'ಅನಂದ' ಕಳೆದುಕೊಂಡ ವಿಪ್ರೋ ಸಂಸ್ಥೆ

ಎನ್ ಆರ್ ನಾರಾಯಣಮೂರ್ತಿ ಅವರ ಪುನರ್ ಆಗಮನದ ನಂತರ ಇನ್ಫೋಸಿಸ್ ನಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೇ ರೀತಿ ವಿಪ್ರೋದಲ್ಲಿ ಬದಲಾವಣೆ ಗಾಳಿ ಬೀಸಿದೆ.
ವಿಪ್ರೋದಲ್ಲಿ 2011ರಲ್ಲಿ ಬದಲಾವಣೆಯ ಸುಳಿವು ಸಿಕ್ಕಿತ್ತು. ಸಿಇಒ ಟಿಕೆ ಕುರಿಯನ್ ಪ್ರವೇಶದ ನಂತರ ಈಗ ಹಿರಿಯ ಉಪಾಧ್ಯಕ್ಷ, ಜಾಗತಿಕ ಮೂಲ ಸೌಕರ್ಯ ಸೇವೆ ಹಾಗೂ ವಿಪ್ರೋ ಇನ್ಫೊಟೆಕ್ ನ ಮುಖ್ಯಸ್ಥರಾಗಿದ್ದ ಅನಂದ್ ಶಂಕರನ್ ಅವರು ವಿಪ್ರೋ ತೊರೆದಿದ್ದಾರೆ. ಆನಂದ್ ಶಂಕರನ್ ಅವರ ಸ್ಥಾನಕ್ಕೆ ಸೌಮಿತ್ರೋ ಘೋಷ್ ಅವರನ್ನು ಕೂರಿಸಲಾಗಿದೆ ಎಂದು ವಿಪ್ರೋ ಪ್ರಕಟಿಸಿದೆ.
ಬೆಂಗಳೂರಿನ ಐಟಿ ವಿಭಾಗದ ಕೇಂದ್ರ ಕಚೇರಿ ಹೊಂದಿರುವ ವಿಪ್ರೋ ಸಂಸ್ಥೆ ತನ್ನ ಮುಂದಿನ ಬದಲಾವಣೆಯಲ್ಲಿ ಹಿರಿಯ ಉಪಾಧ್ಯಕ್ಷ ಶಾಜಿ ಫರೂಕ್ ಅವರನ್ನು BFSI ವ್ಯವಹಾರಿಕ ಘಟಕದ ಜಾಗತಿಕ ಮುಖ್ಯಸ್ಥರನ್ನಾಗಿ ನೇಮಕಮಾಡಿದೆ. ಜಾಗತಿಕ ಮೂಲ ಸೌಕರ್ಯ ಸೇವೆ(GIS) ಹಾಗೂ ಹಿರಿಯ ಉಪಾಧ್ಯಕ್ಷರಾಗಿ ಜಿ.ಕೆ ಪ್ರಸನ್ನ ಅವರಿಗೆ ಬಡ್ತಿ ಸಿಕ್ಕಿದೆ. ಇದರ ಜತೆಗೆ ಹಾಲಿ ಪ್ರಾಡೆಕ್ಟ್ ಇಂಜಿನಿಯರಿಂಗ್ ಸಲ್ಯೂಷನ್ಸ್ (PES) ಹಾಗೂ SVP ಜಾಗತಿಕ ಮುಖ್ಯಸ್ಥ ಸ್ಥಾನವೂ ಪ್ರಸನ್ನ ಅವರ ಕೈಲಿದೆ.
ಜನವರಿ 1, 2014ರಿಂದ ಶಾಜಿ, ಸೌಮಿತ್ರೊ, ಪ್ರಸನ್ನ ಹಾಗೂ ಜಲೀಲ್ ಅವರ ಹೊಸ ಅಧಿಕಾರ ಅವಧಿ ಆರಂಭವಾಗಲಿದ್ದು ಎಲ್ಲರೂ ಸಿಇಒ ಹಾಗೂ ಕಾರ್ಯಕಾರಿ ನಿರ್ದೇಶಕ ಟಿಕೆ ಕುರಿಯನ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ.
