ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಉದ್ಯೋಗಿಗಳ ವಜಾ: ವರದಿ

ನವದೆಹಲಿ, ಜೂನ್‌ 5: ಬಹುರಾಷ್ಟ್ರೀಯ ಮಾನವ ಸಂಪನ್ಮೂಲ ಕಂಪನಿ, ಚಾಲೆಂಜರ್, ಗ್ರೇ & ಕ್ರಿಸ್‌ಮಸ್ ಬಿಡುಗಡೆ ಮಾಡಿದ ಮಾಸಿಕ ವರದಿಯ ಪ್ರಕಾರ, ಈ ವರ್ಷದ ಮೇ ತಿಂಗಳಲ್ಲಿ ಸರಿಸುಮಾರು 4,000 ಉದ್ಯೋಗ ನಷ್ಟಕ್ಕೆ ಕೃತಕ ಬುದ್ಧಿಮತ್ತೆ (AI) ಕಾರಣ ಎಂದು ಗುರುತಿಸಲಾಗಿದೆ.

ಈ ಅಂಕಿ ಅಂಶವು ಮೇ ತಿಂಗಳಿಗೆ ವರದಿಯಾದ ಒಟ್ಟು ಉದ್ಯೋಗ ಕಡಿತದ ಶೇಕಡಾ 4.9 ರಷ್ಟಿದೆ ಎಂದು ತಿಳಿದು ಬಂದಿದೆ. ವಿವಿಧ ಕ್ಷೇತ್ರಗಳಾದ್ಯಂತ ಉದ್ಯೋಗ ನಷ್ಟಗಳು ಸಂಭವಿಸಿವೆ. ಐಬಿಎಂ ಸಿಇಒ ಅರವಿಂದ್ ಕೃಷ್ಣ ಅವರು ತಮ್ಮ ಕಂಪನಿಯು ಕಾಲಾನಂತರದಲ್ಲಿ ಹಂತ ಹಂತವಾಗಿ ಕೃತಕ ಬುದ್ದಿಮತ್ತೆಯಿಂದಾಗಿ 6,800 ಉದ್ಯೋಗಗಳನ್ನು ಬದಲಾಯಿಸಲಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

Workforce Reduction by Artificial Intelligence Technology: Report

ಉದ್ಯೋಗದಾತರು ಕೃತಕ ಬುದ್ಧಿಮತ್ತೆಯನ್ನು ಬಳಸುವ ವೆಚ್ಚ ಪರಿಣಾಮಕಾರಿ ಪರ್ಯಾಯವನ್ನು ಬಯಸಿದ್ದರಿಂದ ಇಬ್ಬರು ಕಾಪಿರೈಟರ್‌ಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಸಿಬಿಎಸ್‌ ನ್ಯೂಸ್ ವರದಿ ಮಾಡಿದೆ. ಆದರೆ ಮಾಧ್ಯಮ ಕಂಪನಿ ಸಿಎನ್‌ಇಟಿ ಲೇಖನಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯನ್ನು ಕಾರ್ಯಗತಗೊಳಿಸುವಾಗ ವರದಿಗಾರರನ್ನು ವಜಾಗೊಳಿಸಿದೆ.

ಜನವರಿಯಿಂದ ಮೇ ವರೆಗೆ 4,17,500 ಉದ್ಯೋಗ ನಷ್ಟ ಸಂಭವಿಸಿವೆ. ಕೋವಿಡ್‌-19 ಸಾಂಕ್ರಾಮಿಕದಿಂದ 1.4 ಮಿಲಿಯನ್ ಉದ್ಯೋಗ ನಷ್ಟವಾಗಿದೆ. ಸಾಂಕ್ರಾಮಿಕದ ಪ್ರಭಾವವನ್ನು ಹೊರತುಪಡಿಸಿ 2023ರ ಪ್ರಾರಂಭವು 2009ರ ಆರ್ಥಿಕ ಹಿಂಜರಿತದ ನಂತರ ಅತಿ ಹೆಚ್ಚು ವಜಾಗಳನ್ನು ಕಂಡಿದೆ. ಇದು ಸರಿಸುಮಾರು 8,20,000 ಉದ್ಯೋಗ ನಷ್ಟವಾಗಿದೆ ಎಂದು ವರದಿ ತಿಳಿಸಿದೆ.

