂಗತಿ. ಸರಳ, ಸುಸೂತ್ರವಾದ ಪಾಸ್ ವರ್ಡ್ ಬಳಸಿದರೆ ಅದು ನೆನಪಿನಲ್ಲುಳಿಯುವುದು ಸುಲಭ ಎಂಬ ತರ್ಕಕ್ಕೆ ಜೋತುಬಿದ್ದ ಬಳಕೆದಾರರು ಅನಗತ್ಯವಾಗಿ ತೊಂದರೆ ಸಿಲುಕಿಕೊಳ್ಳುತ್ತಿದ್ದಾರೆ.

ಗೂಗಲ್, ಫೇಸ್ ಬುಕ್, ಟ್ವಿಟ್ಟರ್ ಕೂಡಾ ಅತಿಕ್ರಮಿಗಳ ದಾಳಿಗೆ ಆಗಾಗ ತುತ್ತಾಗುತ್ತಿರುತ್ತದೆ. ಇದಕ್ಕೆ ಬಳಕೆದಾರರ ಸಾಮಾನ್ಯ ಜ್ಞಾನದ ಕೊರತೆ ಕಾರಣ ಎಂದು ಇಂಟರ್ನೆಟ್ ಸುರಕ್ಷತಾ ಸಂಸ್ಥೆ ಸ್ಪಾಶ್ ಡೇಟಾ ಹೇಳಿದೆ.

Worst Passwords of 2017 : 123456 tops the list

ಪ್ರತಿ ವರ್ಷದಂತೆ ಅತಿಕೆಟ್ಟ ಪಾಸ್ ವರ್ಡ್ ಗಳನ್ನು ಪಟ್ಟಿಯನ್ನು ಸ್ಪಾಶ್ ಡೇಟಾ ಈ ವರ್ಷವೂ ಪ್ರಕಟಿಸಿದೆ.ಸುಮಾರು 5 ಮಿಲಿಯನ್ ಪಾಸ್ ವರ್ಡ್ ಗಳ ಮಾಹಿತಿಯನ್ನಾಧರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಹ್ಯಾಕರ್ ಗಳಿಂದ ಮುಕ್ತರಾಗಲು ಸ್ವಲ್ಪವಾದರೂ ಕ್ಲಿಷ್ಟವಾದ ಪಾಸ್ ವರ್ಡ್ ಬಳಸುವಂತೆ ಕೋರಲಾಗಿದೆ. 2017ರ 25 ಅತಿ ಕೆಟ್ಟ ಪಾಸ್ ವರ್ಡ್ ಗಳ ಪಟ್ಟಿ ಹೀಗಿದೆ:

1. 123456

2. password
3. 12345678
4. qwerty
5. 12345
6. 123456789
7. football
8. 1234
9. 1234567
10. baseball
11. welcome
12. 1234567890
13. abc123
14. 111111
15. 1qaz2wsx
16. dragon
17. master
18. monkey
19. letmein
20. login
21. princess
22. qwertyuiop
23. solo
24. passw0rd
25. starwars
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Worst Passwords of 2017 : '123456' tops the list,for the fourth consecutive year from 2013. Here are the list of top 25 passwords from 123456 to starwars.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