2011ರಲ್ಲಿ GIS ವಿಭಾಗ ಮುಖ್ಯಸ್ಥರಾಗಿ ವಿಪ್ರೋದಲ್ಲಿ ಕಾಣಿಸಿಕೊಂಡ ಶಂಕರ್ ಅವರು ವಿಪ್ರೋ ತೊರೆದ ಮೇಲೆ ಯಾವ ಕಂಪನಿ ಸೇರುತ್ತಿದ್ದಾರೆ ಎಂಬುದರ ಬಗ್ಗೆ ಸುಳಿವು ಸಿಕ್ಕಿಲ್ಲ. GIS ವಿಭಾಗ ವಿಪ್ರೋ ಸಂಸ್ಥೆಯ ಶೆ 33ರಷ್ಟು ಆದಾಯಕ್ಕೆ ಕಾರಣವಾಗಿದೆ.
ಆನಂದ್ ಶಂಕರನ್ ಕಾಲದ ಬೆಳವಣಿಗೆಗಳು ಇಂತಿದೆ: ವಿಪ್ರೋ ಅನ್ಫೋಟೆಕ್ ಸ್ಪೆನ್ಸರ್ಸ್ ರಿಟೇಲ್ ಲಿ. ಕಂಪನಿಗೆ ಬಹುಕೋಟಿ ಮೌಲ್ಯದ ಹೊರಗುತ್ತಿಗೆ ಸೇವೆ ಒದಗಿಸುವ ಒಪ್ಪಂದ ಸಹಿ ಹಾಕಿತ್ತ್ತು. ರಿಟೇಲ್ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಭಾರೀ ಅವಕಾಶಗಳಿವೆ ಎಂದು ಆನಂದ್ ಹೇಳಿದ್ದರು.
ಪೊಲೀಸ್ ತಂತ್ರಾಂಶ: ಪೊಲೀಸ್ ಐಟಿ ತಂತ್ರಾಂಶವನ್ನು ವಿಪ್ರೋ ಸಂಸ್ಥೆಯವರು ಅಭಿವೃದ್ಧಿಪಡಿಸಿದ್ದರು. ಪೊಲೀಸ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗಣಕೀಕರಣ ಗೊಳಿಸುವ ಸಾಮರ್ಥ್ಯ ಹೊಂದಿದ್ದಿ ಎಲ್ಲಾ ಪೊಲೀಸ್ ಇಲಾಖೆಯ ಪ್ರತಿಯೊಂದು ಘಟಕವನ್ನು ಜಾಲಕ್ಕೆ ಸೇರಿಸಿ ಸುಲಭವಾಗಿ ನಿಯಂತ್ರಣ ಸಾಧಿಸಬಹುದಾಗಿದೆ.
ಇತ್ತೀಚೆಗೆ MIAL ನಿಲ್ದಾಣದಲ್ಲಿ ಐಟಿ ಸೇವೆಯನ್ನು ಸಮಗ್ರವಾಗಿ ಒದಗಿಸುವ ಹೊಣೆ ವಿಪ್ರೋ ಹೆಗಲೇರಿತ್ತು. ಐಟಿ ಉದ್ಯಮಕ್ಕೆ ಇದೊಂದು ಗಣನೀಯ ಅವಕಾಶವಾಗಿ ಪರಿಣಮಿಸಿದೆ. ಜತೆಗೆ ಸವಾಲಿನದ್ದೂ ಆಗಿದೆ. ವಿಶ್ವ ಮಟ್ಟದಲ್ಲಿಯೂ ಇಂತಹ ಸೇವೆಗಳಿಗೆ ವಿಫುಲ ಅವಕಾಶಗಳಿವೆ. ವಿಪ್ರೋ ಈ ಸೇವೆಗೆ ಸಜ್ಜಾಗಿದೆ' ಎಂದು Wipro Infotech ಉಪಾಧ್ಯಕ್ಷ ಆನಂದ್ ಶಂಕರನ್ ಪ್ರತಿಕ್ರಿಯಿಸಿದ್ದರು.












Click it and Unblock the Notifications