ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ಹಿರಿಯ ಉದ್ಯೋಗಿ ಈಗ ವಿಪ್ರೋ ಸಿಒಒ

By Mahesh
|
Google Oneindia Kannada News

ನವದೆಹಲಿ, ಮಾ.16: ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಹಿರಿಯ ಉದ್ಯೋಗಿ ಅಬಿದ್ ಅಲಿ ಅವರನ್ನು ವಿಪ್ರೋ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಬಿದ್ ಅಲಿ ನೀಮುಚ್ವಾಲ ಅವರು ಈಗ ವಿಪ್ರೋ ಸಿಒಒ ಆಗಿ ನೇಮಕಗೊಂಡಿದ್ದಾರೆ.

ಅಬಿಡ್ ಅಲಿ ನೀಮುಚ್ವಾಲ ಅವರು ಗ್ರೂಪ್ ನಿರ್ದೇಶಕ ಹಾಗೂ ಸಿಒಒ ಆಗಿ ಏಪ್ರಿಲ್ 1, 2015ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ವಿಪ್ರೋ ಪ್ರಕಟಿಸಿದೆ.

ಸೆಪ್ಟೆಂಬರ್ 2009ರಿಂದ ವಿಪ್ರೋ ಸಂಸ್ಥೆಯಲ್ಲಿ ಸಿಒಒ ಸ್ಥಾನ ಖಾಲಿ ಇತ್ತು. ಎಎಲ್ ರಾವ್ ಅವರು ಜೂನ್ 2005 ರಿಂದ ಸೆಪ್ಟೆಂಬರ್ 2008ರ ತನಕ ವಿಪ್ರೋ ಸಿಒಒ ಆಗಿದ್ದರು. ['ಅನಂದ' ಕಳೆದುಕೊಂಡ ವಿಪ್ರೋ ಸಂಸ್ಥೆ ]

Wipro appoints Former TCS Veteran Abid Neemuchwala as COO and Group President

ವಿಪ್ರೋ ಸಂಸ್ಥೆ ಜಾಗತಿಕ ಮೂಲ ಸೌಕರ್ಯ ಸೇವೆ, ವ್ಯವಹಾರಿಕ ಅನ್ವಯ ಸೇವೆ, ಉನ್ನತ ತಂತ್ರಜ್ಞಾನ ಸಂಬಂಧಿತ ವಿಭಾಗಗಳ ಕಾರ್ಯ ನಿರ್ವಹಣೆ ಹೊಣೆ ಅಬಿದ್ ಅಲಿ ಅವರ ಮೇಲಿರುತ್ತದೆ. ಒಟ್ಟಾರೆ ಯುರೋಪ್, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ಕೇಂದ್ರಗಳ ಏಳಿಗೆ ಈಗ ಅಬಿದ್ ಕೈಲಿದೆ. ಟಿಸಿಎಸ್ ನಲ್ಲಿ ಸುಮಾರು 23 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅಬಿದ್ ಅವರು ಟಿಸಿಎಸ್ ನ ಬಿಪಿಒ ವಿಭಾಗದ ಪ್ರಗತಿಗೆ ಕಾರಣರಾಗಿದ್ದರು.

ಅಬಿದ್ ಅಲಿ ಅವರ ನೇಮಕಾತಿಯಿಂದ ವಿಪ್ರೋ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಐಟಿ ಹಾಗೂ ಬಿಪಿಎಸ್ ವ್ಯವಹಾರ ಸರಳ ಹಾಗೂ ಸುಲಭಗೊಳ್ಳಲಿದೆ ಎಂದು ವಿಪ್ರೋ ಸಿಇಒ ಟಿಕೆ ಕುರಿಯನ್ ಪ್ರತಿಕ್ರಿಯಿಸಿದ್ದಾರೆ.

ಎನ್ ಐಟಿ ರಾಯ್ ಪುರ್ ನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಇಂಜಿನಿಯರ್ ಪದವಿ ಪಡೆದಿರುವ ನಿಮೂಚ್ವಾಲ ಅವರು ಐಐಟಿ ಮುಂಬೈನಿಂದ ಇಂಡಸ್ಟ್ರೀಯಲ್ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ ಪಡೆದುಕೊಂಡಿದ್ದಾರೆ.

ಅಬಿದ್ ಅಲಿ ಅವರ ನೇಮಕಾತಿ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಬಿಎಸ್ ಇ ನಲ್ಲಿ ಬೆಳಗ್ಗೆ ವಿಪ್ರೋ ಸಂಸ್ಥೆ ಷೇರುಗಳು ಶೇ 1.07ರಷ್ಟು ಏರಿಕೆ ಕಂಡಿತ್ತು. (ಪಿಟಿಐ)

English summary
India's third-largest software services firm Wipro has appointed Abid Ali Neemuchwala as the Group President and Chief Operating Officer.Neemuchwala joins Wipro after a 23-year-long stint at India's largest software services firm Tata Consultancy Services (TCS) where he was heading its BPO arm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X