ಸಗಟು ಹಣದುಬ್ಬರ ಶೇ. 0.58ರಷ್ಟು ಇಳಿಕೆ: ಆಹಾರ ಪದಾರ್ಥಗಳ ಬೆಲೆ ಏರಿಕೆ
ನವದೆಹಲಿ, ಆಗಸ್ಟ್ 14: ಒಂದೆಡೆ ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಮತ್ತೊಂದೆಡೆ, ಹಣದುಬ್ಬರದ ಬಗ್ಗೆ ದೇಶದಲ್ಲಿ ನಕಾರಾತ್ಮಕ ಸುದ್ದಿಗಳು ಕೇಳಿ ಬರುತ್ತಿವೆ. ನಿನ್ನೆ(ಆಗಸ್ಟ್ 13) ಚಿಲ್ಲರೆ ಹಣದುಬ್ಬರ ದತ್ತಾಂಶ ಬಂದಿದೆ ಮತ್ತು ಇಂದು ಸಗಟು ಹಣದುಬ್ಬರ ದರ ಬಿಡುಗಡೆಗೊಂಡಿದೆ.
ಜುಲೈನಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದತ್ತಾಂಶವನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಕುಸಿತ ಹೆಚ್ಚಾಗಿದ್ದು, ಸಗಟು ಹಣದುಬ್ಬರವು ಜುಲೈನಲ್ಲಿ ಶೇಕಡಾ 0.58 ಕ್ಕೆ ಇಳಿದಿದೆ. ಆದರೆ ಆಹಾರ ಪದಾರ್ಥಗಳ ಬೆಲೆ ಏರಿಕೆಗೊಂಡಿದೆ.
ಸಗಟು ಹಣದುಬ್ಬರವು ಜೂನ್‌ನಲ್ಲಿ ಶೇ. 1.81 ರಷ್ಟಿತ್ತು. ಮೇ ತಿಂಗಳಲ್ಲಿ ಅದು (-) 3.37 ಮತ್ತು ಏಪ್ರಿಲ್‌ನಲ್ಲಿ (-) 1.57 ರಷ್ಟಿತ್ತು. ವಾಣಿಜ್ಯ ಸಚಿವಾಲಯ ಹೊರಡಿಸಿದ ಮಾಹಿತಿ ಪ್ರಕಾರ, ಜುಲೈ 2020 ರಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರ -0.58 ರಷ್ಟಿತ್ತು. ಕಳೆದ ವರ್ಷ ಈ ಅಂಕಿ ಅಂಶವು ಶೇಕಡಾ 1.17 ರಷ್ಟಿದೆ.

ಸಚಿವಾಲಯದ ಪ್ರಕಾರ, ಆಹಾರ ಪದಾರ್ಥಗಳ ಸಗಟು ಬೆಲೆಗಳ ಹಣದುಬ್ಬರವು ಜುಲೈನಲ್ಲಿ ಶೇ. 4.08 ಕ್ಕೆ ಏರಿದೆ, ಜೂನ್‌ನಲ್ಲಿ ಇದು ಶೇ. 2.04 ರಷ್ಟಿತ್ತು. ಆದರೆ, ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಹಣದುಬ್ಬರವು ಶೇಕಡಾ 9.84 ಕ್ಕೆ ಇಳಿದಿದ್ದು, ಜೂನ್‌ನಲ್ಲಿ ಇದು ಶೇ. 13.60 ರಷ್ಟಿತ್ತು. ಮಾಹಿತಿಯ ಪ್ರಕಾರ, ತಯಾರಿಸಿದ ಉತ್ಪನ್ನಗಳಿಗೆ ಸಗಟು ಹಣದುಬ್ಬರವು ಜುಲೈನಲ್ಲಿ ಶೇ. 0.51 ರಷ್ಟಿತ್ತು. ಇದು ಜೂನ್‌ನಲ್ಲಿ ಶೇ. 0.08 ರಷ್ಟಿತ್ತು.












Click it and Unblock the Notifications