ವೋಡಾಫೋನ್ 348 ಪ್ಲಾನ್ ಬದಲು, ಗ್ರಾಹಕರೇ ಗಮನಿಸಿ!

ನವದೆಹಲಿ, ಡಿಸೆಂಬರ್ 14: ಜಿಯೋ, ಏರ್ ಟೆಲ್ ಪ್ರೀಪೇಯ್ಡ್ ಯೋಜನೆಗಳಿಗೆ ಸೆಡ್ಡು ಹೊಡೆಯಲು ವೊಡಾಫೋನ್ ಕಂಪನಿ ತನ್ನ ಜನಪ್ರಿಯ ಯೋಜನೆಗಳಲ್ಲಿ ಬದಲಾವಣೆ ಮಾಡತೊಡಗಿದೆ. 348 ರೂಪಾಯಿಯ ಪ್ರಿಪೇಯ್ಡ್ ಆಫರ್ ಬದಲಾಗಿದೆ.

ಈಗ 348 ರೂಪಾಯಿ ರೀಚಾರ್ಜ್ ಮಾಡಿದ್ರೆ ಪ್ರತಿ ದಿನ 1 ಜಿಬಿ ಡೇಟಾಕ್ಕೆ ಬದಲಿಗೆ 2 ಜಿಬಿ ಡೇಟಾ ಸಿಗಲಿದೆ. ಹಾಗೂ ಅನಿಯಮಿತ ಕರೆ ಸೌಲಭ್ಯ, ಎಸ್ಎಂಎಸ್ ಕೂಡಾ ಲಭ್ಯ. ಆದರೆ, ಈ ಕೊಡುಗೆ ದೆಹಲಿ ಹಾಗೂ ಎನ್ ಸಿ ಆರ್ ವ್ಯಾಪ್ತಿಯ ಗ್ರಾಹಕರಿಗೆ ಮಾತ್ರ ಲಭ್ಯವಿದೆ.ಈ ಆಫರ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

Vodafone Rs. 348 Recharge Prepaid Plan revised with extra Data per day

ಈ ಯೋಜನೆ ಬಳಸುವ ಗ್ರಾಹಕರಿಗೆ ತಿಂಗಳಿಗೆ ಒಟ್ಟು 56 ಜಿಬಿ ಡೇಟಾ ದೊರೆಯುತ್ತದೆ. 3ಜಿ ಮತ್ತು 4ಜಿ ಎರಡೂ ಹ್ಯಾಂಡ್ಸೆಟ್ ಗಳಲ್ಲೂ ಈ ಆಫರ್ ಲಭ್ಯ.

ಲೋಕಲ್, ಎಸ್ ಟಿ ಡಿ ಮತ್ತು ರೋಮಿಂಗ್ ಕರೆಗಳನ್ನು ಉಚಿತವಾಗಿ ಮಾಡಬಹುದಾದರೂ ಈ ಯೋಜನೆಯಲ್ಲಿ ಉಚಿತ ಕರೆಯನ್ನು 250 ನಿಮಿಷಗಳಿಗ ನಿಗದಿಪಡಿಸಲಾಗಿದೆ. ಬಹುತೇಕ ಏರ್ಟೆಲ್ ನ ಆಫರ್ ನ ನಕಲಿನಂತೆ ಇದ್ದು, ಪೈಪೋಟಿ ಜೋರಾಗಿದೆ.

ಏರ್ಟೆಲ್ 349: ಇದರಲ್ಲಿ 349 ರೂಪಾಯಿ ರೀಚಾರ್ಜ್ ಮಾಡಿದ್ರೆ 28 ದಿನಗಳವರೆಗೆ ಪ್ರತಿನಿತ್ಯ 2 ಜಿಬಿ ಡೇಟಾ ಹಾಗೂ ಉಚಿತ ಅನಿಯಮಿತ ಕರೆಯ ಸೌಲಭ್ಯ ಸಿಗುತ್ತಿದೆ. ಜೊತೆಗೆ ಅನಿಯಮಿತ ಉಚಿತ ಎಸ್ ಎಂ ಎಸ್ ಕೂಡ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+