ಮೂರು ತಿಂಗಳಿನಲ್ಲಿ 10 ಲಕ್ಷ ಚಂದಾದಾರರನ್ನು ಕಳೆದುಕೊಂಡಿದ್ದೇಕೆ ನೆಟ್‌ಫ್ಲಿಕ್ಸ್?

ನವದೆಹಲಿ, ಜುಲೈ 20: ಕಳೆದ ಏಪ್ರಿಲ್‌ನಿಂದ ಜೂನ್ ತಿಂಗಳ ಅವಧಿಯಲ್ಲಿ ನೆಟ್‌ಫ್ಲಿಕ್ಸ್ ಬರೋಬ್ಬರಿ 9,70,000 ಚಂದಾದಾರರನ್ನು ಕಳೆದುಕೊಂಡಿರುವುದಾಗಿ ಮಂಗಳವಾರಿ ಅಧಿಕೃತವಾಗಿ ಘೋಷಿಸಿದೆ. ಈ ಕೆಟ್ಟ ಪರಿಸ್ಥಿತಿಯಿಂದ ಚೇತರಿಕೆ ಹೊಂದಲು ಕಂಪನಿಯು ಹೊಸ ಯೋಜನೆಯನ್ನು ರೂಪಿಸಿದೆ. ಪ್ರಸ್ತುತ ತ್ರೈಮಾಸಿಕದಲ್ಲಿ ವಾಲ್ ಸ್ಟ್ರೀಟ್ ನಿರೀಕ್ಷೆಗಳಿಗಿಂತ ಕಡಿಮೆ ಬೇಡಿಕೆಯನ್ನು ಹೊಂದಿದೆ.

ಈ ಹಿನ್ನೆಲೆ ಕಂಪನಿಯು ಮುಂದಿನ ವರ್ಷ ಜಾಹೀರಾತು-ಬೆಂಬಲಿತ ಶ್ರೇಣಿಯನ್ನು ಪ್ರಾರಂಭಿಸಲು ಯೋಜಿಸಿದೆ. ಡಾಲರ್ ಬೆಲೆ ಹೆಚ್ಚಾಗಿರುವುದು ಸಹ ವಿದೇಶಗಳಲ್ಲಿ ಚಂದಾದಾರರ ಕಾಯ್ದಿರಿಸುವಿಕೆಗೆ ಪೆಟ್ಟು ಕೊಟ್ಟಿರುವ ಬಗ್ಗೆ ಎಚ್ಚರಿಸಲಾಗಿದೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ನೆಟ್‌ಫ್ಲಿಕ್ಸ್ ಒಂದು ತ್ರೈಮಾಸಿಕದಲ್ಲಿಯೇ ಸರಿಸುಮಾರು 20 ಲಕ್ಷ ಚಂದಾದಾರರನ್ನು ಕಳೆದುಕೊಳ್ಳಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ವಾಲ್ ಸ್ಟ್ರೀಟ್‌ಗೆ ಆಘಾತಕಾರಿ ಎನ್ನುವಂತೆ ದೀರ್ಘಾವಧಿ ಬೆಳವಣಿಗೆಯ ನಿರೀಕ್ಷೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು.

ಮೂರು ತಿಂಗಳಿನಲ್ಲಿ 10 ಲಕ್ಷ ಚಂದಾದಾರರು ಮಾಯ

ಮೂರು ತಿಂಗಳಿನಲ್ಲಿ 10 ಲಕ್ಷ ಚಂದಾದಾರರು ಮಾಯ

ಎರಡನೇ ತ್ರೈಮಾಸಿಕದಲ್ಲಿ ಚಂದಾದಾರರ ಸಂಖ್ಯೆಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೂ, ಜುಲೈನಿಂದ ಸೆಪ್ಟೆಂಬರ್‌ವರೆಗೆ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್ 10 ಲಕ್ಷ ಹೊಸ ಚಂದಾದಾರರನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. Refinitiv ಸಮೀಕ್ಷೆ ನಡೆಸಿದ ವಿಶ್ಲೇಷಕರ ಪ್ರಕಾರ ವಾಲ್ ಸ್ಟ್ರೀಟ್ ವಿಶ್ಲೇಷಕರು 10.84 ಲಕ್ಷ ಚಂದಾದಾರರ ನಿರೀಕ್ಷೆಯಲ್ಲಿ ಇದ್ದಾರೆ.

ನೆಟ್‌ಫ್ಲಿಕ್ಸ್‌ನ ಆದಾಯ ಇಳಿಕೆಗೆ ಕಾರಣವೇನು?

ನೆಟ್‌ಫ್ಲಿಕ್ಸ್‌ನ ಆದಾಯ ಇಳಿಕೆಗೆ ಕಾರಣವೇನು?