ಚಾಲೆಂಜರ್‌ನ ಹಿರಿಯ ಉಪಾಧ್ಯಕ್ಷ, ಗ್ರೇ & ಕ್ರಿಸ್‌ಮಸ್, ಆಂಡ್ರ್ಯೂ ಚಾಲೆಂಜರ್, ಗ್ರಾಹಕರ ವಿಶ್ವಾಸವು ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಆದ್ದರಿಂದ ಉದ್ಯೋಗಾವಕಾಶಗಳು ಕುಂಠಿತವಾಗಿವೆ. ಆರ್ಥಿಕ ಮಂದಗತಿಯಿಂದಾಗಿ ಕಂಪನಿಗಳು ನೇಮಕಾತಿಯ ನಿರೀಕ್ಷೆಯಲ್ಲಿ ಹಿಂದೆ ಸರಿಯುತ್ತಿವೆ ಎಂದು ತಿಳಿಸಿದ್ದಾರೆ.

Workforce Reduction by Artificial Intelligence Technology: Report

ಕೃತಕ ಬುದ್ದಿಮತ್ತೆ ಜೊತೆಗೆ ವ್ಯಾಪಾರ ಕುಂಠಿತವೂ ಮೇ ತಿಂಗಳಲ್ಲಿ ಉದ್ಯೋಗ ನಷ್ಟಕ್ಕೆ ಪ್ರಮುಖ ಕಾರಣವೆಂದು ವರದಿ ತೋರಿಸಿದೆ. ಇದರ ಪರಿಣಾಮವಾಗಿ 19,600 ಉದ್ಯೋಗ ನಷ್ಟಗಳು ಉಂಟಾಗಿವೆ. ಮಾರುಕಟ್ಟೆ/ಆರ್ಥಿಕ ಪರಿಸ್ಥಿತಿಗಳು ಸುಮಾರು 14,600 ಉದ್ಯೋಗ ನಷ್ಟಕ್ಕೆ ಕಾರಣವಾಗಿವೆ. 12,900 ಉದ್ಯೋಗ ಕಡಿತಗಳಿಗೆ ಯಾವುದೇ ಕಾರಣವನ್ನು ಒದಗಿಸಲಾಗಿಲ್ಲ. 2023 ರ ಮೊದಲ ಐದು ತಿಂಗಳುಗಳಲ್ಲಿ ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳು ಸುಮಾರು 2,06,300 ಉದ್ಯೋಗ ಕಡಿತಗಳಿಗೆ ಪ್ರಾಥಮಿಕ ಕಾರಣವೆಂದು ಉಲ್ಲೇಖಿಸಲಾಗಿದೆ.

ಕೃತಕ ಬುದ್ದಿಮತ್ತೆ ಮೇಲೆ ಬೆಳೆಯುತ್ತಿರುವ ಅವಲಂಬನೆಯು ಉದ್ಯೋಗದ ಭವಿಷ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮಾರ್ಚ್‌ನಲ್ಲಿ ಹೂಡಿಕೆ ಬ್ಯಾಂಕ್ ಗೋಲ್ಡ್‌ಮನ್ ಸ್ಯಾಚ್ಸ್ ಒಂದು ವರದಿಯನ್ನು ಬಿಡುಗಡೆ ಮಾಡಿದ್ದು, ಕೃತಕ ಬುದ್ದಿಮತ್ತೆ ವಿಶ್ವಾದ್ಯಂತ 300 ಮಿಲಿಯನ್ ಪೂರ್ಣ ಸಮಯದ ಉದ್ಯೋಗಗಳನ್ನು ಸಂಭಾವ್ಯವಾಗಿ ಸ್ಥಳಾಂತರಿಸಬಹುದು. ಇದು ಜಾಗತಿಕ ಉದ್ಯೋಗಿಗಳ ಸುಮಾರು ಐದನೇ ಒಂದು ಭಾಗದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+