ಕೇಂದ್ರ ಬಜೆಟ್: ಡಿಜಿಟಲ್ ವ್ಯವಹಾರ ಹೆಚ್ಚಿಸಲು ಏನು ಮಾಡಬಹುದು?

ಕ್ಯಾಷ್ ಲೆಸ್ ಆರ್ಥಿಕತೆ ಅನ್ನೋದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಪಠಿಸುತ್ತಿರುವ ಬೀಜ ಮಂತ್ರ. ಈ ಬಾರಿಯ ಬಜೆಟ್ ಫೆಬ್ರವರಿ ಒಂದರಂದು ಇದ್ದು, ಅಂದು ಡಿಜಿಟಲ್ ವ್ಯವಹಾರಗಳ ಮೇಲಿನ ಶುಲ್ಕವನ್ನು ಇಳಿಸಬಹುದು ಎಂಬ ನಿರೀಕ್ಷೆ ಬಹಳ ಎತ್ತರದಲ್ಲಿದೆ.

2016ರ ನವೆಂಬರ್ ಎಂಟರಂದು ಅಪನಗದೀಕರಣ ಘೋಷಣೆ ಆದ ದಿನದಿಂದ ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವ ಧ್ವನಿ ಹೆಚ್ಚುತ್ತಲೇ ಇದೆ. ಅದಕ್ಕೆ ತಕ್ಕಂತೆಯೇ ಸರಕಾರ ಕೂಡ ನಿಯಮ ರೂಪಿಸಿ, ಜನರು ಬಲವಂತವಾಗಿ ಆದರೂ ಡಿಜಿಟಲ್ ವ್ಯವಹಾರಗಳನ್ನು ನಡೆಸುವಂತೆ ಮಾಡಲಾಗುತ್ತಿದೆ.

ಆದರೆ, ಈ ರೀತಿ ಡಿಜಿಟಲ್ ವ್ಯವಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿದರೆ ಅದಕ್ಕಾಗಿ ಒಂದಿಷ್ಟು ಶುಲ್ಕ ಎಂದು ವಿಧಿಸಲಾಗುತ್ತಿದೆ. ಬ್ಯಾಂಕ್ ಗಳು ಇಂತಿಷ್ಟು ಅಂತ ಉಚಿತ ವ್ಯವಹಾರಗಳನ್ನು ಮಾಡಲು ಅವಕಾಶ ನೀಡಿದ್ದರೂ ಆ ಮಿತಿಯ ನಂತರ ಶುಲ್ಕ ಹಾಕಲಾಗುತ್ತಿದೆ. ಸರಕಾರದಿಂದಲೇ ಬ್ಯಾಂಕ್ ಗಳನ್ನು ಮನವಿ ಮಾಡಿ, ಈ ಶುಲ್ಕ ವಿಧಿಸಬೇಡಿ ಎಂದು ಕೇಳಿದ್ದಾಯಿತು.

ಕೆಲ ತಿಂಗಳ ಮಟ್ಟಿಗಷ್ಟೇ ಜಾರಿಯಿದ್ದ ವಿನಾಯಿತಿ

ಕೆಲ ತಿಂಗಳ ಮಟ್ಟಿಗಷ್ಟೇ ಜಾರಿಯಿದ್ದ ವಿನಾಯಿತಿ

ಐಆರ್ ಸಿಟಿಸಿ ಅಂದರೆ ಭಾರತೀಯ ರೈಲ್ವೆಯಲ್ಲಿ ಆನ್ ಲೈನ್ ಟಿಕೆಟ್ ಬುಕಿಂಗ್ ಗೆ ಸೇವಾ ಶುಲ್ಕವನ್ನು ತೆಗೆಯಲಾಯಿತು. ಆದರೆ ಇವೆಲ್ಲವನ್ನೂ ಕೆಲ ತಿಂಗಳ ಮಟ್ಟಿಗಷ್ಟೇ ಜಾರಿಗೆ ತಂದರು. ಬ್ಯಾಂಕ್ ಗಳು ಮೊದಮೊದಲಿಗೆ ಆನ್ ಲೈನ್ ವ್ಯವಹಾರಗಳಿಗೆ ಯಾವುದೇ ಶುಲ್ಕ ವಿಧಿಸಲಿಲ್ಲ. ಆದರೆ ನಂತರ ತಿಂಗಳಿಗೆ ಇಂತಿಷ್ಟೇ ವ್ಯವಹಾರ ಎಂದು ಮಿತಿ ಹೇರಲಾಯಿತು.