ವಾಲ್ಟ್ ಡಿಸ್ನಿ ಕೋ, ವಾರ್ನರ್ ಬ್ರದರ್ಸ್ ಡಿಸ್ಕವರಿ ಮತ್ತು ಆಪಲ್ ಇಂಕ್ ಸೇರಿದಂತೆ ಪ್ರತಿಸ್ಪರ್ಧಿಗಳು ತಮ್ಮದೇ ಆದ ಸ್ಟ್ರೀಮಿಂಗ್ ಸೇವೆಗಳಲ್ಲಿ ಹೆಚ್ಚು ಹೂಡಿಕೆ ಮಾಡುವುದರಿಂದ ನೆಟ್‌ಫ್ಲಿಕ್ಸ್‌ನ ಆದಾಯಕ್ಕೆ ಪೆಟ್ಟು ಬಿದ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

 ನೆಟ್‌ಫ್ಲಿಕ್ಸ್ ಷೇರುದಾರರ ಪತ್ರದಲ್ಲಿ ಉಲ್ಲೇಖವಾಗಿದ್ದೇನು?

ನೆಟ್‌ಫ್ಲಿಕ್ಸ್ ಷೇರುದಾರರ ಪತ್ರದಲ್ಲಿ ಉಲ್ಲೇಖವಾಗಿದ್ದೇನು?

ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್ ಹಂಚಿಕೆ, ಇತರೆ ಕಂಪನಿಗಳೊಂದಿಗಿನ ಸ್ಪರ್ಧೆ ಮತ್ತು ನಿಧಾನಗತಿಯ ಆರ್ಥಿಕತೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಷೇರುದಾರರು ಕಂಪನಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ನಿಧಾನಗತಿಗೆ ಸಂಬಂಧಿಸಿದಂತೆ ಮರುಪರಿಶೀಲನೆ ನಡೆಸಲಾಗುವುದು ಎಂದು ಕಂಪನಿಯು ತಿಳಿಸಿದೆ. ಅದಾಗ್ಯೂ, ನೆಟ್‌ಫ್ಲಿಕ್ಸ್ ಜಾಗತಿಕ ಮಟ್ಟದಲ್ಲಿ 221 ಚಂದಾದಾರನ್ನು ಹೊಂದಿರುವ ಪ್ರಬಲ ಸ್ಟ್ರೀಮಿಂಗ್ ಸೇವೆಯನ್ನು ನೀಡುತ್ತಿರುವ ಕಂಪನಿಯಾಗಿ ಗುರುತಿಸಿಕೊಂಡಿದೆ.

ನೆಟ್‌ಫ್ಲಿಕ್ಸ್ ನೀಡಿದ ಭರವಸೆಗಳನ್ನು ತಿಳಿಯಿರಿ

ನೆಟ್‌ಫ್ಲಿಕ್ಸ್ ನೀಡಿದ ಭರವಸೆಗಳನ್ನು ತಿಳಿಯಿರಿ

ಕಳೆದ ಏಪ್ರಿಲ್‌ನಲ್ಲಿ, ಪಾಸ್‌ವರ್ಡ್-ಹಂಚಿಕೆಯ ಮೇಲೆ ಶಿಸ್ತುಕ್ರಮವನ್ನು ಯೋಜಿಸುವ ಮೂಲಕ ಮತ್ತು ಜಾಹೀರಾತಿನೊಂದಿಗೆ ಕಡಿಮೆ-ವೆಚ್ಚದ ಶ್ರೇಣಿ ಪ್ರಾರಂಭಿಸುವ ಮೂಲಕ ಭಾಗಶಃ ಗ್ರಾಹಕರ ದೋಷಗಳನ್ನು ಪರಿಹರಿಸುವುದಾಗಿ ಕಂಪನಿ ಹೇಳಿಕೊಂಡಿತ್ತು.

ಕಳೆದ ವಾರ ನೆಟ್‌ಫ್ಲಿಕ್ಸ್ ಮೈಕ್ರೋಸಾಫ್ಟ್ ಕಾರ್ಪ್ ಅನ್ನು ಜಾಹೀರಾತು-ಬೆಂಬಲಿತ ಕೊಡುಗೆ ಆಗಿ ತನ್ನ ತಂತ್ರಜ್ಞಾನ ಮತ್ತು ಮಾರಾಟ ಪಾಲುದಾರ ಎಂದು ಘೋಷಿಸಿತು.

"ಸ್ಟ್ರೇಂಜರ್ ಥಿಂಗ್ಸ್" ಸರಣಿಯ ಜನಪ್ರಿಯತೆಯನ್ನು ನಿರ್ಮಿಸಲು ಕಂಪನಿಯು ಕೆಲಸ ಮಾಡುತ್ತಿದೆ. ಅದರ ಕೆಲವು ದೊಡ್ಡ ಯಶಸ್ಸನ್ನು ಫ್ರಾಂಚೈಸಿಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಏಪ್ರಿಲ್‌ನಿಂದ ಜೂನ್ ವರೆಗೆ, ಪ್ರತಿ ಷೇರಿಗೆ 3.20 ಡಾಲರ್ ಆದಾಯ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+