ಡಿಸೆಂಬರ್ 31ರಿಂದ ಈ ಫೋನ್ ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ!

ಬೆಂಗಳೂರು, ಡಿಸೆಂಬರ್ 26: ಫೇಸ್‌ಬುಕ್ ಒಡೆತನದ ವಾಟ್ಸಾಪ್ ಇನ್ಮುಂದೆ ಕೆಲ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ವರ್ಕ್ ಆಗುವುದಿಲ್ಲ. ನೋಕಿಯಾ ಸಿಂಬಿಯಾನ್, ಬ್ಲಾಕ್ ಬೆರಿ ಓಎಸ್ ಆಧಾರಿತ ಫೋನ್ ಗಳಲ್ಲಿ ವಾಟ್ಸಪ್ ಬಳಕೆ ಸಾಧ್ಯವಿಲ್ಲ. ಎರಡನೇ ಬಾರಿಗೆ ವಾಟ್ಸಾಪ್ ತನ್ನ ಸೇವೆಯನ್ನು ಕೆಲ ಫೋನ್ ಗಳಿಗೆ ಬಂದ್ ಮಾಡುತ್ತಿದೆ.

ಹಳೇಯ ಫೋನ್‌ಗಳು ಹೊಸ ವಾಟ್ಸಾಪ್ ಅಪ್ಡೇಟ್ ಗೆ ಸಪೋರ್ಟ್ ಮಾಡುತ್ತಿಲ್ಲ. ಬ್ಲಾಕ್ ಬೇರಿ ಓಸ್, ಬ್ಲಾಕ್ ಬೇರಿ 10, ನೋಕಿಯಾ S40, ನೋಕಿಯಾ S60 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫೋನ್‌ ಗಳಲ್ಲಿ ವಾಟ್ಸಾಪ್ ಜೂನ್ 30 ರಿಂದ ಸ್ಥಗಿತಗೊಳಿಸಲಾಗಿತ್ತು.

WhatsApp

ಈಗ ಈ ಪಟ್ಟಿ ಇನ್ನಷ್ಟು ಆಪರೇಟಿಂಗ್ ಸಿಸ್ಟಮ್ ಗಳು ಸೇರಿಕೊಂಡಿವೆ. ಬ್ಲಾಕ್ ಬೆರ್ರಿ 10, ಬ್ಲಾಕ್ ಬೆರಿ ಅಪರೇಟಿಂಗ್ ಸಿಸ್ಟಮ್, ವಿಂಡೋಸ್ ಫೋನ್ 8.0, ನೋಕಿಯಾದ ಸಿಂಬಿಯಾನ್ ಎಸ್ 60(ಜೂನ್ 30 ರ ನಂತರ), ನೋಕಿಯಾ ಎಸ್ 40(ಡಿಸೆಂಬರ್ 31, 2018 ರ ತನಕ ಸಪೋರ್ಟ್ ಇರುತ್ತದೆ), ಆಂಡ್ರಾಯ್ಡ್ ಆವೃತ್ತಿ 2.3.7 ಹಾಗೂ ಹಳೆ ಆವೃತ್ತಿ ಫೆಬ್ರವರಿ 01 2020ರ ತನಕ ತಕ್ಕಮಟ್ಟಿನ ಸಪೋರ್ಟ್ ಸಿಗಲಿದೆ.

ಇದಕ್ಕೆ ಏನು ಪರಿಹಾರ? : ನಿಮ್ಮಲ್ಲಿ ನೋಕಿಯಾ ಸಿಂಬಿಯಾನ್, ಬ್ಲಾಕ್ ಬೆರಿ ಅಥವಾ ವಿಂಡೋಸ್ ಓಎಸ್ ಫೋನ್ ಇದ್ದರೆ ಅದರ ಓಸ್ ಅಪ್ ಗ್ರೇಡ್ ಮಾಡಿಕೊಳ್ಳಿ.

2009ರಲ್ಲಿ ವಾಟ್ಸಾಪ್ ಮೊದಲಿಗೆ ಬಂದಾಗ ಸಿಂಬಿಯಾನ್ ಹಾಗೂ ಬ್ಲಾಕ್ ಬೆರಿ ಮಾರುಕಟ್ಟೆಯಲ್ಲಿ ಶೇ 70ರಷ್ಟು ಪಾಲು ಹೊಂದಿದ್ದವು, ಆಂಡ್ರಾಯ್ಡ್ ಹಾಗೂ ಐಓಎಸ್ ಶೇ 25ರಷ್ಟು ಮಾತ್ರ ಇತ್ತು. ಈಗ ಕಾಲ ಬದಲಾಗಿದೆ. ಅದರಂತೆ, ವಾಟ್ಸಾಪ್ ಬಳಸಲು ಓಎಸ್ ಅಪ್ ಗ್ರೇಡ್ ಮಾಡಿ, ಇಲ್ಲ ಫೋನ್ ಬದಲಾಯಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+