ಗ್ರಾಹಕರಿಗಾಗಿ ಯೋಜನೆಗಳು

ಗ್ರಾಹಕರಿಗಾಗಿ ಯೋಜನೆಗಳು

ಈ ರೀತಿ ಮಾಡುವುದರಿಂದ ಜನರು ಎಲೆಕ್ಟ್ರಾನಿಕ್ ಪಾವತಿಯಿಂದ ವಿಮುಖರಾಗಬಹುದು ಎಂಬ ಕಾರಣಕ್ಕೆ ಡಿಜಿಟಲ್ ವ್ಯವಹಾರ ಮಾಡುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರಾಹಕರಿಗೆ ಯೋಜನೆಗಳನ್ನು ಘೋಷಿಸಬೇಕು ಎಂಬ ನಿರೀಕ್ಷೆಯಿದೆ.

ಪಿಒಎಸ್ ಮಷೀನ್ ಖರೀದಿ ಮೇಲೆ ತೆರಿಗೆ ವಿನಾಯಿತಿ

ಪಿಒಎಸ್ ಮಷೀನ್ ಖರೀದಿ ಮೇಲೆ ತೆರಿಗೆ ವಿನಾಯಿತಿ

ಗ್ರಾಮೀಣ ಭಾಗದಲ್ಲಿ ಈಗಲೂ ನಗದು ವ್ಯವಹಾರವೇ ಹೆಚ್ಚಿನ ಪ್ರಮಾಣದಲ್ಲಿದೆ. ಪಿಒಎಸ್ ಮಷೀನ್ ಖರೀದಿ ಮೇಲೆ ತೆರಿಗೆ ವಿನಾಯಿತಿಯನ್ನು ಸರಕಾರ ಘೋಷಿಸಬೇಕಿದೆ. ಇನ್ನು ಸರಕಾರದ ಭಿಮ್ ಮತ್ತು ಯುಪಿಐ ಅಪ್ಲಿಕೇಷನ್ ಬಳಸಿ ಮಾಡುವ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಅರುಣ್ ಜೇಟ್ಲಿ ಅವರು ಗ್ರಾಹಕರಿಗೆ ಕೆಲ ಯೋಜನೆ ರೂಪಿಸಬಹುದು ಎಂಬ ನಿರೀಕ್ಷೆ ಇದೆ.

ರೆಫರಲ್ ಬೋನಸ್ ಸಹ ಹೆಚ್ಚಿಸುವ ಸಾಧ್ಯತೆ

ರೆಫರಲ್ ಬೋನಸ್ ಸಹ ಹೆಚ್ಚಿಸುವ ಸಾಧ್ಯತೆ

ಜತೆಗೆ ಈ ಎರಡೂ ಅಪ್ಲಿಕೇಷನ್ ಗಳ ರೆಫರಲ್ ಬೋನಸ್ ಸಹ ಹೆಚ್ಚಿಸುವ ಸಾಧ್ಯತೆ ಇದೆ. ಕಳೆದ ವರ್ಷ ಜುಲೈನಲ್ಲಿ ಈ ಅಪ್ಲಿಕೇಷನ್ ಗಳ ರೆಫರಲ್ ಬೋನಸ್ ಹೆಚ್ಚಿಸಬೇಕು ಎಂದು ದೇಶದ ವಿವಿಧ ಬ್ಯಾಂಕ್ ಗಳು ಮನವಿ ಮಾಡಿದ್ದವು. ಸದ್ಯಕ್ಕೆ ಈ ಅಪ್ಲಿಕೇಷನ್ ಪರಿಚಯಿಸುವವರಿಗೆ ಹತ್ತು ರುಪಾಯಿ ಪ್ರೋತ್ಸಾಹ ಧನ ಇದೆ. ಅದನ್ನು ಇಪ್ಪತ್ತೈದು ರುಪಾಯಿಗೆ ಏರಿಸಬೇಕು ಎಂಬುದು ಸದ್ಯಕ್ಕಿರುವ ಬೇಡಿಕೆ. ಇನ್ನು ಆನ್ ಲೈನ್ ಟಿಕೆಟ್ ಬುಕಿಂಗ್ ಮೇಲಿನ ಶುಲ್ಕವನ್ನು ಸರಕಾರ ತೆಗೆಯಬಹುದು ಎಂಬ ನಿರೀಕ್ಷೆ ಇದ್ದೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+