ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ, ಟಿಸಿಎಸ್ ನಂತರ ಸಂಬಳ ಏರಿಕೆ ಮಾಡಿದ ವಿಪ್ರೋ

By Mahesh
|
Google Oneindia Kannada News

ಬೆಂಗಳೂರು, ಜೂ.03: ದೇಶದ ಪ್ರಮುಖ ಸಾಫ್ಟ್ ವೇರ್ ಸಂಸ್ಥೆಗಳಾದ ಇನ್ಫೋಸಿಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ ಉದ್ಯೋಗಿಗಳ ಸಂಬಳ ಏರಿಕೆ ಮಾಡಿದ ಬೆನ್ನಲ್ಲೇ ವಿಪ್ರೋ ಕೂಡಾ ಭಾರತದ ಉದ್ಯೋಗಿಗಳ ಸಂಬಳ ಹೆಚ್ಚಿಸಿದೆ.

ಭಾರತದ ಉದ್ಯೋಗಿಗಳಿಗೆ ಶೇ 7ರಷ್ಟು ಸಂಬಳ ಏರಿಕೆಯಾಗಿದ್ದರೆ, ಆನ್ ಸೈಟ್ (ವಿದೇಶದಲ್ಲಿ ಕಾರ್ಯನಿರತ) ಉದ್ಯೋಗಿಗಳಿಗೆ ಸರಾಸರಿ ಶೇ 2ರಷ್ಟು ಸಂಬಳ ಏರಿಕೆ ಮಾಡಲಾಗಿದೆ. [ವಿಪ್ರೋ ಪ್ರೇಂಜಿ ಪುತ್ರ ರಿಷಬ್ ಗೆ ಉನ್ನತ ಸ್ಥಾನ]

ಸಂಬಳ ಏರಿಕೆ ಜೂ.1, 2015ರಿಂದ ಅನ್ವಯವಾಗಲಿದೆ. ಅರ್ಹ ಉದ್ಯೋಗಿಗಳಿಗೆ ಸರಾಸರಿ ಶೇ 7 ಹಾಗೂ ಆನ್ ಸೈಟ್ ಟೆಕ್ಕಿಗಳಿಗೆ ಶೇ 2 ರಷ್ಟು ಸಂಬಳ ಏರಿಕೆ ಮಾಡಲಾಗಿದೆ ಎಂದು ಮಾನವ ಸಂಪನ್ಮೂಲ ವಿಭಾಗದ ಜಾಗತಿಕ ಮುಖ್ಯಸ್ಥ ಸೌರಭ್ ಗೋವಿಲ್ ಹೇಳಿದ್ದಾರೆ.

Wipro announces average salary hike of 7%

ಷೇರುಪೇಟೆಯಲ್ಲಿ ಗುರುವಾರ ಬೆಳಗ್ಗೆ ವಿಪ್ರೋ ಷೇರುಗಳು ಸುಸ್ಥಿತಿಯಲ್ಲಿವೆ. ಬಿಎಸ್ ಇಯಲ್ಲಿ 549.30 ಬೆಲೆಯಂತೆ ವಹಿವಾಟು ಆರಂಭಿಸಿದ ಷೇರುಗಳು ಶೇ 1.87 ರಷ್ಟು ಏರಿಕೆ (ಸಮಯ 11.30) ಕಂಡಿವೆ. ಇದೇ ವೇಳೆ ಎನ್ ಎಸ್ ಇನಲ್ಲಿ 555.90 ಬೆಲೆಯಂತೆ ಏರಿಕೆ ಕಂಡಿದೆ. [ಟಿಸಿಎಸ್ ಹಿರಿಯ ಉದ್ಯೋಗಿ ಈಗ ವಿಪ್ರೋ ಸಿಒಒ]

ವಿಪ್ರೋ ಸಂಸ್ಥೆ ಪ್ರತಿಸ್ಪರ್ಧಿ ಇನ್ಫೋಸಿಸ್ ಸಂಸ್ಥೆ ಸರಾಸರಿ ಶೇ 6.5ರಷ್ಟು ಸಂಬಳ ಏರಿಕೆ ಮಾಡಿತ್ತು. ಆನ್ ಸೈಟ್ ಉದ್ಯೋಗಿಗಳಿಗೆ ಶೇ 2 ರಷ್ಟು ಸಂಬಳ ಏರಿಸಲಾಗಿದೆ.

ಟಿಸಿಎಸ್ ಕೂಡಾ ಭಾರತದಲ್ಲಿನ ಉದ್ಯೋಗಿಗಳಿಗೆ ಶೇ 8ರಷ್ಟು ಸಂಬಳ ಏರಿಕೆ ಹಾಗೂ ಆನ್ ಸೈಟ್ ಉದ್ಯೋಗಿಗಳಿಗೆ ಸರಾಸರಿ ಶೇ 2 ರಿಂದ 4 ರಷ್ಟು ಸಂಬಳ ಜಾಸ್ತಿ ಮಾಡಲಾಗಿತ್ತು.

English summary
India’s third-largest software exporter Wipro announced an average wage hike of 7% for its employees in India. For its onsite employees (workforce abroad) the average salary hike is 2%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X